Home ದಾವಣಗೆರೆ ನಿರುದ್ಯೋಗಿ ಪುರುಷರಿಗೆ ಉಚಿತ ದ್ವಿಚಕ್ರ ವಾಹನ ರಿಪೇರಿ ತರಬೇತಿ: ಊಟ, ವಸತಿ ಫ್ರೀ!
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ನಿರುದ್ಯೋಗಿ ಪುರುಷರಿಗೆ ಉಚಿತ ದ್ವಿಚಕ್ರ ವಾಹನ ರಿಪೇರಿ ತರಬೇತಿ: ಊಟ, ವಸತಿ ಫ್ರೀ!

Share
ನಿರುದ್ಯೋಗಿ
Share

ದಾವಣಗೆರೆ: ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗ ಕಂಡುಕೊಳ್ಳಲು ಸುವರ್ಣ ಅವಕಾಶವೊಂದು ಒದಗಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿರುದ್ಯೋಗಿ ಪುರುಷರಿಗಾಗಿ ಉಚಿತ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವೀಸಿಂಗ್ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಜುಲೈ 6 ರಿಂದ ಆರಂಭವಾಗಲಿರುವ ಈ ತರಬೇತಿಯು ಒಟ್ಟು 30 ದಿನಗಳ ಕಾಲ ನಡೆಯಲಿದ್ದು, ಇಂಧನ (ಪೆಟ್ರೋಲ್) ಮತ್ತು ವಿದ್ಯುತ್ ಚಾಲಿತ (EV) ದ್ವಿಚಕ್ರ ವಾಹನಗಳ ರಿಪೇರಿಯ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ.

ಅರ್ಹತೆ ಮತ್ತು ಉಚಿತ ಸೌಲಭ್ಯಗಳು:

ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ 18 ರಿಂದ 45 ವರ್ಷ ವಯೋಮಿತಿಯ ನಿರುದ್ಯೋಗಿ ಪುರುಷರು ಈ ಶಿಬಿರದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ವಸತಿ, ಊಟ ಹಾಗೂ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಬಿಪಿಎಲ್ (BPL) ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರಲಿದ್ದು, ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು. ತರಬೇತಿ ಯಶಸ್ವಿಯಾಗಿ ಮುಗಿದ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಅಧಿಕೃತ ಪ್ರಮಾಣಪತ್ರ ವಿತರಿಸಲಾಗುವುದು.

ನೇರ ಸಂದರ್ಶನದ ವಿವರ:

ಆಸಕ್ತಿಯುಳ್ಳ ಅಭ್ಯರ್ಥಿಗಳು ಜೂನ್ 24 ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ವಿದ್ಯಾರ್ಹತೆ ಮತ್ತು ವಿಳಾಸದ ದಾಖಲಾತಿಗಳೊಂದಿಗೆ (ಆಧಾರ್ ಕಾರ್ಡ್, ಅಂಕಪಟ್ಟಿ ಇತ್ಯಾದಿ) “ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ” ಇಲ್ಲಿಗೆ ನೇರವಾಗಿ ಹಾಜರಾಗಬಹುದು.

ಒಂದು ವೇಳೆ ನೇರವಾಗಿ ಸಂದರ್ಶನಕ್ಕೆ ಬರಲು ಸಾಧ್ಯವಾಗದಿದ್ದರೆ, ಅಭ್ಯರ್ಥಿಗಳು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಜೂನ್ 24 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆಗಳು: 8970476050, 6363139123, 9591514154, 9686248369, 9886935603.

Share

Leave a comment

Leave a Reply

Your email address will not be published. Required fields are marked *