Home ಕ್ರೈಂ ನ್ಯೂಸ್ ಸೆ. 20ರಿಂದ ಹೋಂಸ್ಟೇನಲ್ಲಿ ಪ್ರಿಯಕರನೊಂದಿಗೆ ಇದ್ದ ಹಿಂದೂ ವಿದ್ಯಾರ್ಥಿನಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಳಾ? ಆತ್ಮಹತ್ಯೆ ನಾಟಕವೇ? ಪ್ರಿಯಕರ ಆಸಿಫ್ ಅಲಿ ಬಂಧನ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸೆ. 20ರಿಂದ ಹೋಂಸ್ಟೇನಲ್ಲಿ ಪ್ರಿಯಕರನೊಂದಿಗೆ ಇದ್ದ ಹಿಂದೂ ವಿದ್ಯಾರ್ಥಿನಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಳಾ? ಆತ್ಮಹತ್ಯೆ ನಾಟಕವೇ? ಪ್ರಿಯಕರ ಆಸಿಫ್ ಅಲಿ ಬಂಧನ!

Share
ಪ್ರಿಯಕರ
Share

ಗುವಾಹಾಟಿ (ಅಸ್ಸಾಂ): ಅಸ್ಸಾಂನ ಗುವಾಹಾಟಿಯ ಆಜಾರಾ ಪ್ರದೇಶದಲ್ಲಿರುವ ‘ರುದ್ರಾಸ್ ಕಿಚನ್’ ಹೋಮ್‌ಸ್ಟೇನಲ್ಲಿ ಗುವಾಹಾಟಿ ವಿಶ್ವವಿದ್ಯಾಲಯದ 22 ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿನಿ ನಿಮಿಷಾ ಠಾಕೂರೀಯಾ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಹಾಗೂ ಮುಖ್ಯ ಆರೋಪಿ ಆಸಿಫ್ ಅಲಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಮಾತ್ರವಲ್ಲ ಆತನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ವಿವರ:

ಧಾರಾಪುರ ನಿವಾಸಿಯಾಗಿರುವ ನಿಮಿಷಾ ಠಾಕೂರೀಯಾ, ಸೆಪ್ಟೆಂಬರ್ 20 ರಿಂದ ಆಸಿಫ್ ಅಲಿ ಜೊತೆಗೆ ಗಾರ್ಚುಕ್-ಧಾರಾಪುರ ರಸ್ತೆಯಲ್ಲಿರುವ ಹೋಮ್‌ಸ್ಟೇನಲ್ಲಿ ತಂಗಿದ್ದರು ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ನಿಮಿಷಾ ಕೊಠಡಿಯಲ್ಲಿ ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆರೋಪಿಯ ಹೇಳಿಕೆ ಮತ್ತು ತಾಯಿಗೆ ಬಂದ ಕರೆ:

ಆರೋಪಿ ಆಸಿಫ್ ಅಲಿ ಪೊಲೀಸರ ಎದುರು, “ನಿಮಿಷಾ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಹೇಳಿಕೆ ನೀಡಿದ್ದಾನೆ. ಆದರೆ, ನಿಮಿಷಾ ಸಾವಿಗೂ ಮುನ್ನ ತನ್ನ ತಾಯಿಗೆ ಕರೆ ಮಾಡಿ, “ಆಸಿಫ್ ಅಲಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾನೆ” ಎಂದು ತಿಳಿಸಿದ್ದರು ಎನ್ನಲಾಗಿದೆ. ಈ ಕರೆಯ ತಕ್ಷಣವೇ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.

ಪೊಲೀಸ್ ತನಿಖೆ ಹಾಗೂ ಸಾರ್ವಜನಿಕ ಪ್ರತಿಭಟನೆ:

ಗುವಾಹಾಟಿ ಪಶ್ಚಿಮ ವಿಭಾಗದ ಡಿಸಿಪಿ ಬೋಲಿನ್ ಡಿಯೋರಿ ಮಾತನಾಡಿ, “ಆರೋಪಿಯ ಆತ್ಮಹತ್ಯೆಯ ಹೇಳಿಕೆಯನ್ನು ನಾವು ತಕ್ಷಣವೇ ಒಪ್ಪಿಕೊಳ್ಳುವುದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಕರಣವನ್ನು ಪ್ರತಿಯೊಂದು ಕೋನದಿಂದ ತನಿಖೆ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತ ವಿದ್ಯಾರ್ಥಿನಿಯ ನಿಗೂಢ ಸಾವು ಕೃತ್ಯವೆಂದು ಶಂಕಿಸಿರುವ ಸ್ಥಳೀಯರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಹೆದ್ದಾರಿ-17 (NH-17) ರಸ್ತೆಯನ್ನು ತಡೆದು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles