ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೀವು ಬಳಸೋ ತುಪ್ಪ ಅಸಲಿಯೋ, ನಕಲಿಯೋ ಗೊತ್ತಾಗ್ತಿಲ್ವಾ? ಹೀಗೆ ಮಾಡಿ!

On: September 25, 2024 10:58 AM
Follow Us:
---Advertisement---

ಅನೇಕ ಮಂದಿ ಆಹಾರದ ರುಚಿಯನ್ನು ಹೆಚ್ಚಿಸಲು ತುಪ್ಪವನ್ನು ಸೇವಿಸುತ್ತಾರೆ. ಜೊತೆಗೆ ಪೌಷ್ಠಿಕಾಂಶದ ತುಪ್ಪವು ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಅನೇಕ ಮಂದಿ ಆರೋಗ್ಯಕರ ಜೀವನಶೈಲಿಯನ್ನು ಆನಂದಿಸಲು ಮಾರುಕಟ್ಟೆಯಿಂದ ತುಪ್ಪವನ್ನು ಖರೀದಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ನಕಲಿ ದೇಸಿ ತುಪ್ಪ ಕೂಡ ಸಂಪೂರ್ಣವಾಗಿ ಶುದ್ಧವಾಗಿರುವುದಿಲ್ಲ ಎಂಬುದು ನಿಮಗೆ ಗೊತ್ತೇ ಇದೆ.

ಕಲಬೆರಕೆಯ ತುಪ್ಪದ ಸೇವನೆಯಿಂದ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಂದ ತುಪ್ಪವು ಶುದ್ಧವಾಗಿದೆಯೇ ಎಂದು ಈ ಕೆಲವು ವಿಧಾನದ ಮೂಲಕ ಪತ್ತೆ ಹಚ್ಚಬಹುದು. ಶುದ್ಧ ತುಪ್ಪವನ್ನು ಪತ್ತೆಹಚ್ಚಲು ಇಲ್ಲಿದೆ ಸರಳ ವಿಧಾನಗಳು:- ಒಂದು ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಹದವಾಗಿ ಉಜ್ಜಿಕೊಳ್ಳಬೇಕು. ತುಪ್ಪ ಅಂಗೈಯಲ್ಲಿ ಕರಗಿದರೆ ಅದು ಶುದ್ಧ ತುಪ್ಪವಾಗಿದೆ ಎಂದರ್ಥ. ಒಂದು ವೇಳೆ ಅಂಗೈಯಲ್ಲಿ ಕರಗದೇ ಗಟ್ಟಿ ಗಟ್ಟಿ ವಸ್ತು ಹಾಗೆಯೇ ಉಳಿದಿದೆ ಎಂದರೆ ಅದರಲ್ಲಿ ಕಲಬೆರಕೆಯ ವಸ್ತುಯಿದೆ ಎಂದು ತಿಳಿಯಿರಿ. ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಒಂದು ಪಾರದರ್ಶಕವಾದ ಬಾಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಬೇಕು. ನಂತರದಲ್ಲಿ ಆ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಬೇಕು. ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಕೆಂಪು ಬಣ್ಣದ ಗೆರೆಗಳು ಬಾಟಲಿಯ ತಳದಲ್ಲಿ ಕಂಡು ಬಂದರೆ ಈ ತುಪ್ಪವು ಶುದ್ಧವಾಗಿಲ್ಲ ಎನ್ನುವುದು ಖಚಿತವಾಗುತ್ತದೆ. ಮಾರುಕಟ್ಟೆಯಿಂದ ತಂದ ತುಪ್ಪದಲ್ಲಿ ಕಲಬೆರಕೆಯನ್ನು ಗುರುತಿಸಲು ಅದಕ್ಕೆ ನಾಲ್ಕೈದು ಹನಿ ಅಯೋಡಿನ್ ಸೇರಿಸಬೇಕು.

ಒಂದು ವೇಳೆ ತುಪ್ಪವು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ. ತುಪ್ಪದ ಗುಣಮಟ್ಟವನ್ನು ನಿರ್ಧರಿಸಲು ಕೈಗೆ ಸ್ವಲ್ಪ ತುಪ್ಪವನ್ನು ಹಾಕಿ ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಪರಿಮಳಯುಕ್ತವಾಗಿದ್ದರೆ ಅದು ಶುದ್ಧ ತುಪ್ಪ, ಸ್ವಲ್ಪ ಸಮಯದ ನಂತರ ತುಪ್ಪದ ವಾಸನೆಯು ಹೋದರೆ ಕಲಬೆರಕೆಯ ತುಪ್ಪವಾಗಿರುತ್ತದೆ. ಶುದ್ಧ ತುಪ್ಪವಾಗಿದ್ದರೆ ಮಣಿ ಮಣಿಯಂತೆ ಇದ್ದು, ಬಿಸಿ ಮಾಡಿದಾಗ ಎಣ್ಣೆಯಂತೆ ಕಾಣುತ್ತದೆ. ಅದಲ್ಲದೆ ಮೇಲ್ಮೈಯಲ್ಲಿ ವ್ಯತ್ಯಾಸವಾಗಿ ಅದು ಹೊಂಬಣ್ಣದಲ್ಲಿ ಕರಗಿದರೆ ಕಲಬೆರಕೆಯಾಗಿಲ್ಲ. ಒಂದು ವೇಳೆ ತಿಳಿ ಹಳದಿ, ಬಿಳಿ ಬಣ್ಣದಲ್ಲಿದ್ದರೆ ಅದು ನಕಲಿ ತುಪ್ಪವೆಂದು ಖಚಿತವಾಗುತ್ತದೆ. ಕಲಬೆರಕೆಯ ತುಪ್ಪವು ನೋಡಲು ದಪ್ಪವಾಗಿರುತ್ತದೆ. ತುಪ್ಪಕ್ಕೆ ಎಣ್ಣೆಯನ್ನು ಕಲಬೆರಕೆ ಮಾಡಲಾಗುತ್ತದೆ. ಈ ತುಪ್ಪದಲ್ಲಿ ಎಣ್ಣೆಯನ್ನು ಬೆರೆಸಲಾಗಿದೆಯೇ ಎಂದು ತಿಳಿಯಲು ತುಪ್ಪವನ್ನು ಕಾಯಿಸಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಎರಡು ಪದರಗಳು ಕಾಣಿಸಿಕೊಳ್ಳುತ್ತದೆ. ತುಪ್ಪ ಹಾಗೂ ತೆಂಗಿನೆಣ್ಣೆಯ ಪ್ರತ್ಯೇಕವಾದ ಪದರಗಳು ಇದ್ದರೆ ಕಲಬೆರಕೆಯಾಗಿದೆ ಎನ್ನಬಹುದು.

Join WhatsApp

Join Now

Join Telegram

Join Now

Leave a Comment