SUDDIKSHANA KANNADA NEWS/ DAVANAGERE/ DATE-27-04-2025
ಶಿವಮೊಗ್ಗ: ಹತ್ತೊಂಬತ್ತು ವರ್ಷದ ಯುವತಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಬಂದಿಲ್ಲ. ಪೋಷಕರು ವಿಚಾರಿಸುವ ಕೆಲಸ ಮಾಡಿದರೂ ಪತ್ತೆ ಆಗಿಲ್ಲ.
ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದ ಸುರೇಶ್ ಎಂಬುವವರ 19 ವರ್ಷದ ಮಗಳು ಪ್ರಿಯಾಂಕ ಅಲಿಯಾಸ್ ಪಾರ್ವತಿ ಎಂಬ ಯುವತಿ ಬ್ರಹ್ಮಾವರದ ಸತ್ಯನಾಥ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಏ.21ರಂದು ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದಾಳೆ. ಆದ್ರೆ, ಆ ನಂತರ ಫೋನ್ ಕರೆ ಸ್ವೀಕರಿಸಿಲ್ಲ. ಜೊತೆಗೆ ಈವರೆಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ.
ಈಕೆಯ ಚಹರೆ ತೆಳುವಾದ ಮೈಕಟ್ಟು, 4 ಅಡಿ 5 ಇಂಚು ಎತ್ತರ, ಕೋಲುಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡಕೈ ಮುಂಗೈ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ MOM – DAD ಮತ್ತು Priya ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾಳೆ.
ಕನ್ನಡ ಮಾತನಾಡಲು, ಓದಲು ಬರೆಯಲು ಬಲ್ಲವಳಾಗಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.
ಈ ಯುವತಿ ಪತ್ತೆಯಾದಲ್ಲಿ ಶಿವಮೊಗ್ಗಜಿಲ್ಲೆ: 08182-261400, ತೀರ್ಥಹಳ್ಳಿ: 08181 –220388, ಮಾಳೂರು: 9480803333, ಆಗುಂಬೆ: 9480803314 ಈ ನಂಬರ್ ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.