SUDDIKSHANA KANNADA NEWS/ DAVANAGERE/DATE:04_09_2025
ದಾವಣಗೆರೆ: ಹರಿಹರ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಷ್ಠಾಪಿಸಿರುವ ಪ್ರಯುಕ್ತ ಏರ್ಪಡಿಸಿದ್ದ ಮಹಾಗಣಪತಿ ವಿಶೇಷ ಪೂಜೆಯಲ್ಲಿ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಮಹಾಗಣಪತಿ ವಿಶೇಷ ಪೂಜೆ ಹಾಗೂ ಹೋಮದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಗಣೇಶನು ಎಲ್ಲರಿಗೂ ಒಳ್ಳೆಯದಾಗಲಿ, ರೈತರು ಮತ್ತು ನಾಡಿನ ಜನತೆಗೆ
ಒಳಿತಾಗಲಿ ಎಂದು ಪ್ರಾರ್ಥಿಸಿದರು.
READ ALSO THIS STORY: ಬಗೆದಷ್ಟು ಬಯಲಾಗ್ತಿದೆ ಕೆ. ಸಿ. ವೀರೇಂದ್ರ ಪಪ್ಪಿ ಅಕ್ರಮ ಸಂಪತ್ತು: ಕೈ ಶಾಸಕನ “ಸಂಪಾದನೆ” ಕಂಡು ಇಡಿಯೇ ಶಾಕ್!
ಗಣೇಶ ಹಬ್ಬವು ವಿಜೃಂಭಣೆ ಹಾಗೂ ಸಂಭ್ರಮದಿಂದ ನಡೆಯುತ್ತಿದೆ. ಹಿಂದೂ ಜಾಗರಣ ವೇದಿಕೆಯವರು ಪ್ರತಿಷ್ಠಾಪಿಸಿರುವ ಮಹಾಗಣಪತಿ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಮನಸ್ಸಿಗೆ ಮುದ ನೀಡಿತು.
ಸಾಮರಸ್ಯದಿಂದ ಸಹೋದರ ಭಾವನೆಯಿಂದ ಹಬ್ಬ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಭಕ್ತಾದಿಗಳಿಗೆ ಪ್ರಸಾದವನ್ನು ನೀಡುವ ಮೂಲಕ ಜಿ. ಬಿ. ವಿನಯ್ ಕುಮಾರ್ ಅವರು ಗಮನ ಸೆಳೆದರು.
ಇದೇ ವೇಳೆ ಜಿ. ಬಿ. ವಿನಯ್ ಕುಮಾರ್ ಅವರಿಗೆ ಹಿಂದೂ ಮಹಾಗಣಪತಿ ಬಳಗದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಯುವ ಮುಖಂಡರಾದ ಸುರೇಶ್ ಪೈಲ್ವಾನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡ ವೀರೇಶ್ ಹನಗವಾಡಿ, ಹನುಮಂತಣ್ಣ, ಹಿರಿಯರಾದ ಶಿವಕುಮಾರ್ ಸಂಬಳಿ, ನಾಗರಾಜ್ ಭಂಡಾರಿ, ಕೃಷ್ಣಮೂರ್ತಿ ಶೆಟ್ಟಿ, ಅರ್ಚಕರಾದ ದೇಶಪಾಂಡೆ, ಜಿಮ್ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.