SUDDIKSHANA KANNADA NEWS/ DAVANAGERE/DATE:02_08_2025
ದಾವಣಗೆರೆ: ನಗರದ ಎಸ್. ಎಸ್. ಬಡಾವಣೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ವಿದ್ಯಾರ್ಥಿಗಳು ನಿರ್ಧರಿಸಿದ್ದು, ಈ ಪ್ರಯುಕ್ತ ಹಂದರಗಂಬ ಪೂಜೆ ಆಯೋಜಿಸಲಾಗಿತ್ತು.
READ ALSO THIS STORY: BIG BREAKING: ಅತ್ಯಾಚಾರ ಕೇಸ್ ನಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಂತ ಇರುವವರೆಗೆ ಜೈಲು ಶಿಕ್ಷೆ: ಗರಿಷ್ಠ ಶಿಕ್ಷೆ ನೀಡಿದ ಕೋರ್ಟ್
ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಹಂದರಗಂಬ ಪೂಜೆ ನೆರವೇರಿಸಿದರು. ಎಸ್. ಎಸ್. ಲೇ ಔಟ್ ನಲ್ಲಿ ಚನ್ನಬಸಪ್ಪ ಕಾಲೇಜು ಹಾಗೂ ಅಥಣಿ ಕಾಲೇಜಿನ ವಿದ್ಯಾರ್ಥಿಗಳು ಗಣೇಶೋತ್ಸವ ಆಚರಿಸುತ್ತಿದ್ದು, ಗಣೇಶ ಮೂರ್ತಿ ಕೂರಿಸಲಿದ್ದಾರೆ.
ಈ ವೇಳೆ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, ವಿದ್ಯಾರ್ಥಿಗಳೆಲ್ಲರೂ ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ. ಎಲ್ಲರೂ ಒಗ್ಗಟ್ಟಿನಿಂದ ಅದ್ಧೂರಿಯಿಂದ, ಯಾವುದೇ ಅವಘಡಕ್ಕೆ ಆಸ್ಪದ ಕೊಡದಂತೆ ಹಾಗೂ ಜಿಲ್ಲಾಡಳಿತ ಸೂಚಿಸುವ ಮಾರ್ಗಸೂಚಿಗಳು, ಎಚ್ಚರಿಕೆ ಪಾಲಿಸುವಂತೆ ಸಲಹೆ ನೀಡಿದರು.
ಪರಿಸರಕ್ಕೆ ಮಾರಕವಾದಂಥ ಪ್ಲಾಸ್ಟಿಕ್, ಪ್ಲಾಸ್ಟರ್ ಆಫ್ ಪ್ಯಾರೀಸ್ ನಂಥ ಗಣೇಶ ಮೂರ್ತಿ ಕೂರಿಸಬೇಡಿ. ಮಣ್ಣಿನ ಗಣಪತಿ ಕೂರಿಸಿ ಪರಿಸರ ಮಾಲಿನ್ಯವಾಗದಂತೆ ಎಚ್ಚರ ವಹಿಸಿ. ಎಲ್ಲರೂ ಖುಷಿ, ಸಂಭ್ರಮ ಹಾಗೂ ಸಹಬಾಳ್ವೆ, ಸಹೋದರತ್ವ ಮನೋಭಾವನೆಯಿಂದ ಗಣೇಶೋತ್ಸವ ಅರ್ಥಪೂರ್ಣವಾಗಿ ಆಚರಿಸಿ ಎಂದು ಹೇಳಿದರು.