ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

2 ತಿಂಗಳ ಉಚಿತ ಪತ್ರಿಕೋದ್ಯಮ ತರಬೇತಿಗಾಗಿ ಅರ್ಜಿ ಆಹ್ವಾನ; ಯಾರೆಲ್ಲ ಅರ್ಜಿ ಸಲ್ಲಿಸಬಹುದು?

On: September 22, 2024 10:04 AM
Follow Us:
---Advertisement---

ಅರ್ಹ ಅಭ್ಯರ್ಥಿಗಳಿಂದ 2 ತಿಂಗಳ ಉಚಿತ ಪತ್ರಿಕೋದ್ಯಮ ತರಬೇತಿಗಾಗಿ(free jurnalism training) ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು? ಇತರೆ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ / ಪಿ.ಯು.ಸಿ ವ್ಯಾಸಂಗ ಪೂರ್ಣಗೊಳಿಸಿರುವ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಪತ್ರಿಕೋದ್ಯಮ ವಿಷಯದಲ್ಲಿ ಪ್ರಾಯೋಗಿಕ ತರಬೇತಿ ಮತ್ತು ಫೀಲ್ಡ್ ಅನುಭವವನ್ನು ನೀಡಲು ಎಲೆಕ್ಟ್ರಾನಿಕ್ ಮಾಧ್ಯಮದ ಕುರಿತು ಬೆಂಗಳೂರಿನಲ್ಲಿ ವಸತಿ ಸಹಿತ ಎರಡು ತಿಂಗಳ ಉಚಿತ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

jurnalism training last date for application- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತ ಅರ್ಹ ಅಭ್ಯರ್ಥಿಗಳು 25 ಸೆಪ್ಟೆಂಬರ್ 2024ರ  ಸಂಜೆ 5.00 ಗಂಟೆ ಒಳಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಕೇಂದ್ರ ಹಾಗೂ ವಲಯ ಕಛೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

jurnalism training Selection process-ಅಯ್ಕೆ ವಿಧಾನ:

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಯ್ಕೆಯನ್ನು ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷತೆಯ ಸಮಿತಿಯಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Documents for jurnalism training application- ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Adhar card.2) ಪೋಟೋ/Photo.3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/caste and income certificate.4) ಬ್ಯಾಂಕ್ ಪಾಸ್ ಬುಕ್ ಪ್ರತಿ/Bank pass book.5) ಅರ್ಜಿ ನಮೂನೆ/Application form.

Free jurnalism training-ಸಂಪೂರ್ಣ ಉಚಿತ ತರಬೇತಿ ಇದಾಗಿರುತ್ತದೆ:

ಈ ತರಬೇತಿಯು ಉಚಿತ ಊಟ ಮತ್ತು ವಸತಿ ಸಹಿತವಾಗಿದ್ದು ಒಟ್ಟು ಎರಡು ತಿಂಗಳು ನಡೆಯುತ್ತದೆ. ಅರ್ಹ ಅಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Contact details-ಸಂಪರ್ಕ ವಿಳಾಸ:

ನಂ.3, 16ಕೆ, ಬಂಜಾರ ಭವನ, 1ನೇ ಮಹಡಿ ಮಿಲ್ಲರ್ಸ್‌ ಟ್ಯಾಂಕ್‌ ಬಂಡ್‌ ರಸ್ತೆ, ವಸಂತ ನಗರ, ಬೆಂಗಳೂರು-52ಕಛೇರಿ ದೂರವಾಣಿ:080-22285561, 62, 63, 65E-mail: ktdclit@gmail.com

Website- Click here

Join WhatsApp

Join Now

Join Telegram

Join Now

Leave a Comment