ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೀಯಾಳಿಸುವುದು, ಬೈಯ್ಯುವುದು ಬಿಡಲಿ, ನಮಗೂ ಬೈಯ್ಯಲು ಬರುತ್ತೆ: ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಸಿಡಿದೆದ್ದ ಜಿ. ಎಂ. ಸಿದ್ದೇಶ್ವರ!

On: September 25, 2025 10:02 PM
Follow Us:
ಎಸ್.ಎಸ್. ಮಲ್ಲಿಕಾರ್ಜುನ್
---Advertisement---

SUDDIKSHANA KANNADA NEWS/DAVANAGERE/DATE:25_09_2025

ದಾವಣಗೆರೆ: ಇನ್ನೊಬ್ಬರನ್ನು ಹೀಯಾಳಿಸುವುದು, ಬೈಯ್ಯುವುದು ಬಿಡಬೇಕು. ನಮಗೂ ಹೀಯಾಳಿಸಲು ಬಂದರೆ ಭಾರೀ ಬೈಯಲು ಬರುತ್ತದೆ. ನಮಗೇಕೆ ಯಾಕೆ ಬೇಕು? ಎಂದು ಸುಮ್ಮನಿದ್ದೇವೆ. ಆನೆ ಹೋಗುತ್ತಿದ್ದಾಗ ನಾಯಿ ಬೊಗಳುತ್ತದೆಂದು ಸುಮ್ಮನಿದ್ದೇನೆ. ಇದೇ ರೀತಿ ಮಾತನಾಡುವುದು ಮುಂದುವರಿಸಿದರೆ ನಾವು ಪತ್ರಿಕಾಗೋಷ್ಠಿ ಕರೆದು ಮಲ್ಲಿಕಾರ್ಜುನ್ ಏನೇನು ಮಾತನಾಡಿದ್ದಾನೋ ಅದಕ್ಕೆಲ್ಲಾ ಉತ್ತರ ಕೊಡಲು ಸಿದ್ಧವಿದ್ದೇವೆ. ನಾವೇನೂ ಕಡಿಮೆ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

READ ALSO THIS STORY: EXCLUSIVE: ರಾಜ್ಯ ಸರ್ಕಾರದ ಗಣತಿ ಆಟ: ಶಿಕ್ಷಕರು, ಪಾಲಿಕೆ ನೌಕರರಿಗೆ ಬಂದಿದೆ ಜ್ವರ, ಜೊತೆಗೆ ಕೇಳೋರಿಲ್ಲ ಗೋಳಾಟ!

ನಗರದ ಕಾರ್ಲ್ ಮಾರ್ಕ್ಸ್ ನಗರಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ನನಗೆ ಕಾಮನ್ ಸೆನ್ಸ್ ಇಲ್ಲ ಎಂದಿರುವ ಅವನಿಗೆ ಪೂರಾ ಕಾಮನ್ ಸೆನ್ಸ್ ಇಲ್ಲ. ಹಿಂದೂ ಮುಸ್ಲಿಂ ಯಾರಾದರೂ ಒಂದೇ. ಹಿಂದೂಗಳು ಮತ ಕೊಟ್ಟಿದ್ದಾರೆ, ಮುಸ್ಲಿಂರು ಮತ ಕೊಟ್ಟಿದ್ದಾರೆಂದು ಯಾವುದೋ ಒಂದು ಧರ್ಮದವರನ್ನು ಓಲೈಸುವುದು ತಪ್ಪು. ಮೊದಲು ಜಿಲ್ಲೆಯಲ್ಲಿ ಗಲಾಟೆ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವನ ಜವಾಬ್ದಾರಿ. ಇದರ ಬಗ್ಗೆ ಗಮನ ಹರಿಸಿ. ಸಹೋದರರಂತೆ
ಎಲ್ಲರೂ ಬಾಳುವುದು ಆಗಬೇಕು ಎಂದು ಹೇಳಿದರು.

ಮಟಿಕಲ್ ಸಮೀಪದ ಬಳಿಯ ಅರಳೀಮರ ವೃತ್ತದಲ್ಲಿ ಫ್ಲೆಕ್ಸ್ ಹಾಕಿದ್ದಾರೆಂದು ಗಲಾಟೆ ಆಗಿದ್ದು ತಣ್ಣಗಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ನನ್ನ ಮನೆ ಮುಂದೆ ಫ್ಲೆಕ್ಸ್ ಹಾಕಿ. ಮುಸ್ಲಿಂರ ಮನೆ ಮುಂದೆ ಗಣಪತಿ ಇಡಬೇಕಾ? ಅವರ ಮನೆ ಮುಂದೆ ಓಡಾಡಬೇಕಾ? ಎಂಬೆಲ್ಲಾ ಉಡಾಫೆ ಮಾತನಾಡಿದ್ದಾನೆ. ಇದು ಸರಿಯಲ್ಲ ಎಂದು ಹೇಳಿದರು.

ನಾನು 20 ವರ್ಷ ಎಂಪಿ ಆಗಿ ಏನೂ ಮಾಡಿಲ್ಲ, ಲೋಕಸಭೆಯಲ್ಲಿ ಮಾತನಾಡಿಲ್ಲ ಎಂದಿದ್ದಾನೆ. ನಾನು ನೋಡಿದ್ದೇನೆ. ಅವ್ನಿಗೆ ಗೊತ್ತಿದೆಯೋ ಇಲ್ಲ. ಯಾವ ಊರಿನಲ್ಲಿ ಇದ್ದನೋ ನನಗೆ ಗೊತ್ತಿಲ್ಲ. ನನ್ನಷ್ಟು ಮಾತನಾಡಿದವರು ಯಾರೂ ಇಲ್ಲ. 1300 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ. ಸುಮಾರು 60ರಿಂದ 70 ಬಾರಿ ಮಾತನಾಡಿದ್ದೇನೆ. ನಾನು ರಾಜ್ಯದಲ್ಲಿ ಪ್ರಶ್ನೆ ಕೇಳಿರುವುದರಲ್ಲಿ ಎರಡನೆಯವನೋ ಅಥವಾ ಮೂರನೆಯವನೋ ಇರಬೇಕು. ಇಷ್ಟು ವರ್ಷ ಪತ್ರಿಕೆ ಓದಿಲ್ಲ ಅನ್ಸುತ್ತೆ. ಈಗ ಓದುತ್ತಿರಬೇಕು ಎಂದು ವ್ಯಂಗ್ಯವಾಡಿದ ಜಿ. ಎಂ. ಸಿದ್ದೇಶ್ವರ ಅವರು ಸರಿಯಾಗಿ ನಡೆದುಕೊಳ್ಳಲಿ. ಗೌರವದಿಂದ ಇರಬೇಕು ಎಂದು ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷರಾದ ಶಿವಕುಮಾರ್ ರಾಜನಹಳ್ಳಿ, ಎ.ವೈ. ಪ್ರಕಾಶ್, ಮಾಜಿ ಮೇಯರ್ ವಸಂತಕುಮಾರ್, ರಮೇಶ್‌ನಾಯ್ಕ್, ವೀರೇಶ್ ದೊಗ್ಗಳ್ಳಿ, ಜಯಪ್ರಕಾಶ್, ಎಸ್.ಟಿ. ಯೋಗೇಶ್, ದುಗೇಶ್, ಶಿವು, ಗಣೇಶ್ ಹಾಗೂ ಇನ್ನೂ ಆನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment