SUDDIKSHANA KANNADA NEWS/ DAVANAGERE/DATE:27_08_2025
ದಾವಣಗೆರೆ: ನಾಡಿನಾದ್ಯಂತ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು ಗಣೇಶ ಪ್ರತಿಷ್ಠಾಪನ ಸ್ಥಳಗಳಿಗೆ ಸಚಿವರು ಹಾಗೂ ಸಂಸದರು ತೆರಳಿ ಭಕ್ತಿಯನ್ನು ಸಮರ್ಪಿಸಿದರು.
READ ALSO THIS STORY: ಇಸ್ಲಾಂ ಪಾಲಿಸಿ ಬದುಕಬೇಕು: ಮುಸ್ಲಿಂ ವಿದ್ಯಾರ್ಥಿಗಳು ಓಣಂ ಆಚರಣೆ ಮಾಡಬಾರದೆಂಬ ಕರೆ ಕೊಟ್ಟ ಬಳಿಕ ಏನಾಯ್ತು?
ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಧರ್ಮಪತ್ನಿ, ಸಂಸದೆ ಆಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ ಅವರೊಂದಿಗೆ ತೆರಳಿ ಗಣೇಶ ಮೂರ್ತಿಗಳಿಗೆ ಭಕ್ತಿಯಿಂದ ನಮಿಸಿದರು.
ನಗರದ ದೊಡ್ಡಪೇಟೆಯಲ್ಲಿರುವ ಪ್ರತಿಷ್ಠಿತ ವಿನಾಯಕ ದೇವಸ್ಥಾನಕ್ಕೆ ದಂಪತಿ ಸಮೇತವಾಗಿ ಭೇಟಿ ನೀಡಿ, ವಿಜ್ಞ ನಿವಾರಕ ವಿನಾಯಕನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಇಲ್ಲಿನ ದೇವಾಲಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತವಾಗಿ ದೇವಸ್ಥಾನಕ್ಕೆ ಕಾಣಿಕೆಯಾಗಿ ಗಂಟೆಯನ್ನು ಸಮರ್ಪಿಸಿದ ಸಚಿವರು ಹಾಗೂ ಸಂಸದರು ಗಣೇಶ ಮೂರ್ತಿಗೆ ಹೂ-ಹಣ್ಣುಗಳಿಂದ ಮಾಡಿದ ವಿಶೇಷ ಅಲಂಕಾರವನ್ನು ಕಣ್ತುಂಬಿಕೊಂಡು ನಾಡಿನ ಒಳಿತಿಗಾಗಿ ಗಣಪನಿಗೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳು, ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಇತರರು ಉಪಸ್ಥಿತರಿದ್ದರು.