ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿದ್ಧಗಂಗಾ ಪರಿಸರ ಸ್ನೇಹಿ ಗಣಪ ಹರಿಹರದ ತುಂಗಾಭದ್ರೆಯ ಮಡಿಲಲ್ಲಿ ವಿಸರ್ಜನೆ

On: September 11, 2025 6:11 PM
Follow Us:
ಗಣಪ
---Advertisement---

SUDDIKSHANA KANNADA NEWS/ DAVANAGERE/DATE:11_09_2025

ದಾವಣಗೆರೆ: ನಗರದ ಮನೆ ಮಾತಾಗಿದ್ದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪರಿಸರ ಸ್ನೇಹಿ ಪೇಪರ್‌ ಗಣಪತಿ 15 ದಿನಗಳ ಶ್ರದ್ಧಾಭಕ್ತಿಯ ಪೂಜೆ ಸ್ವೀಕರಿಸಿ ಇಂದು ಹರಿಹರದ ತುಂಗಭದ್ರೆಯ ಮಡಿಲು ಸೇರಿದನು.

READ ALSO THIS STORY: BIG BREAKING: ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್ ಬಗ್ಗೆ ಅವಹೇಳನ: ಎಫ್ಐಆರ್ ದಾಖಲು!

ಶಾಲಾ ಕಾಲೇಜಿನ ಆರು ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಸಂಸ್ಥೆಯ ಮಂಟಪದಲ್ಲಿ ಭವ್ಯವಾಗಿ, ಸುಂದರವಾಗಿ, ಹಸನ್ಮುಖಿಯಾಗಿ ಕಂಗೊಳಿಸುತ್ತಿದ್ದ ಗಣಪನನ್ನು ಭಾರವಾದ ಹೃದಯದಿಂದ ಬೀಳ್ಕೊಟ್ಟರು.

ವಿಧಿವತ್ತಾದ ಪೂಜೆ, ಭಕ್ತಿಗೀತೆಗಳ ಸಿಂಚನ ಜೊತೆಗೆ ಬ್ಯಾಂಡ್‌ಸೆಟ್ನ ಹಿನ್ನಲೆ ವಿದಾಯಕ್ಕೊಂದು ಅರ್ಥಪೂರ್ಣ ಕಳೆ ನೀಡಿತ್ತು. ಮುನ್ನಾ ದಿನ ಮನೆಮನೆಯಿಂದ ಮಕ್ಕಳು ತಂದ ಪುಳಿಯೋಗರೆ ಪ್ರಸಾದವನ್ನು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮಿಳಿತಗೊಳಿಸಿ ಎಲ್ಲರಿಗೂ ಹಂಚಲಾಯಿತು.

ಮಕ್ಕಳ ಜೊತೆ ಪಾಲಕರೂ ಸಹ ಪ್ರಸಾದ ಸ್ವೀಕರಿಸಿದರು. ಶಾಲೆಯ ಚಿತ್ರಕಲಾ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತಯಾರಿಸಿದ 12 ಅಡಿ ಎತ್ತರದ ಈ ಭವ್ಯ ಪೇಪರ್‌ ಗಣಪತಿ ಪರಂಪರೆಗೆ ಇದು 13ನೇ ವರ್ಷ. ಗಣಪತಿ ಹಬ್ಬಕ್ಕೆ ಒಂದು ವಾರವಿದೆ ಎಂದಾಗ ಈ ಬೃಹತ್‌ ಗಣಪತಿಯು ಹಂತ ಹಂತವಾಗಿ ರೂಪುಗೊಂಡು ಹಬ್ಬದ ಹಿಂದಿನ ದಿನ ಮಂಟಪದಲ್ಲಿ ವಿರಾಜಮಾನನಾಗುತ್ತಾನೆ.

ಸಿದ್ಧಗಂಗಾ ಸಂಸ್ಥೆಯ ಈ ವಿಶಿಷ್ಠ ಸಂಪ್ರದಾಯ ಮಕ್ಕಳಲ್ಲಿ ಭಾವೈಕ್ಯತೆ, ಸಂಘಟನೆ ಮತ್ತು ಸಹಕಾರ ಭಾವನೆ  ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್‌, ಕಾರ್ಯದರ್ಶಿ ಹೇಮಂತ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಉತ್ಸವ ಶಿಕ್ಷಣದ ಒಂದು ಅವಿಭಾಜ್ಯ ಅಂಗವೆನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಮಂಗಳವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2025: ಈ ರಾಶಿಯವರಿಗೆ ಧನ ಲಾಭ 

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

ದಾವಣಗೆರೆ

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

ದಾವಣಗೆರೆ

ದಾವಣಗೆರೆ ವಿವಿ ಅಂತರಕಾಲೇಜು ಭಾರ ಎತ್ತುವ ಸ್ಪರ್ಧೆ: ಹೊನ್ನೂರು ಗೊಲ್ಲರಹಟ್ಟಿ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

ಪ್ರಭಾ ಮಲ್ಲಿಕಾರ್ಜುನ್

ಅರಣ್ಯ ಇಲಾಖೆ ಹುದ್ದೆಗಳ ನೇರ ನೇಮಕಾತಿಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ವಿದ್ಯಾರ್ಥಿಗಳ ಮನವಿ

ಆರ್ ಎಸ್ ಎಸ್

ಆರ್ ಎಸ್ ಎಸ್ ಬ್ಯಾನ್ ವಿಚಾರಕ್ಕೆ ಕೇಸರಿ ಪಡೆ ನಿಗಿನಿಗಿ, ತಾಕತ್ತೇನೆಂದು ತೋರಿಸ್ತೇವೆ: ಬಿಜೆಪಿ ನಾಯಕರ ಸವಾಲ್!

Leave a Comment