SUDDIKSHANA KANNADA NEWS/DAVANAGERE/DATE:31_10_2025
ದಾವಣಗೆರೆ: ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮಕ್ಕೆ ಭೇಟಿ ನೀಡಿದ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಶ್ರೀ ಬೀರಲಿಂಗೇಶ್ವರ ಸ್ವಾಮಿ ದರ್ಶನ ಪಡೆದರು.
READ ALSO THIS STORY: ಚಿನ್ನದ ಬೆಲೆ ಗಗನಕ್ಕೆೇರಿದ್ದರಿಂದ ಕಳ್ಳರಿಂದ ತಪ್ಪಿಸಿಕೊಳ್ಳಲು ಪೊಲೀಸರ ಈ ಸೂಚನೆಗಳ ಪಾಲಿಸಿದರೆ ಸಾಕು!
ಎರಡು ದಿನಗಳ ಕಾಲ ನಡೆಯಲಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡ ಎಡೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, ಜಾತ್ರಾ ಮಹೋತ್ಸವ ನಡೆಯುತ್ತಿರುವುದು ಸಂತಸದ ವಿಚಾರ. ಕುಣಿಬೆಳಕೆರೆ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ ದರ್ಶನ ಪಡೆದದ್ದು ನನಗೆ ತುಂಬಾನೇ ಮನಸ್ಸಿಗೆ ಖುಷಿ ಕೊಟ್ಟಿದೆ. ಶ್ರೀ ಬೀರಲಿಂಗೇಶ್ವರ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಹಬ್ಬ, ಜಾತ್ರಾ ಮಹೋತ್ಸವ ನಡೆಯಬೇಕು. ಗ್ರಾಮದ ಎಲ್ಲರೂ ಒಟ್ಟಾಗಿ ಸೌಹಾರ್ದತಯುತವಾಗಿ ಆಚರಿಸಬೇಕು. ಆದ್ರೆ, ಜಾತ್ರಾ ಮಹೋತ್ಸವ, ಹಬ್ಬ ಹರಿದಿನ, ಸಮಾರಂಭಗಳಿಗೆ ಎಷ್ಟೋ ಪ್ರಾಮುಖ್ಯತೆ ನೀಡುತ್ತೇವೆಯೋ ಅಷ್ಟೇ ಮಕ್ಕಳ ಶಿಕ್ಷಣಕ್ಕೂ ನೀಡಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಈ ವೇಳೆ ಬೀರೇಶ್ವರ ದೇವಸ್ಥಾನ ಸಮಿತಿ ಹಿರಿಯ ಮುಖ್ಯಸ್ಥ ಬೆಳೆಕೆರೆಪ್ಪರ್ ರಾಮಣ್ಣ, ಮುಗಳಗೆರೆ ಮಾದೇವಪ್ಪ, ಬೆಳ್ಳೂಡೆರ್ ಮಾರುತಿ, ವಿಜಯ್, ಗೋಣೆಪ್ಪರ್ ರುದ್ರಪ್ಪ , ಉಮೇಶ್ ಮುದಕಪ್ಪರ್, ರೇವಣ್ಣ, ಗುಡಳ್ಳಿ ಚಿಕ್ಕಣ್ಣ, ಉಚ್ಚ ವೀರಪ್ಪರ್ ಅರುಣ್ ಕುಮಾರ್, ಕರಿಕೆಂಚಪ್ಪರ್ ರೇವಣಸಿದ್ದು ಉಪಸ್ಥಿತರಿದ್ದರು.






