ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹರಪನಹಳ್ಳಿಯಲ್ಲಿ ಹರಿದುಬಂದ ಜನಸಾಗರ: ಜಿ. ಬಿ. ವಿನಯ್ ಕುಮಾರ್ ಪರ ಜನರ ಜೈಕಾರ

On: May 4, 2024 5:09 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:04-05-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಹರಪನಹಳ್ಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಗ್ರಾಮ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಎಲ್ಲಿ ನೋಡಿದರೂ ಜನವೋ ಜನರು ಕಂಡು ಬಂದರು. ಜನರ ಪ್ರೀತಿಗೆ ವಿನಯ್ ಕುಮಾರ್ ಅವರು ಖುಷಿಯಾದರು.

ಹರಪನಹಳ್ಳಿಗೆ ವಿನಯ್ ಕುಮಾರ್ ಅವರು ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಅದ್ಧೂರಿಯಾಗಿ ಸ್ವಾಗತ ನೀಡಿತಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿನಯ್ ಕುಮಾರ್ ಅವರಿಗೆ ಜೈಕಾರ,
ಸಿಲಿಂಡರ್ ಘೋಷಣೆಗಳು ಮುಗಿಲುಮುಟ್ಟಿದವು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರೆ, ಯುವಕರು ನೃತ್ಯ ಮಾಡಿ ಗಮನ ಸೆಳೆದರು.

ಕಿಲೋಮೀಟರ್ ಗಟ್ಟಲೇ ನೆರೆದಿದ್ದ ಸಾವಿರಾರು ಜನರು ಬಿಸಿಲಿನ ಝಳ ಲೆಕ್ಕಿಸದೇ ಹೆಜ್ಜೆ ಹಾಕಿದರು. ಸ್ವಾಭಿಮಾನಿ ವಿನಯ್ ಕುಮಾರ್ ಗೆ ಜೈ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡೋಣ. ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಇತಿಹಾಸ ಬರೆಯೋಣ ಎಂಬ ಘೋಷಣೆಗಳು ಕೇಳಿ ಬಂದವು.

ಹರಪ್ಪನಹಳ್ಳಿಯ ಹರಿಹರ ವೃತ್ತದಿಂದ ಆರಂಭವಾದ ಬೃಹತ್ ರೋಡ್ ಶೋ ತೆಕ್ಕದಗರಡಿಕೇರೆ, ಅರಸಿಕೇರ ರಸ್ತೆ, ಕೋರಮರ ಓಣಿ,ವಾಲ್ಮೀಕಿ ನಗರ, ಐಬಿ ವೃತ್ತದಿಂದ ಕೊಟ್ಟೂರು ವೃತ್ತದ ಮುಖ್ಯರಸ್ತೆ, ಮೆಗಳಪೇಟೆ ಸಾಗಿದ ಮೂಲಕ
ಸಾಗಿ ಹರಪ್ಪನಹಳ್ಳಿಯ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು. ಯಾವ ರಾಷ್ಟ್ರೀಯ ಪಕ್ಷಗಳಿಗೂ ಕಡಿಮೆ ಏನಿಲ್ಲ ಎಂಬಂತೆ ಮೆರವಣಿಗೆ ಸಾಗಿತು. ವಾದ್ಯಗಳು, ತಮಟೆ ಸದ್ದು ಮೆರವಣಿಗೆಗೆ ಮತ್ತಷ್ಟು ರಂಗು ನೀಡಿತು. ಎಲ್ಲೆಲ್ಲೂ
ವಿನಯ್ ಕುಮಾರ್ ಭಾವಚಿತ್ರ, ಸ್ವಾಭಿಮಾನಿ ಸಂಕೇತವೂ ರಾರಾಜಿಸಿತು.

3 ಗಂಟೆಗಳ ಕಾಲ ಮೆರವಣಿಗೆ:

ಹರಪನಹಳ್ಳಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಮೆರವಣಿಗೆಯು ಸಾಗಿತು. 8 ಕಿಲೋಮೀಟರ್ ವರೆಗೆ ಯಾತ್ರೆ ನಡೆಯಿತು. ಹರಪನಹಳ್ಳಿಯಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನೆಂದಿಗೂ ಚಿರಋಣಿ ಎಂದು ವಿನಯ್ ಕುಮಾರ್
ಹೇಳಿದರು.

ಈ ವೇಳೆ ಮಾತನಾಡಿದ ಅವರು, ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ನನಗೆ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ಮತ್ತಷ್ಟು ಇಮ್ಮುಡಿಗೊಳಿಸಿದೆ. ಇಷ್ಟೊಂದು ಸಂಖ್ಯೆಯಲ್ಲಿ ಗ್ರಾಮ ಗ್ರಾಮಗಳಿಂದ ಬಂದಿರುವ ಜನರನ್ನು ನೋಡಿದರೆ ಬಿಜೆಪಿ, ಕಾಂಗ್ರೆಸ್ ಗೆ ನಡುಕ ಉಂಟಾಗುವಂತೆ ಮಾಡಿದೆ. ಜನರ ಮಧ್ಯೆ ಇರುವವನು ನಾನು. ನಿಮ್ಮೊಂದಿಗೆ ಇರುವವನು ನಾನು. ನಿಮ್ಮಿಂದಲೇ ಬೆಳೆದವನು. ನಿಮಗಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ, ನೀವೇ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಹರಪನಹಳ್ಳಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ದ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತಂದು ಉದ್ಯೋಗಾವಕಾಶ ಸೃಷ್ಟಿಸುತ್ತೇನೆ. ಪ್ರತಿ ಗ್ರಾಮಗಳಿಗೂ ಹೈಟೆಕ್ ಶಾಲೆ ಆರಂಭಿಸುವ ಯೋಜನೆ ಇದೆ. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಹಸಿರ ನಾಡು ಆಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಹಳ್ಳಿ ಹಳ್ಳಿಗೂ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು. ಹರಪನಹಳ್ಳಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದರೂ ಈ ತಾಲೂಕು ನಿರ್ಲಕ್ಷಿಸಲಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ಅನುಭವಿಸಿದವರು ನಿಮ್ಮ ಸಮಸ್ಯೆ ಪರಿಹರಿಸಲು ಪ್ರಯತ್ನಪಟ್ಟಿದ್ದರೆ ಇಷ್ಟು ವರ್ಷ ಕಾಯಬೇಕಾಗಿರಲಿಲ್ಲ. ಈ ಬಾರಿ ಕ್ರಮ ಸಂಖ್ಯೆ 28, ಸಿಲಿಂಡರ್ ಗುರುತಿಗೆ ಮತ ನೀಡಿ, ಮನೆ ಮಗನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ನಾನು ಕೇವಲ ಭರವಸೆ ನೀಡಿ ಹೋಗುವವನಲ್ಲ. ಅದನ್ನು ಈಡೇರಿಸುವವರೆಗೆ ವಿರಮಿಸುವುದಿಲ್ಲ. ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ. ಗುಣಮಟ್ಟದ ಶಿಕ್ಷಣ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗುವಂತೆ ಗ್ರಾಮೀಣ ಭಾಗದ ಮಕ್ಕಳಿಗೂ ನೀಡಲು ಪ್ರಯತ್ನಿಸುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ. ಇದೆಲ್ಲಾ ಸಾಧ್ಯವಾಗಬೇಕಾದರೆ ನನಗೆ ಆಶೀರ್ವದಿಸಿ. ಅಭಿವೃದ್ಧಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಜಿಬಿವಿ ಜನುಮದಿನ ಆಚರಣೆ

ನೀಲಗುಂದ ಕ್ರಾಸ್ ನ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಜಿ.ಬಿ ವಿನಯ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ದಾರಿ ಮಧ್ಯೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜೊತೆಗೆ ಸನ್ಮಾನಿಸಿ ವಿನಯ್ ಕುಮಾರ್ ಅವರಿಗೆ ಜನುಮದಿನದ ಶುಭಾಶಯ ಕೋರಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment