SUDDIKSHANA KANNADA NEWS/DAVANAGERE/DATE:25_09_2025
ದಾವಣಗೆರೆ: ಕಳೆದ ತಡರಾತ್ರಿಯಲ್ಲಿ ದಾವಣಗೆರೆ ನಗರದ ಕಾರ್ಲ್ ಮಾರ್ಕ್ಸ್ ನಗರದ ಯಮನೂರು ಗಂಗಮ್ಮ ಮತ್ತು ಕಸ್ತೂರಮ್ಮನವರ ಮನೆಯ ಮುಂಭಾಗ “ಐ ಲವ್ ಯು ಮಹಮ್ಮದ್” ಎನ್ನುವ ಫ್ಲೆಕ್ಸ್ ಅನ್ನು ಹಾಕಬೇಡಿ ಎನ್ನುವ ವಿಚಾರಕ್ಕೆ ಮಧ್ಯರಾತ್ರಿ 500ಕ್ಕೂ ಹೆಚ್ಚು ಜನ ಕಲ್ಲು, ದೊಣ್ಣೆಗಳನ್ನು ಹಿಡಿದು ಕಲ್ಲುಗಳನ್ನು ಮನೆಗಳ ಮೇಲೆ ತೂರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಭೆಯನ್ನೂ ಮಾಡಿದ್ದು ಇದನ್ನು ಖಂಡಿಸಿ ಇಂದು ಬೆಳಗ್ಗೆ ಗಲಭೆಯಾದ ಪ್ರದೇಶದ ಹಾನಿಯುಂಟಾದ ಮನೆಗೆ ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರು ಭೇಟಿ ನೀಡಿದರು.
READ ALSO THIS STORY: ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಹೃದಯಾಘಾತಕ್ಕೆ ಬಲಿ: ಸ್ನೇಹಪರ ಜೀವಿಯ ಯಶೋಗಾಥೆ ಕಂಪ್ಲೀಟ್ ಡೀಟೈಲ್ಸ್
ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯವನ್ನು ಸಿದ್ದೇಶ್ವರ ಅವರು ತುಂಬಿದರು. ನಂತರ ಪೊಲೀಸ್ ಇಲಾಖೆಯವರೊಂದಿಗೆ ಮಾತನಾಡಿ ಈ ಪ್ರದೇಶಕ್ಕೆ ಸೂಕ್ತ ಬಂದೋಬಸ್ತ್ ನೀಡಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷರಾದ ಶಿವಕುಮಾರ್ ರಾಜನಹಳ್ಳಿ, ಎ.ವೈ. ಪ್ರಕಾಶ್, ಮಾಜಿ ಮೇಯರ್ ವಸಂತಕುಮಾರ್, ರಮೇಶ್‌ನಾಯ್ಕ್, ವೀರೇಶ್ ದೊಗ್ಗಳ್ಳಿ, ಜಯಪ್ರಕಾಶ್, ಎಸ್.ಟಿ. ಯೋಗೇಶ್, ದುಗೇಶ್, ಶಿವು, ಗಣೇಶ್ ಹಾಗೂ ಇನ್ನೂ ಆನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.