SUDDIKSHANA KANNADA NEWS/DAVANAGERE/DATE:14_10_2025
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲಾ ವಾರ್ಡ್‍ಗಳಿಂದ ಆಟೋ ಟಿಪ್ಪರ್‍ಗಳ ಹಸಿ ಮತ್ತು ಒಣ ಕಸಗಳಾಗಿ ವಿಂಗಡಿಸಿದ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ.
READ ALSO THIS STORY: ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!
ಪ್ರತಿನಿತ್ಯ ಸಂಗ್ರಹಿಸಲಾಗುವ ಸುಮಾರು 100 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಸಿಟಿ ಕಾಂಪೋಸ್ಟ್ ತಯಾರಿಸಲಾಗುತ್ತಿದೆ. 50 ಟನ್ ಒಣ ತ್ಯಾಜ್ಯವನ್ನು ಶ್ರೇಡಿಂಗ್ ಅಂಡ್ ಬೇಲಿಂಗ್ ಮಾಡಿ ಪರ್ಯಾಯ ಇಂಧನವಾಗಿ ಉಪಯೋಗಿಸಲು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತಿದೆ.
ಪ್ರತ್ಯೇಕವಾಗಿ ಸಂಗ್ರಹಿಸುವ 1 ರಿಂದ 2 ಟನ್‍ಗಳನ್ನು ಸ್ಯಾನಿಟರಿ ನ್ಯಾಪ್‍ಕಿನ್/ಡ್ರೈಪರ್ ಗಳಂಥ ಅಪಾಯಕಾರಿ ತ್ಯಾಜ್ಯವನ್ನು ಇನ್‍ಸಿನರೇಟ್‍ಗಳಲ್ಲಿ ಸುಡುವ ಮೂಲಕ ವೈಜ್ಞಾನಿಕವಾಗಿ ವಿಲೇಪಡಿಸಲಾಗುತ್ತಿದೆ.
ಹೀಗೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಸಂಪೂರ್ಣ ತ್ಯಾಜ್ಯವನ್ನು ವಿಲೇಪಡಿಸುತ್ತಿದ್ದು ಸಾರ್ವಜನಿಕರು ತ್ಯಾಜ್ಯವನ್ನು ಹೊರಗೆ ಎಸೆಯದೇ ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ವಿಂಗಡಿಸಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಿ ಸಹಕರಿಸುತ್ತಿರುವುದರಿಂದ ಇದು ಸಾಧ್ಯವಾಗಿದೆ.
ಕೆಲವು ಪ್ರದೇಶಗಳಲ್ಲಿ ದೂರದಿಂದ ವಾಹನಗಳಲ್ಲಿ ಬರುವ ಅನಾಗರಿಕರು ತ್ಯಾಜ್ಯವನ್ನು ಎಸೆಯುತ್ತಿರುವ ಪ್ರಕರಣಗಳು ಕಂಡುಬಂದಿದ್ದು, ನಾಗರೀಕ ಪ್ರಜ್ಞೆ ಹಾಗೂ ಪರಿಸರ ಪ್ರಜ್ಞೆಯನ್ನು ರೂಢಿಸಿ ಕೊಳ್ಳುವಂತೆ ಮನವಿ ಮಾಡುತ್ತಾ ಅ.20 ರಿಂದ 22 ರವರೆಗೆ ಆಚರಿಸಲಾಗುವ ನರಕ ಚತುರ್ದಶಿ, ದೀಪಾವಳಿ ಹಾಗೂ ಬಲಿಪಾಡ್ಯಮಿ ದಿನಗಳಂದು ಪೂಜಾ ಕಾರ್ಯಗಳಲ್ಲಿ ಉಪಯೋಗಿಸುವ ಬಾಳೆಕಂಬ, ತೋರಣ, ಹೂ ಗಳಂತಹ ಪವಿತ್ರ ತ್ಯಾಜ್ಯವನ್ನು ಹಬ್ಬದ ನಂತರ ಸಾರ್ವಜನಿಕರು, ಬೀಡಾಡಿ ನಾಯಿ ಹಂದಿಗಳು ತುಳಿದಾಡುವಂತೆ ಹೊರಗೆ ಎಸೆಯದೇ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟ ಕಡ್ಡಾಯವಾಗಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡುವಂತೆ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಮಕ್ಕಳ, ಹಿರಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪಟಾಕಿಗಳನ್ನು ಸಿಡಿಸದೇ ದೀಪಗಳನ್ನು ಹಚ್ಚುವ ಮೂಲಕ ಸ್ವಚ್ಛ-ಶುಭ ದೀಪಾವಳಿಯನ್ನಾಗಿ ಆಚರಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.