ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಯಾದವ, ವಾಲ್ಮೀಕಿ, ಕುರುಬ ಸೇರಿ ಇತರೆ ಸಮಾಜಗಳು ಇಂದಿಗೂ ಹಿಂದುಳಿದ ವರ್ಗಗಳಾಗಿ ಉಳಿದಿವೆ: ಜಿ. ಬಿ. ವಿನಯ್ ಕುಮಾರ್ ಬೇಸರ

On: August 23, 2025 6:44 PM
Follow Us:
ಯಾದವ
---Advertisement---

SUDDIKSHANA KANNADA NEWS/ DAVANAGERE/DATE:23_08_2025

ದಾವಣಗೆರೆ: ದೇಶದಲ್ಲಿ ಇಂದಿಗೂ ಯಾದವ, ವಾಲ್ಮೀಕಿ, ಕುರುಬ ಸೇರಿದಂತೆ ಇತರೆ ಸಮಾಜಗಳು ಹಿಂದುಳಿದ ವರ್ಗಗಳಾಗಿ ಉಳಿದಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಕಂಡುಕೊಂಡು ಮುಂದೆ ತರುವ ಕೆಲಸ ಆಗಬೇಕಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನ.ಯ್ ಕುಮಾರ್ ಕರೆ ನೀಡಿದರು.

READ ALSO THIS STORY: ಧರ್ಮಸ್ಥಳ ಕೇಸ್ ದೂರುಕೊಟ್ಟವನೇ ಆರೋಪಿಯಾಗಿದ್ದು ಹೇಗೆ? 10 ದಿನಗಳ ಕಾಲ ಎಸ್ ಐ ಟಿ ಕಸ್ಟಡಿಗೆ ಮುಸುಕುಧಾರಿ ಚಿನ್ನಯ್ಯ!

ಜಗಳೂರು ಪಟ್ಟಣದ ಮರೇನಹಳ್ಳಿ ರಸ್ತೆಯ ಸಮೀಪ ಜಗಳೂರು ತಾಲೂಕು ಯಾದವ ಸಂಘ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವ ಸಮಾಜದ ಸಂಸ್ಕೃತಿ ಗಟ್ಟಿಯಾಗಿರುತ್ತದೆಯೋ ಆ ಸಮಾಜದಲ್ಲಿ ಭೌತಿಕತೆ ಉತ್ಕೃಷ್ಟವಾಗಿರುತ್ತದೆ. ಸಮಾಜದ ಸಂಸ್ಕೃತಿ ಗಟ್ಟಿಯಿದ್ದರೆ ಬಹಳ ಪ್ರತಿಭೆಗಳು ಹೊರ ಬರುತ್ತವೆ. ಆಗ ಆಳವಾದ ಜ್ಞಾನವೂ ಇರುತ್ತದೆ. ಇದೆಲ್ಲಾ ಸಾಧ್ಯ
ಆಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ಕುರುಬ, ಯಾದವ, ವಾಲ್ಮೀಕಿ ಸೇರಿದಂದೆ ಇತರೆ ಸಮಾಜಗಳು ನಾಗರಿಕ ಸಂಸ್ಕೃತಿ ಹೊಂದಿದ್ದರೂ ಮುಂದುವರಿದ ಸಮಾಜಗಳಾಗಲಿಲ್ಲ. ಎಲ್ಲಾ ಸಮಾಜ, ಸಂಸ್ಕೃತಿಗೆ ಮೂಲ ಬೇರು ಈ ಸಮಾಜಗಳು. ಆದ್ರೆ, ಕನಿಷ್ಠ ಸೌಲಭ್ಯ ಪಡೆದುಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಸಮಾಜಗಳ ಅಸ್ಮಿತೆ, ಸಂಸ್ಕೃತಿ ಉಳಿಸಬೇಕಿದೆ. ಉತ್ತಮ ಶಿಕ್ಷಣ ಕೊಡಿಸಲು ಹೋರಾಟ ಮಾಡಬೇಕಾದ ಅಗತ್ಯತೆಯೂ ಇದೆ ಎಂದು ತಿಳಿಸಿದರು.

ಸಂಸ್ಕೃತಿ ಉಳಿಯಬೇಕಾದರೆ ಸಮಾಜಕ್ಕೆ ಸಮುದಾಯ ಭವನ ಬೇಕು, ದೇವಸ್ಥಾನ, ಶಿಕ್ಷಣ ಸಂಸ್ಥೆಗಳೂ ಅವಶ್ಯಕ. ಈ ಸಮಾಜದಲ್ಲಿ ಪ್ರಬಲ ಮತ್ತು ಬಲಾಢ್ಯ ರಾಜಕೀಯ ನಾಯಕರಿದ್ದರೆ ಸಾಧ್ಯವಾಗುತ್ತದೆ. ನಮ್ಮ ಸಮಾಜದ ಐಎಎಸ್, ಐಪಿಎಸ್ ಪಡೆದವರು ಹೆಚ್ಚಾಗಬೇಕು. ಆಗ ಸಮಸ್ಯೆಗಳು ಕಡಿಮೆಯಾಗುತ್ತವೆ. ಬೆರಳೆಣಿಕೆಯಷ್ಟು ಮಾತ್ರ ಅಧಿಕಾರಿಗಳಿರುತ್ತಾರೆ. ಕೆಲಸವೂ ಆಗುವುದಿಲ್ಲ, ಸೌಲಭ್ಯವೂ ಸಿಗಲ್ಲ. ರಾಜಕೀಯ ಪ್ರಾತಿನಿಧ್ಯವೂ ದೊರೆಯುವುದಿಲ್ಲ ಎಂದು ಹೇಳಿದರು.

ದೇಶದಲ್ಲಿಯೇ ಇನ್ ಸೈಟ್ಸ್ ಸಂಸ್ಥೆ ಮೂರನೇ ಸ್ಥಾನದಲ್ಲಿರುವ ದೊಡ್ಡ ಸಂಸ್ಥೆ. ನಮ್ಮ ಸಂಸ್ಥೆಗಳಲ್ಲಿಯೂ ಹೆಚ್ಚಿನ ಹಿಂದುಳಿದ ಸಮಾಜದವರು ಬರಲ್ಲ. ಟಾಪ್ ಹತ್ತು ಸ್ಥಾನದಲ್ಲಿ ಬರಲು ಆಗದು. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ಕೃಷ್ಟ, ಗುಣಮಟ್ಟದ ಶಿಕ್ಷಣ ದೊರೆಯಬೇಕು. ಮಕ್ಕಳಲ್ಲಿ ಐಎಎಸ್ ಮುಂದೆ ಓದಿ ಪಾಸಾಗಿ ಅಧಿಕಾರಿಗಳಾಗುತ್ತೇವೆಂಬ ಧೈರ್ಯ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಪೋಷಕರು, ಸರ್ಕಾರ ಗಂಭೀರ ಆಲೋಚನೆ ಮಾಡಬೇಕಾದ ತುರ್ತು ಅವಶ್ಯಕತೆ ಇದೆ
ಎಂದು ಅಭಿಪ್ರಾಯಪಟ್ಟರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ ತೋರಿದಷ್ಟೇ ಪ್ರೀತಿ ಈಗಲೂ ಜನರು ತೋರುತ್ತಿದ್ದಾರೆ. ಚುನಾವಣೆ ಮಾಡಲಿ, ಬಿಡಲಿ. ಸಂಸ್ತೆ ನಡೆಸುವ ಸಂಸ್ಥಾಪಕನಾಗುವ ಭಾಗ್ಯಸಿಕ್ಕಿದೆ. ಶಿಕ್ಷಣವನ್ನು ಇನ್ನೊಬ್ಬರಿಗೆ ನೀಡುವಂಥ ಅತ್ಯುನ್ನತ ಕಾರ್ಯ ದೊರೆತಿದೆ. ನಿಮ್ಮ ಜೊತೆ ಸದಾ ಇರುತ್ತೇನೆ. ನಾನು ಈಗಲೂ ದಿನಕ್ಕೆ 2 ಗಂಟೆಗಳ ಕಾಲ ಐಎಎಸ್, ಕೆಎಎಸ್ ಓದಲು ತಯಾರಿ ಹೇಗೆ ಮಾಡಿಕೊಳ್ಳಬೇಕು? ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಓದುವಾಗಿನಿಂದಲೇ ಶಿಸ್ತು ಹೇಗೆ ಬೆಳೆಸಿಕೊಳ್ಳಬೇಕು? ತರಬೇತಿ ಹೇಗಿರಬೇಕು ಎಂಬುದೂ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಜಗಳೂರು ಶಾಸಕ ಚಿಕ್ಕಮ್ಮನಹಳ್ಳಿ ಬಿ. ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರದುರ್ಗದ ಶ್ಬೀ ಕ್ಷೇತ್ರ ಗೊಲ್ಲಗಿರಿ ಯಾದವ ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯಾದವ ಸಂಘದ ಅಧ್ಯಕ್ಷ ಬಿ. ಸಿ. ಕೃಷ್ಣಮೂರ್ತಿ ವಹಿಸಿದ್ದರು. ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಶಾಂತಕುಮಾರಿ ಶಶಿಧರ್, ಜೆ. ಎಸ್. ವೇಣುಗೋಪಾಲ್, ತಿಪ್ಪೇಸ್ವಾಮಿ ಗೌಡ್ರು, ಕೆ. ಪಿ. ಪಾಲಯ್ಯ, ಮಹೇಶ್ವರಪ್ಪ, ಚಿತ್ತಪ್ಪ, ಕೆ. ಬಿ. ಕಲ್ಲೇರುದ್ರೇಶ್, ಜಿ. ಬಿ. ಬಾಲರಾಜ್ ಮತ್ತಿತತರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment