SUDDIKSHANA KANNADA NEWS/ DAVANAGERE/ DATE:08-09-2024
ದಾವಣಗೆರೆ: ದೇಶದ ಪ್ರಖ್ಯಾತ ಪತ್ರಿಕೆ ದಿ ಎಕಾನಮಿಕ್ಸ್ ಟೈಮ್ಸ್ ಭಾರತ ದೇಶಾದ್ಯಂತ ನಡೆಸಿದ ಸರ್ವೆಯಲ್ಲಿ ಟಾಪ್ 5 ಸೂಪರ್ ಸ್ಟಾರ್ ಎಜುಕೇಟರ್ ಎಂಬ ಕೀರ್ತಿಗೆ ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಪಾತ್ರರಾಗಿದ್ದಾರೆ. ಈ ಮೂಲಕ ದೇಶಾದ್ಯಂತ ಜನಪ್ರಿಯ ವ್ಯಕ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಇದು ದೇಶಾದ್ಯಂತ ಸಂಚಲನ ಸೃಷ್ಟಿಸುವ ಜೊತೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಸೂಪರ್ ಸ್ಟಾರ್ ಎಜುಕೇಟರ್ ಎಂದು ಜಿ. ಬಿ. ವಿನಯ್ ಕುಮಾರ್ ಅವರನ್ನು ಗುರುತಿಸಿದ್ದು, ಇದು ಪ್ರತಿಷ್ಠಿತ ಗೌರವವೂ ಹೌದು. ಶಿಕ್ಷಕರ ದಿನಾಚರಣೆ ದಿನದಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಯುಪಿಎಸ್ ಸಿ ಫಲಿತಾಂಶ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ, ಯಶಸ್ಸು, ಶೂನ್ಯದಿಂದ ಸಂಸ್ಥೆ ಆರಂಭಿಸಿ ದೇಶಾದ್ಯಂತ ಗಳಿಸಿರುವ ಜನಪ್ರಿಯತೆ, ಕೌಶಲ್ಯ, ಪರಿಶ್ರಮ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೌರವ ನೀಡಲಾಗಿದೆ.
ಘಟಾನುಘಟಿಗಳ ಮಧ್ಯೆಯೂ ಗೌರವ:
ಬಿಲಿನಿಯರ್ ಗಳು ಹೂಡಿಕೆ ಮಾಡಿದ ಸಂಸ್ಥೆಗಳನ್ನು ಹೊಂದಿರುವವರ ಜೊತೆಗೆ ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಿಸಿ, ಕಡಿಮೆ ಅವಧಿಯಲ್ಲಿ ರಾಜಕಾರಣದಲ್ಲಿ ಗಳಿಸಿದ ಜನಪ್ರಿಯತೆ, ಜನಬೆಂಬಲ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ವಿನಯ್ ಕುಮಾರ್ ಅವರ ಸಾಧನೆಯಲ್ಲಿ ಗಮನಾರ್ಹ ಅಂಶ. ಇನ್ನು ಘಟಾನುಘಟಿಗಳ ನಡುವೆ ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದ ವಿನಯ್ ಕುಮಾರ್ ಅವರು ಈ ಗೌರವಕ್ಕೆ ಪಾತ್ರರಾಗುವ ಮೂಲಕ ಕೇವಲ ದಾವಣಗೆರೆ ಜಿಲ್ಲೆ, ಕರ್ನಾಟಕ ಮಾತ್ರವಲ್ಲ, ಇಡೀ ಭಾರತ ದೇಶದಲ್ಲಿಯೇ ಹೆಸರು ಸಂಪಾದನೆ ಮಾಡಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
ಐಎಎಸ್, ಐಪಿಎಸ್ ಹಬ್ ಕರ್ನಾಟಕ ಮಾಡಿದ್ದೇ ಜಿಬಿವಿ:
ಕರ್ನಾಟಕ ರಾಜ್ಯವನ್ನು ಐಎಎಸ್, ಐಪಿಎಸ್ ಹಬ್ ಮಾಡಿರುವ ಕೀರ್ತಿಗೆ ಪಾತ್ರರಾಗಿರುವ ಜಿ. ಬಿ. ವಿನಯ್ ಕುಮಾರ್ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅತ್ಯಂತ ಕಡಿಮೆ ಅವಧಿಯಲ್ಲಿ ಜನಮನ್ನಣೆ ಗಳಿಸಿದ್ದು, ಯುವಕ, ಯುವತಿಯರು ಸೇರಿದಂತೆ 43 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಇಡೀ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಗಳಿಸಿದ ಹೆಚ್ಚಿನ ಮತಗಳು ಆಗಿದ್ದವು ಎಂಬ ಅಂಶವನ್ನು ಈ ಗೌರವ ನೀಡಲು ಪರಿಗಣಿಸಲಾಗಿದೆ.
ಗೌರವಕ್ಕೆ ಪಾತ್ರರಾದ ವಿನಯ್ ಕುಮಾರ್ ಏನಂದ್ರು…?
ಜಿ. ಬಿ. ವಿನಯ್ ಕುಮಾರ್ ಅವರು ಟಾಪ್ 5 ಸೂಪರ್ ಸ್ಟಾರ್ ಎಜುಕೇಟರ್ ಎಂಬ ಗೌರವ ನೀಡಿರುವುದು ತುಂಬಾ ಸಂತಸ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲಾ ವರ್ಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮುಂದೆ ಬರಬೇಕು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕು. ಐಎಎಸ್, ಐಪಿಎಸ್, ಕೆಎಎಸ್ ಕನಸು ನನಸು ಮಾಡಿಕೊಳ್ಳಬೇಕು ಎಂಬ ಬಯಕೆ ಹೊಂದಿರುತ್ತಾರೆ. ಇದಕ್ಕೆ ಇನ್ಸೈಟ್ಸ್ ಸಂಸ್ಥೆ ವೇದಿಕೆ ಕಲ್ಪಿಸಲಿದೆ. ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ಜಿಲ್ಲೆಯ ಜನತೆ ತೋರಿದ ಪ್ರೀತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸವೆಸಿದ ಹಾದಿ:
ಜಿ. ಬಿ. ವಿನಯ್ ಕುಮಾರ್ ಹುಟ್ಟು ಶ್ರೀಮಂತರಲ್ಲ. ಕುಟುಂಬದವರ ನೀಡಿದ ಶಿಕ್ಷಣವನ್ನೇ ಬಳಸಿಕೊಂಡು ಇಷ್ಟೊಂದು ಎತ್ತರಕ್ಕೆ ಬೆಳೆದವರು. ವಿನಯ್ ಕುಮಾರ್ ಜಿ. ಬಿ. ಅವರು 2010 ರಲ್ಲಿ ಎರಡು ಅಂಕಗಳಿಂದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಳ್ಳುವಂತಾಯಿತು.
2009 ರಿಂದ 2011 ರವರೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿವದರು. ಅವರು ಕರ್ನಾಟಕ ಆಡಳಿತ ಸೇವೆಯನ್ನು ತೆರವುಗೊಳಿಸಿ 2013 ರಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾದರು. ಆದಾಗ್ಯೂ, ಈ ಪರೀಕ್ಷೆ ಬಳಿಕ ಅಕ್ರಮ ಮತ್ತು ಭ್ರಷ್ಟಾಚಾರದ ಕಾರಣ ರದ್ದುಗೊಳಿಸಲಾಯಿತು. ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದ ವಿನಯ್ ಕುಮಾರ್ ಅದನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.
ನಾನು 2006 ರಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ನನ್ನ ಬ್ಲಾಗ್ ಅನ್ನು ಪ್ರಾರಂಭಿಸಿದೆ, ಅಲ್ಲಿ ನಾನು ಪರೀಕ್ಷೆಯ ತಯಾರಿಯ ಬಗ್ಗೆ ಬರೆದು ಇತರರಿಗೆ ಮಾರ್ಗದರ್ಶನ ನೀಡಲು ಶುರು ಮಾಡಿದೆ. 2013ರಲ್ಲಿ, ನಾನು ನಿರುದ್ಯೋಗಿಯಾದಾಗ, ಅದೇ ವರ್ಷ CSE ಮಾದರಿಯನ್ನು ಬದಲಾಯಿಸಿದೆ. ಹೊಸ ನಮೂನೆ ಮತ್ತು ಪರೀಕ್ಷೆಯ ತಯಾರಿಯ ಕುರಿತು ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದೆ. 2014 ರಲ್ಲಿ ಕೇಂದ್ರ ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಆರಂಭಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇಂದ್ರದಲ್ಲಿ ಅಧ್ಯಯನ ಮಾಡಲು ಬಯಸಿದ್ದರು. ನಾವು ಫಿಲ್ಟರ್ ಮಾಡಿ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆವು. 40 ವಿದ್ಯಾರ್ಥಿಗಳ ಪೈಕಿ ಐವರು CSE 2014-4 ರಲ್ಲಿ IAS ಮತ್ತು 583K IRS ನಲ್ಲಿ ರ್ಯಾಂಕ್ ಗಳನ್ನು ಪಡೆದರು.
ವಿದ್ಯಾರ್ಥಿಯೊಬ್ಬರು CSE ನಲ್ಲಿ ಅಖಿಲ ಭಾರತದಲ್ಲಿ ಒಂದನೇ ರ್ಯಾಂಕ್ ಪಡೆದರು. ಆ ಬಳಿಕ ಹಿಂದುರಿಗಿ ನೋಡಲೇ ಇಲ್ಲ. 2017ರಲ್ಲಿ 250 ವಿದ್ಯಾರ್ಥಿಗಳು ಸೇರಿದರು. ಕ್ರಮೇಣ ಹೆಚ್ಚಾಗುತ್ತಾ ಹೋಯಿತು. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೇವಲ ಆಫ್‌ಲೈನ್ ಕೋಚಿಂಗ್ ಅನ್ನು ಹೊಂದಿದ್ದೇವೆ” ಎಂದು ವಿನಯ್ ಕುಮಾರ್ ತಿಳಿಸುತ್ತಾರೆ.
InsightsIAS ನ ಯಶಸ್ಸಿನ ಆಧಾರದ ಮೇಲೆ ವಿನಯ್ ಕುಮಾರ್ ಜಿಬಿ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು. 2024 ರ ಲೋಕಸಭಾ ಚುನಾವಣೆಯ ಮೊದಲು ಕಾಂಗ್ರೆಸ್‌ಗೆ ಸೇರಿದರು. ಟಿಕೆಟ್ ನಿರಾಕರಿಸಿದ ಅವರು ಕರ್ನಾಟಕದ ದಾವಣಗೆರೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರು. ಸೋತರೂ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿದರು. ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದ ಎಲ್ಲಾ ಲೋಕಸಭೆ ಕ್ಷೇತ್ರಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಮತ ಪಡೆದ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಎನ್ನುವ ಕೀರ್ತಿಗೆ ಪಾತ್ರರಾದರಲ್ಲದೇ, ರಾಷ್ಟ್ರೀಯ ಪಕ್ಷಗಳ ನಿದ್ದೆಕೆಡಿಸಿರುವ ಯುವ ನಾಯಕ.
InsightsIAS ಸಂಸ್ಥೆ ಕಟ್ಟುವ ಮೂಲಕ ನಾನು ರಾಜಕೀಯಕ್ಕೆ ಸೇರುವ ಧೈರ್ಯ ಪಡೆದೆ. ಕೇವಲ ಟೀಕಿಸುವ ಬದಲು, ಎಲ್ಲರಂತೆ ರಾಜಕೀಯ ಮಾಡುವ ಬದಲು ಬದಲಾವಣೆ ತರಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆ.
ಉತ್ತಮ ಅಭಿವೃದ್ಧಿ ಕೆಲಸ ಮಾಡಬೇಕು. ಶೈಕ್ಷಣಿಕವಾಗಿ ಕ್ರಾಂತಿ ಆಗಬೇಕು. ಎಲ್ಲಾ ವರ್ಗದ ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಐಎಎಸ್, ಐಪಿಎಸ್ ಪಾಸ್ ಆಗಬೇಕು. ರಾಜಕೀಯ ಪ್ರಜ್ಞೆ ಬರುವಂತಾಗಬೇಕು. ಅಧಿಕಾರಶಾಹಿಗಳು, ಬಂಡವಾಳಶಾಹಿಗಳ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಿದೆ ಎಂಬ ಧ್ಯೇಯೋದ್ದೇಶದೊಂದಿಗೆ ರಾಜಕೀಯವಾಗಿ ಸಂಚಲನ ಮೂಡಿಸುತ್ತಿದ್ದಾರೆ.