ನವದೆಹಲಿ: ದೇಶದಲ್ಲಿ ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆಯ ಬಿಸಿ ಮತ್ತೆ ತಟ್ಟಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಳೆದ ಐದೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬರೋಬ್ಬರಿ 4 ರೂಪಾಯಿ ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸದ್ಯ ಲೀಟರ್‌ಗೆ 98.64 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ 91.58 ರೂಪಾಯಿಗೆ ಏರಿಕೆಯಾಗಿದೆ. ಇಂದು ಪೆಟ್ರೋಲ್ ಮೇಲೆ 86 ಪೈಸೆ ಹಾಗೂ ಡೀಸೆಲ್ ಮೇಲೆ 83 ಪೈಸೆ ಹೆಚ್ಚಳ ಮಾಡಲಾಗಿದೆ. ಕಳೆದ ಶುಕ್ರವಾರವಷ್ಟೇ (ಮೇ 15) ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬರೊಬ್ಬರಿ 4 ವರ್ಷಗಳ ಬಳಿಕ ದರ ಪರಿಷ್ಕರಣೆ ನಡೆಸಿ, ಒಮ್ಮೆಲೆ 3 ರೂಪಾಯಿ ಹೆಚ್ಚಿಸಿದ್ದವು.
ಮೆಟ್ರೋ ನಗರಗಳಲ್ಲಿ ಇಂದಿನ ದರ ಸರಣಿ:
ಬೆಂಗಳೂರು ಹಾಗೂ ಇತರೆ ಪ್ರಮುಖ ನಗರಗಳು: (ಸ್ಥಳೀಯ ತೆರಿಗೆಗೆ ಅನುಗುಣವಾಗಿ ದರ ಬದಲಾಗಲಿದ್ದು, ಮುಂಬೈನಲ್ಲಿ ಪೆಟ್ರೋಲ್ ರೂ. 107.59 ಹಾಗೂ ಕೊಲ್ಕತ್ತಾದಲ್ಲಿ ರೂ. 109.70 ತಲುಪಿದೆ).
ದೆಹಲಿ: ಪೆಟ್ರೋಲ್: ರೂ. 98.64 | ಡೀಸೆಲ್: ರೂ. 91.58
ಮುಂಬೈ: ಪೆಟ್ರೋಲ್: ರೂ. 107.59 | ಡೀಸೆಲ್: ರೂ. 94.08
ಬೆಲೆ ಏರಿಕೆಗೆ ಕಾರಣವೇನು?
ಫೆಬ್ರವರಿ 28 ರಿಂದ ಆರಂಭವಾದ ಅಮೆರಿಕ-ಇರಾನ್ ಯುದ್ಧದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 50 ಕ್ಕಿಂತ ಹೆಚ್ಚು ದುಬಾರಿಯಾಗಿದೆ. ಜಾಗತಿಕ ತೈಲ ಮತ್ತು ಎಲ್‌ಎನ್‌ಜಿ ವ್ಯಾಪಾರದ ಶೇ. 20 ರಷ್ಟು ಪಾಲನ್ನು ಹೊಂದಿರುವ ಪ್ರಮುಖ ಜಲಮಾರ್ಗ ‘ಹೊರ್ಮುಜ್ ಜಲಸಂಧಿ’ಯನ್ನು (Strait of Hormuz) ಇರಾನ್ ಹಾಗೂ ಅಮೆರಿಕದ ನೌಕಾಪಡೆಗಳು ಸಂಪೂರ್ಣವಾಗಿ ದಿಗ್ಬಂಧನಗೊಳಿಸಿರುವುದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದೆ.
ಬೆಲೆ ಏರಿಕೆಯ ಎಫೆಕ್ಟ್:
ಇಂಧನ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗಲಿದ್ದು, ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕ ಎದುರಾಗಿದೆ. ಈ ತೈಲ ಬೆಲೆ ಏರಿಕೆಯು ದೇಶದ ಒಟ್ಟಾರೆ ಹಣದುಬ್ಬರವನ್ನು (Inflation) 15 ರಿಂದ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
- Diesel Price Increase
- Fuel crisis 2026
- Fuel Price Hike
- Inflation India
- Oil Supply Disruption
- Petrol Price Delhi
- Petrol Rate Today
- Strait of Hormuz Blockade
- US Iran Conflict
- ಅಮೆರಿಕ ಇರಾನ್ ಯುದ್ಧ
- ಇಂಧನ ದರ ಏರಿಕ
- ಕಚ್ಚಾ ತೈಲ ಬೆಲೆ
- ಡೀಸೆಲ್ ದರ ಹೆಚ್ಚಳ
- ತೈಲ ಬಿಕ್ಕಟ್ಟು 2026
- ಪೆಟ್ರೋಲ್ ಡೀಸೆಲ್ ಬೆಲೆ ಬೆಂಗಳೂರು
- ಪೆಟ್ರೋಲ್ ಬೆಲೆ ಇಂದಿನ ದರ
- ಹಣದುಬ್ಬರ





Leave a comment