SUDDIKSHANA KANNADA NEWS/ DAVANAGERE/DATE:21_09_2025
ದಾವಣಗೆರೆ: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಹುಟ್ಟು ಹಬ್ಬದ ಅಂಗವಾಗಿ ಬಾಡ ಕ್ರಾಸ್ ನಲ್ಲಿರುವ ಗಾನಯೋಗಿ ಪಂಚಾಕ್ಷರ ಗವಾಯಿ ಮಠದಲ್ಲಿ 27ನೇ ವಾರ್ಡಿನ ಮುಖಂಡ ಶ್ರೀನಿವಾಸ್ ಕಲ್ಪತರು ಅವರ ನೇತೃತ್ವದಲ್ಲಿ ಸಮರ್ಥ್ ಶಾಮನೂರು ಅವರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.
READ ALSO THIS STORY: ದಾವಣಗೆರೆ ಹಿಂದೂಮಹಾಸಭಾ ಗಣಪನ ಅದ್ಧೂರಿ ವಿಸರ್ಜನೆ: ಡಿಜೆ ಇಲ್ಲದ ಮೆರವಣಿಗೆ ಹೇಗಿತ್ತು ಗೊತ್ತಾ?
ಈ ಕಾರ್ಯಕ್ರಮದಲ್ಲಿ ಸಮರ್ಥ್ ಶಾಮನೂರ್ ರವರು ಅಂಧ ಮಕ್ಕಳ ದಿನನಿತ್ಯದ ಜೀವನ ಶೈಲಿಯ ಬಗ್ಗೆ ಮಾಹಿತಿ ಪಡೆದು ಅವರ ಯೋಗಕ್ಷೇಮ ವಿಚಾರಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.
ಶ್ರೀನಿವಾಸ್ ಕಲ್ಪತರು ಅವರು ದಾವಣಗೆರೆ ಕೊಡುಗೈ ದಾನಿ ಎಂದು ಹೆಸರುವಾಸಿಯಾಗಿರುವಂತ ಶಾಮನೂರು ಶಿವಶಂಕರಪ್ಪಾಜಿ ಈ ರೀತಿಯ ಸಾವಿರಾರು ಮಠಗಳಿಗೆ ದಾನವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಐಗೂರು ಚಂದ್ರಶೇಖರ್, ವರುಣ್ , ಪಾಲಿಕೆ ನಾಮ ನಿರ್ದೇಶನ ಸದಸ್ಯ ಪಾಪಣ್ಣಿ, ದಾವಣಗೆರೆ ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ. ಜೆ. ನಾಗರಾಜ್, ವಾರ್ಡ್ ಅಧ್ಯಕ್ಷ ಗೋಣೆಪ್ಪ, ಮಠದ ವ್ಯವಸ್ಥಾಪಕರು, ಬಿ ಕೆ. ವೆಂಕಟೇಶ್, ಆರ್. ಬಸವರಾಜ್, ಶ್ರೀನಿವಾಸ್ ಮೌರ್ಯ, ಪ್ರದೀಪ್, ಸುಲೇಮಾನ್, ಅಕ್ಬರ್, ದುಗ್ಗಪ್ಪ, ಇತರರು ಉಪಸ್ಥಿತರಿದ್ದರು.