SUDDIKSHANA KANNADA NEWS/ DAVANAGERE/ DATE:01-09-2023
ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಹಾಗೂ ಜೆ.ಜೆ.ಎಂ.ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಬೆಳಗಾಂ ವಲಯಮಟ್ಟದ ಪುರುಷರ ಫುಟ್‌ಬಾಲ್ (Football) ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಈ ಪಂದ್ಯಾವಳಿಯಲ್ಲಿ ಬೆಳಗಾಂ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕೊಪಪ್ಳ, ಹಾವೇರಿ ಕಾಲೇಜುಗಳ 20 ತಂಡಗಳು ಭಾಗವಹಿಸಿದ್ದು, ಈ ತಂಡಗಳ ನಡುವೆ ಸೆಣಸಾಟ ಜಬರ್ದಸ್ತ್ ಆಗಿರುತ್ತೆ.
ಪಂದ್ಯಾವಳಿಗೆ ಫುಟ್ ಬಾಲ್ (Football) ಒದೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅವರು, ನಿಮ್ಮ ಪ್ರತಿಭೆ ಕೇವಲ ಜಿಲ್ಲೆಗೆ ಮೀಸಲಾಗದೇ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು.
ಈ ಸುದ್ದಿಯನ್ನೂ ಓದಿ:
DEVARABELAKERE DAM: ಸೌಂದರ್ಯದ ಖನಿ ಹರಿಹರದ ದೇವರಬೆಳಕೆರೆ ಪಿಕಪ್ ಡ್ಯಾಂ ಕಾಲುವೆಗಳ ಹೂಳು ನೋಡಬನ್ನಿ…! ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ನಂದಿಗಾವಿ ಶ್ರೀನಿವಾಸ್
ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ 25 ರಿಂದ 40 ವರ್ಷದವರು ಹಲವಾರು ಕಾರಣಗಳಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮ ನಿತ್ಯದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿರಿ. ನಿಮ್ಮ ಓದಿನ, ಕೆಲಸಗಳ ಒತ್ತಡದಿಂದ ಹೊರ ಬಂದು
ಹೆಚ್ಚು ಹೆಚ್ಚು ದೈಹಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. ಇದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ವಿಶ್ವವಿದ್ಯಾನಿಲಯದಿಂದ ನಿಮಗೆ ಇರುವ ಕ್ರೀಡಾ ಸವಲತ್ತುಗಳನ್ನು ಚೆನ್ನಾಗಿ ಬಳಸಿಕೊಂಡು ರಾಜ್ಯ, ರಾಷ್ಟçಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಕಾಲೇಜಿಗೆ, ಜಿಲ್ಲೆಗೆ ಕೀರ್ತಿ ತನ್ನಿರಿ ಎಂದು ಹಾರೈಸಿದರು.
ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ಮುರುಗೇಶ ಮಾತನಾಡಿ, ಕ್ರೀಡೆಗಳನ್ನು ಬರೀ ಕ್ರೀಡಾ ಮನೋಭಾವದಿಂದ ಆಡಿ, ದ್ವೇಷ ಬೇಡ. ಪ್ರತಿವರ್ಷ ನಮ್ಮ ಕಾಲೇಜಿನಿಂದ ಸಾಕಷ್ಟು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ರಾಜೀವ್ ಗಾಂಧಿ ವಿವಿಯ ಬೆಳಗಾಂ ವಲಯದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂದಿನ ಪಂದ್ಯದಲ್ಲಿ ಬಹಳಷ್ಟು ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ. ನೀವು ಕ್ರೀಡೆಗಳಲ್ಲಿ ಬಹುಮಾನ ಗಳಿಸುವುದು ಮುಖ್ಯವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾಂ ವಲಯದ ಕಾಡ್ಸ್ ಕೋ ಆರ್ಡಿನೇಟರ್ ಸಿ.ಪಿ.ಮಹೇಶ, ಆರ್‌ಜಿಯುಎಚ್‌ಎಸ್‌ನ ದೈಹಿಕ ನಿರ್ದೇಶಕರ ಸಂಘದ ಅಧ್ಯಕ್ಷರು, ವಿಜಯನಗರ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೋಸೆಫ್ ಅನಿಲ್, ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್.ಗೋಪಾಲಕೃಷ್ಣ, ಜಿಎಂ ಫಾರ್ಮಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಹುಬ್ಬಳ್ಳಿಯ ಕಿಮ್ಸ್ ದೈಹಿಕ ಶಿಕ್ಷಣ ನಿರ್ದೇಶಕ ಅರುಣ ಗೌಡಲ್ಲರ್, ತರಬೇತುದಾರರಾದ
ಗ್ಯಾಬ್ರಿಯಲ್, ರೆಹಮಾನ್, ನಾಗೇಶ, ಇಮ್ತಿಯಾಜ್, ಶಾಂತಕುಮಾರ, ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸೇರಿದಂತೆ ಇತರರು ಭಾಗವಹಿಸಿದ್ದರು.