SUDDIKSHANA KANNADA NEWS/ DAVANAGERE/DATE:11_08_2025
ದಾವಣಗೆರೆ: ನಗರದ ತರಳಬಾಳು ಬಡಾವಣೆಯ 4ನೇ ಕ್ರಾಸ್ ನಿವಾಸಿಯಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದ ಜಿ. ಎಸ್. ಶಿವಲಿಂಗಪ್ಪ ಅವರು ವಿಧಿವಶರಾಗಿದ್ದಾರೆ.
READ ALSO THIS STORY: ಹೊನ್ನಾಳಿಯಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಕದ್ದಿದ್ದ ದಾವಣಗೆರೆಯ ನಾಲ್ವರ ಬಂಧನ: ಸಿಕ್ಕಿಬಿದ್ದಿದ್ದೇಗೆ ಕಳ್ಳರು?
ಮೃತರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ತರಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಶಯದಲ್ಲಿ ನಡೆಯುತ್ತಿರುವ ವಿವಿಧ ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗೌರಕ್ಳ ಮನೆತನದ ಜಿ ಎಸ್ ಶಿವಲಿಂಗಪ್ಪ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಮಧ್ಯಾಹ್ನ 12 ಗಂಟೆವರೆಗೆ ಅವರ ನಿವಾಸದಲ್ಲಿ ಇರಿಸಲಾಗಿದೆ. ಬಳಿಕ ಅವರ ಜನ್ಮಸ್ಥಳವಾದ ಹೊಳಲ್ಕೆರೆ ತಾಲೂಕು ಶಿವಪುರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದೆಂದು ಎಂದು ಅವರ ಕಿರಿಯ ಸಹೋದರ, ಜಿಲ್ಲಾ ಪಂಚಾಯತ್ ನಿವೃತ್ತ ಉಪ ಕಾರ್ಯದರ್ಶಿ ಜಿ. ಎಸ್. ಷಡಕ್ಷರಪ್ಪ ಅವರು ಮಾಹಿತಿ ನೀಡಿದ್ದಾರೆ.
ತೀವ್ರ ಸಂತಾಪ:
ದಾವಣಗೆರೆ ನಗರದ ತರಳಬಾಳು ಬಡಾವಣೆಯ ನಿವಾಸಿಗಳ ಅವರ ಆಪ್ತ ಗೆಳೆಯ ಬಳಗ ಮತ್ತು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸ್ನೇಹಿತರ ಬಳಗ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ವಾಮದೇವಪ್ಪ ಅವರು ಜಿ. ಎಸ್. ಶಿವಲಿಂಗಪ್ಪರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.