SUDDIKSHANA KANNADA NEWS/ DAVANAGERE/DATE:30_08_2025
ದಾವಣಗೆರೆ: ಗಣೇಶ ಹಬ್ಬದ ಪೆಂಡಾಲ್ ನಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಹುಟ್ಟಿದ್ದು, ಈ ಹಬ್ಬ ಕ್ರಾಂತಿಕಾರಿಗಳನ್ನ ಹುಟ್ಟು ಹಾಕುವ ಕಾರ್ಖಾನೆಯಾಗಿ ಮಾರ್ಪಟ್ಟಿತ್ತು ಎಂದು ಯುವ ವಾಗ್ಮಿ, ಲೇಖಕಿ ಹಾರಿಕಾ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
READ ALSO THIS STORY: BIG BREAKING: ದಾವಣಗೆರೆಯ ಮಟ್ಟಿಕಲ್ ಫ್ಲೆಕ್ಸ್ ವಿವಾದ: ಪಿಎಸ್ಐ ಸಚಿನ್ ಸೇರಿ ಮೂವರ ಸಸ್ಪೆಂಡ್!
ನಗರದ ಹಳೇ ಕುಂದುವಾಡದಲ್ಲಿ ಹಿಂದೂ ಯುವ ಸೇನಾ ವತಿಯಿಂದ 79ನೇ ಸ್ವಾತಂತ್ರ್ಯ ವರ್ಷ, ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಗಣೇಶ ಹಬ್ಬದ ಅಂಗವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣರ ಪಾತ್ರ, ಸ್ವತಂತ್ರ ಹೋರಾಟದಲ್ಲಿ ಗಣೇಶ ಚತುರ್ಥಿಯ ಹಬ್ಬ ಬಂದಿದ್ದು ಹೇಗೆ, ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ ಎಂಬ ವಿಷಯಗಳ ಕುರಿತು ನಡೆದ ದಿಕ್ಸೂಚಿ ಭಾಷಣ ಕಾರ್ಯಕ್ರಮದಲ್ಲಿ ಅವರು ಅಬ್ಬರದ ಭಾಷಣ ಮಾಡಿದರು.
ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಲೆಂದೆ ಬಾಲಗಂಗಾಧರ ತಿಲಕ್ ರವರು ಗಣೇಶ ಚತುರ್ಥಿ ಪ್ರಾರಂಭ ಮಾಡಿದರು, ಈ ಒಂದು ಹಬ್ಬ ದೇಶದ ಜನರ ಒಗ್ಗೂಡಿಕೆಗೆ ಸಾಕ್ಷಿಯಾಗಿ ಮುಂದೆ ಸ್ವಾತಂತ್ರ್ಯೋತ್ಸವಕ್ಕೂ ಕಾರಣವಾಯಿತು, ವೀರ ಸಾವರ್ಕರ್ ಅವರ ಪ್ರಥಮ ಭಾಷಣ ನಡೆದಿದ್ದೆ ಗಣೇಶೋತ್ಸವದ ಪೆಂಡಲ್ ನಲ್ಲಿ ಕ್ರಾಂತಿಕಾರಿಗಳು ಹುಟ್ಟಿಕೊಂಡಿದ್ದೆ ಗಣೇಶೋತ್ಸವ ಕಾರ್ಯಕ್ರಮಗಳಿಂದ ಗಣೇಶನ ಹಬ್ಬ ಕ್ರಾಂತಿಕಾರಿಗಳ ಕಾರ್ಖಾನೆಯಾಗಿ ಮಾರ್ಪಟ್ಟು ಮುಂದೆ ಸ್ವತಂತ್ರದ ಕಿಚ್ಚು ಹಚ್ಚಿಸುವಲ್ಲಿ ಪ್ರಮುಖ ಘಟ್ಟವಾಗಿತ್ತು ಎಂದರು.
ಆರು ಅಡಿ ಎತ್ತರದ ದೇಹ ಹೊಂದಿದ್ದ ಸಂಗೊಳ್ಳಿ ರಾಯಣ್ಣ ಅವರ ಜೀವನವೇ ಆದರ್ಶ, ಹುಟ್ಟಿದರೆ ಈ ನಾಡಿಗಾಗಿ ಎಂಬ ಸಂದೇಶ ಕೊಟ್ಟು ಹೋದವರು ನಮ್ಮ ಸಂಗೊಳ್ಳಿ ರಾಯಣ್ಣ ರಾಯಣ್ಣನವರು, ಅವರ ಇಡೀ ಜೀವನ ದೇವನಿರ್ಮಿತ, ಅವರು ಹುಟ್ಟಿದ್ದು ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾವಾದರೆ, ಹುತಾತ್ಮರಾಗಿದ್ದು ಜನವರಿ 26 ನಮಗೆ ಗಣರಾಜ್ಯೋತ್ಸವ, ಎರಡು ದಿನವೂ ಭಾರತ ದೇಶದ ಸೌಭಾಗ್ಯದ ದಿನವಾಗಿದೆ ಎಂದರು.
500 ವರ್ಷಗಳ ಹೋರಾಟದ ನಂತರ 78 ಮಹಾ ಕದನದ ನಂತರ ಲಕ್ಷ ಲಕ್ಷ ಜನರ ಹಿಂದೂ ಕಾರ್ಯಕರ್ತರ ಬಲಿದಾನ ನಂತರ ಶತಮಾನಗಳ ಕನಸು ಅಯೋಧ್ಯೆ ರಾಮ ಮಂದಿರ ನಿರ್ಮಾಣ ನನಸಾಗಿದೆ, ಮುಂದೆ ಮನೆ ಮನೆಗಳಲ್ಲೂ ರಾಮಮಂದಿರ ಪರಿಕಲ್ಪನೆಯ ಸಂಕಲ್ಪ ಮಾಡಬೇಕಿದೆ, ಶ್ರೀರಾಮನ ಗುಣಗಳನ್ನ ಬೆಳೆಸಿಕೊಳ್ಳಬೇಕಿದೆ, ಪ್ರತಿ ಮನೆಗಳಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆ ಶುರುವಾಗಬೇಕಿದೆ, ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಸಹ ಕೇಸರಿ ಶಾಲು ಹಾಕಿದ ತಕ್ಷಣ ನಾವೆಲ್ಲ ಹಿಂದೂ ಅಂತ ಹೇಳಿ ಹಿಂದೂ ಸಮಾಜವನ್ನು ಕಟ್ಟುವ ಪ್ರಕ್ರಿಯೆ ಮಾಡಬೇಕು, ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಇನ್ನೂ ಹಾರಿಕ ಮಂಜುನಾಥ್ ಅಬ್ಬರದ ಭಾಷಣಕ್ಕೆ ಶಿಳ್ಳೆ ಚಪ್ಪಾಳೆ ಸುರಿಮಳೆಯಾಯಿತು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಸ್ ಟಿ ವೀರೇಶ್, ಎಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ಜೆಸಿ ದೇವರಾಜ್ ಬಸವರಾಜ್ ಹಕ್ಕಿ, ಎನ್ ಟಿ ನಾಗರಾಜ್, ಸಂಪತ್ ಕುಮಾರ್ ಮಧು ನಾಗರಾಜ್, ರಮೇಶ್, ಅಜಯ್, ಅಶೋಕ್, ಹಿಂದೂ ಯುವ ಸೇನೆ ಸದಸ್ಯರು ಸೇರಿದಂತೆ ಮತ್ತಿತರರಿದ್ದರು.