ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪಕ್ಷದೊಳಗಿನವರಿಗೂ, ವಿರೋಧಿಗಳಿಗೂ ಸೂಕ್ತ ಸಮಯದಲ್ಲಿ ಖಡಕ್ ಉತ್ತರ ಕೊಡ್ತೇನೆ: ಸಿಡಿದೆದ್ದ ಜಿ. ಎಂ. ಸಿದ್ದೇಶ್ವರ…!

On: October 6, 2024 9:46 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:06-10-2024

ದಾವಣಗೆರೆ: ಬಿಜೆಪಿ ಭಿನ್ನರ ಆರೋಪಗಳ ನಡುವೆಯೂ ತಣ್ಣಗಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಸಿಡಿದೆದಿದ್ದಾರೆ. ಮಾತ್ರವಲ್ಲ, ವಿರೋಧಿಗಳಿಗೂ ಠಕ್ಕರ್ ನೀಡುವ ಕೆಲಸ ಮಾಡಿದ್ದಾರೆ. ಆದ್ರೆ, ಈಗ ಉತ್ತರ ನೀಡಲ್ಲ. ಸಮಯ ಬಂದಾಗ ಪಕ್ಷದೊಳಗಿನವರಿಗೂ, ವಿರೋಧಿಗಳಿಗೂ, ನನ್ನ ಬಗ್ಗೆ ಮಾತನಾಡಿರುವವರು, ಆರೋಪ ಮಾಡಿದವರಿಗೆ ಸೂಕ್ತ ಉತ್ತರ ನೀಡೇ ನೀಡುತ್ತೇನೆ ಎಂದು ಮಾಜಿ ಸಂಸದ ಸಿದ್ದೇಶ್ವರ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಲೋಕಸಭೆ ಚುನಾವಣೆಯ ಬಳಿಕ ಯಾರ ಹೆಸರು ಹೇಳದೇ ರಾಜ್ಯ ಮತ್ತು ರಾಷ್ಟ್ರ ವರಿಷ್ಠರಿಗೆ ಸೋಲಿಗೆ ಕಾರಣ ಏನು ಎಂಬುದನ್ನು ತಿಳಿಸಿದ್ದೇನೆ. ಜಿಲ್ಲೆಯ ಕೆಲವರು ಹಾಗೂ ರಾಜ್ಯಮಟ್ಟದ ಕೆಲ ನಾಯಕರಿಂದ ಸೋಲಾಗಿದೆ ಎಂದಷ್ಟೇ ಹೇಳಿದ್ದ ಸಿದ್ದೇಶ್ವರ ಅವರು ಮೊದಲ ಬಾರಿಗೆ ಎಸ್. ಎ. ರವೀಂದ್ರನಾಥ್ ಹಾಗೂ ಎಂ. ಪಿ. ರೇಣುಕಾಚಾರ್ಯರ ಹೆಸರು ಹೇಳಿ ಸಿಟ್ಟು ಹೊರಹಾಕಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಾನೇನೂ ಹೀನಾಯವಾಗಿ ಸೋತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಅವರು ಮಾಡಿದ ತಪ್ಪು, ಕರ್ಮಕ್ಕೆ ಸೋತರೆ ನಾನೇನೂ ಮಾಡಲು ಆಗುತ್ತದೆ. ಅವರು ಹೀನಾಯವಾಗಿ ಸೋತಿದ್ದಾರೆ. ಆದ್ರೆ, ಲೋಕಸಭೆಯಲ್ಲಿ ಹೀನಾಯವಾಗಿ ನಾವು ಸೋಲಲಿಲ್ಲವೆಂದು ಅವರೇ ಕಣ್ಣೀರಾಕುತ್ತಿರಬೇಕು ಎಂದು ರವೀಂದ್ರನಾಥ್ ಹಾಗೂ ರೇಣುಕಾಚಾರ್ಯ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡಿದ್ದರೆ ಖಂಡಿತವಾಗಿಯೂ ಗೆಲ್ಲುತ್ತಿದ್ದೆ. ಆರೋಗ್ಯ ಚೆನ್ನಾಗಿದ್ದು ಓಡಾಡಿದ್ದರೆ ಜನರು ಆಶೀರ್ವಾದ ಮಾಡುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ತನ್ನ ಪತ್ನಿಯನ್ನು ಕಣಕ್ಕಿಳಿಸಲಾಯಿತು. ನನ್ನ ಆರೋಗ್ಯ ಸರಿಯಿರಲಿಲ್ಲ. ಕಿವಿ ತೊಂದರೆಯೂ ಆಗಿತ್ತು. ಕಿವಿಯಲ್ಲಿ ಹುಣ್ಣಾಗಿ 84 ಇಂಜೆಕ್ಷನ್ ಕೊಟ್ಟರು. ಹಾಗಾಗಿ, ಎಲ್ಲೆಲ್ಲಿಯೂ ಓಡಾಡಲು ಆಗಲಿಲ್ಲ. ಹೈಡೋಸ್ ಕೊಟ್ಟಿದ್ದರಿಂದ ಹೆಚ್ಚಿನ ಪ್ರಚಾರ ಮಾಡಲು ಆಗಲಿಲ್ಲ. ಹೆಚ್ಚಿನ ಹಳ್ಳಿಗಳಲ್ಲಿ ಪ್ರಚಾರ ಮಾಡಲಿಲ್ಲ. ನಿಮಗೆ ಎಲ್ಲವೂ ಗೊತ್ತಲ್ವಾ ಎಂದು ಮಾಧ್ಯಮದವರಿಗೆ ಕೇಳಿದರು.

ಕಾಲ ಬಂದಾಗ ಎಲ್ಲರಿಗೂ ಉತ್ತರ ಕೊಡುತ್ತೇನೆ. ನನ್ನ ವಿರೋಧಿಗಳು ಇರಬಹುದು. ಪಕ್ಷದವರೂ ಇರಬಹುದು. ಹಾದಿ ಬೀದಿಯಲ್ಲಿ ಮಾತನಾಡಲ್ಲ. ಪ್ರೆಸ್ ಮೀಟ್ ಮಾಡಿ ಕರೆದು ಎಲ್ಲದಕ್ಕೂ ಉತ್ತರಿಸುತ್ತೇನೆ. ಹಾದಿ ಬೀದಿಯಲ್ಲಿ ನಾವ್ಯಾರು ಮಾತನಾಡುತ್ತಿಲ್ಲ. ಅವರೇ ಮಾತನಾಡುತ್ತಿರುವುದು. ನಾನೇನೂ ಅತ್ತಿದ್ದೇನಾ? ನಾನು ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿರುವುದಕ್ಕೆ ಅವರಿಗೆ ಅಳು ಬಂದಿರಬಹುದು. ಭಾರೀ ಅಂತರದಲ್ಲಿ ಸೋಲು ಕಾಣುತ್ತಾರೆ ಎಂದು ಭಾವಿಸಿದ್ದರು. ಆದ್ರೆ, ಹಾಗೆ ಆಗಲಿಲ್ಲ. ಜನರು, ಮೋದಿ ಅವರ ಜನಪ್ರಿಯತೆಯಿಂದ ಹೆಚ್ಚು ಮತಗಳು ಬಂದಿವೆ ಎಂದು ತಿಳಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment