ನವದೆಹಲಿ: ಕೇಂದ್ರ ಸರ್ಕಾರವು ‘ನ್ಯಾಷನಲ್ ಸ್ಟೂಡೆಂಟ್ ಲ್ಯಾಪ್‌ಟಾಪ್ ಸ್ಕೀಮ್ 2026’ (National Student Laptop Scheme 2026) ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ, ಪ್ರಮುಖವಾಗಿ ವಾಟ್ಸಾಪ್‌ನಲ್ಲಿ (WhatsApp) ಭಾರೀ ವೈರಲ್ ಆಗುತ್ತಿದೆ. ಆದರೆ, ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣವಾಗಿ ಸುಳ್ಳು ಮತ್ತು ಸೈಬರ್ ವಂಚನೆಯ ಜಾಲವಾಗಿದೆ ಎಂದು ಎಚ್ಚರಿಸಿದೆ.
ವೈರಲ್ ಮೆಸೇಜ್‌ನಲ್ಲಿ ಏನಿದೆ?
ವಾಟ್ಸಾಪ್‌ನಲ್ಲಿ ಹರಿCapitalದಾಡುತ್ತಿರುವ ಸಂದೇಶದಲ್ಲಿ “ಸ್ಟೂಡೆಂಟ್ಸ್ ಲ್ಯಾಪ್‌ಟಾಪ್ ಸಪೋರ್ಟ್ 2026” ಹೆಸರಿನ ಆನ್‌ಲೈನ್ ನೋಂದಣಿ ನಮೂನೆಯ ಲಿಂಕ್ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ವಿದ್ಯಾರ್ಥಿಯ ಹೆಸರು, ಶಿಕ್ಷಣ ಮಟ್ಟ ಹಾಗೂ ಅಪೇಕ್ಷಿತ ಲ್ಯಾಪ್‌ಟಾಪ್ ಬ್ರ್ಯಾಂಡ್ ಆಯ್ಕೆ ಮಾಡಿದರೆ ಸುಮಾರು 9,60,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಸಿಗಲಿದೆ ಎಂದು ಜನರನ್ನು ನಂಬಿಸಲಾಗುತ್ತಿದೆ.
PIB ಫ್ಯಾಕ್ಟ್ ಚೆಕ್ ನೀಡಿರುವ ಎಚ್ಚರಿಕೆ
ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿರುವ PIB ಫ್ಯಾಕ್ಟ್ ಚೆಕ್ ಘಟಕ, ಕೇಂದ್ರ ಸರ್ಕಾರವಾಗಲಿ ಅಥವಾ ಯಾವುದೇ ಸಚಿವಾಲಯವಾಗಲಿ ಇಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ ಎಂದು ಖಚಿತಪಡಿಸಿದೆ. ಸೈಬರ್ ಅಪರಾಧಿಗಳು ಸಾರ್ವಜನಿಕರ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹಾಗೂ ಆಧಾರ್ ಮಾಹಿತಿಯನ್ನು ಕದಿಯಲು ಇಂತಹ ನಕಲಿ ವೆಬ್‌ಸೈಟ್ ಲಿಂಕ್‌ಗಳನ್ನು ಬಳಸುತ್ತಿದ್ದಾರೆ.
ಸುರಕ್ಷತಾ ಸಲಹೆಗಳು:
ಯಾವುದೇ ಅಜ್ಞಾತ ಅಥವಾ ಆಕರ್ಷಕ ಆಫರ್ ನೀಡುವ ಲಿಂಕ್‌ಗಳನ್ನು (Links) ಕ್ಲಿಕ್ ಮಾಡಬೇಡಿ.
ವಾಟ್ಸಾಪ್ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನ್-ವೆರಿಫೈಡ್ ಸುದ್ದಿಗಳನ್ನು ಇತರರಿಗೆ ಫಾರ್ವರ್ಡ್ ಮಾಡಬೇಡಿ.
ಸರ್ಕಾರದ ಅಧಿಕೃತ ಯೋಜನೆಗಳ ಮಾಹಿತಿಗಾಗಿ
.gov.inಅಥವಾ.nic.inಹೊಂದಿರುವ ವೆಬ್‌ಸೈಟ್‌ಗಳನ್ನು ಮಾತ್ರ ಪರಿಶೀಲಿಸಿ.
ಸೈಬರ್ ವಂಚನೆ ಬಗ್ಗೆ ದೂರು ನೀಡುವುದು ಹೇಗೆ?
ನಿಮಗೆ ಅಥವಾ ನಿಮ್ಮಿಷ್ಟದವರಿಗೆ ಇಂತಹ ಯಾವುದೇ ಅನುಮಾನಾಸ್ಪದ ಮೆಸೇಜ್‌ಗಳು ಬಂದರೆ, ಅವುಗಳನ್ನು PIB ಫ್ಯಾಕ್ಟ್ ಚೆಕ್ ತಂಡಕ್ಕೆ ಕಳುಹಿಸಿ ಪರಿಶೀಲಿಸಬಹುದು:
ವಾಟ್ಸಾಪ್ ಸಂಖ್ಯೆ: +91 8799711259
ಇಮೇಲ್ ವಿಳಾಸ: factcheck@pib.gov.in
- Cyber fraud alert
- Free Laptop Scheme 2026 WhatsApp scam
- Government free laptop scheme truth
- National Student Laptop Scheme 2026 fake news
- Phishing link warning PIB
- PIB Fact Check warning
- PIB ಸ್ಪಷ್ಟನೆ
- ಉಚಿತ ಲ್ಯಾಪ್‌ಟಾಪ್ ಯೋಜನೆ 2026 ನಕಲಿ
- ಪಿಐಬಿ ಫ್ಯಾಕ್ಟ್ ಚೆಕ್
- ರಾಷ್ಟ್ರೀಯ ವಿದ್ಯಾರ್ಥಿ ಲ್ಯಾಪ್‌ಟಾಪ್ ಯೋಜನೆ ಸತ್ಯಾಸತ್ಯತೆ
- ವಾಟ್ಸಾಪ್ ವಂಚನೆ ಲಿಂಕ್
- ಸರ್ಕಾರಿ ಉಚಿತ ಲ್ಯಾಪ್‌ಟಾಪ್ ಯೋಜನೆ
- ಸೈಬರ್ ಕ್ರೈಮ್ ಎಚ್ಚರಿಕೆ





Leave a comment