SUDDIKSHANA KANNADA NEWS/ DAVANAGERE/ DATE:06-08-2023
ದಾವಣಗೆರೆ: ನಿತ್ಯವೂ ಕ್ಲಾಸ್, ಪ್ರಾಕ್ಟಿಕಲ್, ಥಿಯರಿ ಎಂದೆಲ್ಲಾ ಓಡಾಡುವವರು. ಕೈಯಲ್ಲಿ ಸ್ಕೆತಸ್ಕೋಪ್, ಬಿಳಿ ವಸ್ತ್ರದ ಕೋಟ್ ಧರಿಸಿ ಯಾವಾಗಲೂ ಓದು ಅಂತಾನೇ ಬ್ಯುಸಿ ಇರುವವರು. ಅಧ್ಯಯನದಲ್ಲೇ ಮುಳುಗಿ ಹೋಗಿರುವವರು. ಆಸ್ಪತ್ರೆಗಳಿಗೆ ಹೋಗಿ ರೋಗಿಗಳ ಆರೈಕೆ ಮಾಡುವವರು. ದೇಸಿ ಕ್ರೀಡೆಗಳ ಗಂಧಗಾಳಿ ಗೊತ್ತಿಲ್ಲದ ಕೆಲವರು. ನಗರ ಪ್ರದೇಶದಲ್ಲಿ ಬೆಳೆದು, ಓದಿದವರು. ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಟಗಳು ಇವರಿಗೆಲ್ಲಾ ಒಂದಕ್ಕಿಂತ ಮತ್ತೊಂದು ಸ್ಪೆಷಲ್. ಫ್ರೆಂಡ್ ಶಿಪ್ ಡೇ ದಿನ (Friendship Day) ದಂದೇ ಎಲ್ಲರೂ ಒಟ್ಟಿಗೆ ಸೇರಿ ಪಾಲ್ಗೊಂಡಿದ್ದು ವಿಶೇಷ.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆಯಲ್ಲಿ ಗೃಹ ಜ್ಯೋತಿ ಯೋಜನೆ ಚಾಲನೆ ವೇಳೆ ಗದ್ದಲ, ಗೊಂದಲ, ರಾದ್ಧಾಂತ… ಯಾಕಾಗಿ…?
ಯಾಕೆಂದರೆ ಇಂಥ ದೇಸಿ ಕ್ರೀಡೆಗಳನ್ನು ಆಡಿದ್ದು ಕಡಿಮೆಯೇ. ಎಷ್ಟೋ ಮಂದಿಗೆ ಈ ಆಟಗಳೇ ಗೊತ್ತಿರಲಿಲ್ಲ. ಪ್ರತಿಯೊಬ್ಬರು ನುರಿತ ಆಟಗಾರರಂತೆ ಪಾಲ್ಗೊಂಡರು, ಕುಣಿದು ಕುಪ್ಪಳಿಸಿದರು. ಆಟವಾಡಿ ನಲಿದರು. ಇಂಥದ್ದೊಂದು
ಸನ್ನಿವೇಶ ಸೃಷ್ಟಿಯಾಗಲು ಕಾರಣ ಜೆ ಜೆ ಎಂ ಮೆಡಿಕಲ್ ಕಾಲೇಜಿನ ‘ಮಾನ್ಸೂನ್ ಫಿಯಸ್ಟ’ದ ಹೊರಾಂಗಣ ದೇಸಿ ಆಟಗಳು.
ದೇಸಿ ಕ್ರೀಡೆಗಳ ಕಲರವ:
ಲಗೋರಿ, ಚಿನ್ನಿದಾಂಡು, ಬುಗುರಿ, ಕುಂಟೆ ಬಿಲ್ಲೆ ಮತ್ತು ಗೋಲಿ ಆಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವೈದ್ಯಕೀಯ ವಿದ್ಯಾರ್ಥಿಗಳು ಕಮಾಲ್ ಮಾಡಿದರು. ಖುಷಿ ಖುಷಿಯಾಗಿ ಆಡಿದರು. ಗ್ರಾಮೀಣ ಪ್ರದೇಶದಲ್ಲಿ ಆಟವಾಡುವ ಕುಂಟೆಬಿಲ್ಲೆ
ಆಡಿದ ಯುವತಿಯರು ಸಂತೋಷ ಪಟ್ಟರು. ಕುಂಟೆಬಿಲ್ಲಿನ ಬಾಕ್ಸ್ ನೊಳಗೆ ಹೆಜ್ಜೆ ಹಾಕುತ್ತಾ ಖುಷಿಪಟ್ಟರು.
ಲಗೋರಿಯ ಸೊಬಗು:
ಲಗೋರಿ ಆಟದಲ್ಲಿ ಪಾಲ್ಗೊಂಡವರು ಚೆನ್ನಾಗಿಯೇ ಆಡಿದರು. ಲಗೋರಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇತ್ತೀಚಿನ ದಿನಗಳ ಒತ್ತಡದ ಜೀವನದಲ್ಲಿ ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ
ಆಟವಾಡುವುದು ಕಡಿಮೆ. ಸ್ನೇಹಿತರೆಲ್ಲರೂ ಸೇರಿಕೊಂಡು ಫ್ರೆಂಡ್ ಶಿಪ್ ಡೇ ಅನ್ನು ಸಂಭ್ರಮದಲ್ಲಿಯೇ ಆಚರಿಸಿದರು. ಕಾಕತಾಳೀಯ ಎಂಬಂತೆ ಭಾನುವಾರ ಸ್ನೇಹಿತರ ದಿನ. ಅಂದೇ ಎಲ್ಲಾ ಸಹಪಾಠಿಗಳು ಒಟ್ಟಿಗೆ ಸೇರಿ ಈ ಕ್ರೀಡೆಗಳಲ್ಲಿ
ಪಾಲ್ಗೊಂಡಿದ್ದು ಸಹ ವಿಶೇಷವೇ.
ಬುಗುರಿ ಆಡಿಸಿದರು:
ಇನ್ನು ಬುಗುರಿ ಆಡಿಸುವುದು ಅಷ್ಟು ಸುಲಭವಲ್ಲ. ಬುಗುರಿಗೆ ದಾರ ಸುತ್ತಿ ಅದನ್ನು ಗಿರ ಗಿರ ಅಂತಾ ತಿರುಗಿಸುವುದು ಅಂದರೆ ಸುಲಭನಾ. ಪರಿಣಿತಿ ಹೊಂದಿರುವವರೇ ಕೆಲವೊಮ್ಮೆ ಎಡವುತ್ತಾರೆ. ಆದ್ರೆ, ಕೆಲ ವಿದ್ಯಾರ್ಥಿಗಳು ತಮಗೆ ಆಟ ಗೊತ್ತಿರುವಂತೆ
ಗಿರಗಿರ ಅಂತಾ ಬುಗುರಿ ತಿರುಗಿಸಿದರು. ಕೆಲವೊಬ್ಬರು ಕೈಯ ಮೇಲೆ ಬುಗುರಿ ಹಾಕಿಕೊಳ್ಳುತ್ತಾ ಅಭ್ಯಾಸ ಮಾಡುತ್ತಿದ್ದದ್ದು ಕಂಡು ಬಂತು.
“ಗೋಲಿ” ಮಾರ್:
ಇನ್ನು ಗೋಲಿ ಆಟವೂ ಗಮನ ಸೆಳೆಯಿತು. ಸಣ್ಣ ಸಣ್ಣ ಗೋಲಿಗಳನ್ನು ಹಿಡಿದು ಗೋಲಿ ಆಟದಲ್ಲಿ ಪಾಲ್ಗೊಂಡ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಚೆನ್ನಾಗಿಯೇ ಆಡಿದರು. ಎಲ್ಲರೂ ಖುಷಿ ಖುಷಿಯಿಂದಲೇ ಪಾಲ್ಗೊಂಡು ಸಂಭ್ರಮ ಪಟ್ಟಿದ್ದು
ಗಮನ ಸೆಳೆಯಿತು.
ಚಿನ್ನಿದಾಂಡು ಆಟ ವೆರಿ ವೆರಿ ಸ್ಪೆಷಲ್:
ಇನ್ನು ಚಿನ್ನಿದಾಂಡು ಆಟವೂ ಗಮನ ಸೆಳೆಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಿನ್ನಿದಾಂಡು ಆಟದಲ್ಲಿಯೂ ವಿದ್ಯಾರ್ಥಿಗಳು ಕಮಾಲ್ ಮಾಡಿದರು. ಥೇಟ್ ಹಳ್ಳಿ ಹುಡುಗರಂತೆ ಆಡಿದರು.
ಯೋಗ ಗುರುಗಳು ಏನಂದ್ರು…?
ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ಗುರುಗಳಾದ ಮಂಜುನಾಥ್ ಅವರು ಮಾತನಾಡಿ ಇಂತಹ ದೇಸಿ ಆಟಗಳಲ್ಲಿ ಆಕ್ಯುಪಂಚರ್ ಚಿಕಿತ್ಸೆ ಅಡಗಿರುತ್ತದೆ. ಇಂಥ ಆಟಗಳನ್ನು ಆಡುವುದರಿಂದ ಎಷ್ಟೋ ನರರೋಗಗಳು ಬಾರದಂತೆ
ತಡೆಯಬಹುದು ಎಂದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ…!
ಪ್ರಾಂಶುಪಾಲರ ಡಾ. ಎಸ್. ಬಿ. ಮುರುಗೇಶ್ ಮಾತನಾಡಿ ಇಂತಹ ಆಟಗಳಿಂದ ನಮ್ಮ ದೇಹದ ಬಹಳಷ್ಟು ಅಂಗಾಂಗಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಗೋಲಿ ಬುಗುರಿ ಅಂತಹ ಆಟಗಳಿಂದ ನಮ್ಮ ಮೆದುಳು ಚುರುಕುಗೊಂಡು ದೃಷ್ಟಿ ಉತ್ತಮವಾಗುತ್ತದೆ ಇಂತಹ ಆಟಗಳಿಂದ ಆಗುವ ದೈಹಿಕ ಹಾಗೂ ಮಾನಸಿಕ ಉಪಯೋಗಗಳನ್ನು ಎಲ್ಲರಿಗೂ ತಿಳಿಸುವುದು ಈ ದೇಸಿ ಆಟಗಳ ಮುಖ್ಯ ಉದ್ದೇಶವಾಗಿದೆ. ನಮ್ಮ ಕಾಲೇಜಿನಿಂದ ಇಂತಹ ಒಂದು ಉತ್ಸವವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರೆಗೂ ಹಾಗೂ ನಮ್ಮ ಕಾಲೇಜಿನ ಆಡಳಿತ ಮಂಡಳಿಯವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಕ್ರೀಡೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ, ವಿದ್ಯಾರ್ಥಿ ಸಂಘದ ಕ್ರೀಡಾ ಸಮಿತಿಯ ಆಸ್ಟಿನ್, ಚಂದನ್, ನಿರೀಕ್ಷಾ, ಮಹಾಲಕ್ಷ್ಮಿ, ನಿಖಿಲ್, ದೀಪ್ ಅವರು ಕ್ರೀಡೆಗಳ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಯೋಗ ಗುರು ಗೀತಮ್ಮ, ಕಾಲೇಜಿನ ಪ್ರೊಫೆಸರ್ ಗಳಾದ ಡಾ.ಮಂಜುನಾಥ್ ತೆಂಬದ್, ಡಾ. ಶಿವಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಾತ್ವಿಕ್ ಅರಸ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
Friendship Day, Friendship Day Spl, Friendship Day Sports, Friendship Day News, Friendship Day Suddi, Friendship Day News Updates, Friendship Day Suddi Updates