Home ದಾವಣಗೆರೆ ವೀರಶೈವ ಲಿಂಗಾಯತ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಮೆಡಿಕಲ್ ಸೀಟ್: ಸಿರಿಗೆರೆ ಶ್ರೀಗಳ ಮನವಿಗೆ ಸ್ಪಂದನೆ!
ದಾವಣಗೆರೆನವದೆಹಲಿಬೆಂಗಳೂರು

ವೀರಶೈವ ಲಿಂಗಾಯತ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಮೆಡಿಕಲ್ ಸೀಟ್: ಸಿರಿಗೆರೆ ಶ್ರೀಗಳ ಮನವಿಗೆ ಸ್ಪಂದನೆ!

Share
Share

SUDDIKSHANA KANNADA NEWS/DAVANAGERE/DATE:24_12_2025

ಬೆಂಗಳೂರು: ವೀರಶೈವ ಲಿಂಗಾಯತ ವೈದ್ಯಕೀಯ ಕಾಲೇಜಿನಲ್ಲಿ ಉಚಿತವಾಗಿ 10 ಮೆಡಿಕಲ್ ಸೀಟ್ ಸಮಾಜದ ವಿದ್ಯಾರ್ಥಿಗಳಿಗೆ ನೀಡುವಂತೆ ಸಿರಿಗೆರೆ ತರಳಬಾಳು ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸಲಹೆ ನೀಡಿದರು. ಇದಕ್ಕೆ ಪ್ರಭಾಕರ ಕೋರೆ ಸೇರಿದಂತೆ ಸಮಾರಂಭದಲ್ಲಿ ನೆರೆದಿದ್ದವರು ಸಮ್ಮತಿ ಸೂಚಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಆಯೋಜಿಸಲಾದ ಮಾಜಿ ಸಚಿವ ಹಾಗೂ ಮಹಾಸಭಾ ರಾಷ್ಟ್ರಾಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿಗಳಲ್ಲಿ ಪ್ರತಿಭಾನ್ವಿತರನ್ನು ಸೂಕ್ತ ಪರೀಕ್ಷೆಯ ಮೂಲಕ ಆಯ್ಕೆಮಾಡಿ ಸುಮಾರು 10 ವಿದ್ಯಾರ್ಥಿಗಳಿಗೆ ಫ್ರೀ ಸೀಟ್ ನೀಡುವಂತೆ ಹೇಳಿದರು.

ಇದಕ್ಕೆ ವೇದಿಕೆಯ ಮೇಲಿದ್ದ ಪ್ರಭಾಕರ ಕೋರೆಯವರೂ ಸೇರಿ ಸಮಸ್ತರು ಅತ್ಯಂತ ಸಂತೋಷದಿಂದ ಒಪ್ಪಿದರು. ಆಹ್ವಾನಿತ ಸಾವಿರಾರು ಜನರು ಸಾಕ್ಷೀಭೂತರಾಗಿ ಅತ್ಯಂತ ಸಂತಸದಿಂದ ಕರತಾಡನ ಮಾಡಿದರು.

ಇದು ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರಿಗೆ ಸಲ್ಲಿಸಿದ ನೈಜವಾದ ಹೃದಯಪೂರ್ವಕ ನುಡಿ ನಮನವಾಯಿತು.

Share

Leave a comment

Leave a Reply

Your email address will not be published. Required fields are marked *