(Food Items) ಜನರು ಮಾರುಕಟ್ಟೆಯಲ್ಲಿ ಆಹಾರ, ಔಷಧಿ ಸೇರಿ ಮುಂತಾದ ವಸ್ತುಗಳನ್ನು ಖರೀದಿಸುತ್ತಾರೆ. ಖರೀದಿಸುವ ಮುನ್ನ ಅದರ ಮುಕ್ತಾಯದ ದಿನಾಂಕವನ್ನು ನೋಡಿ ನಂತರ ಖರೀಸುತ್ತಾರೆ. ಆದರೆ ಅದನ್ನು ಖರೀದಿಸಿ ಹಲವು ದಿನಗಳು ಮನೆಯಲ್ಲೇ ಇಟ್ಟಿರುತ್ತಾರೆ. ಆಗ ಅದರ ಮುಕ್ತಾಯ ದಿನಾಂಕ ಮುಗಿದು ಹೋಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಮಂದಿ ಆ ವಸ್ತು ಬಳಸಬೇಕೋ ಅಥವಾ ಬಿಸಾಡಬೇಕೋ ಎಂಬ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ.
ಕ್ಲಿನಿಕಲ್ ಡಯೆಟಿಷಿಯನ್ ಗಳ ಪ್ರಕಾರ, ಸಾಮಾನ್ಯವಾಗಿ ಮುಕ್ತಾಯ ದಿನಾಂಕವನ್ನು ಗಮನದಲ್ಲಿಟ್ಟುಕೊಳ್ಳದೇ ಆಹಾರ ಪದಾರ್ಥ ಅಂದರೆ ಗೋದಿ ಹಿಟ್ಟು, ರವೆಯಂತಹ ಆಹಾರ ಪದಾರ್ಥಗಳನ್ನು ಬಳಸುತ್ತಾರೆ. ಕೆಲವು ವಸ್ತಗಳು ಮುಕ್ತಾಯ ದಿನಾಂಕದ ನಂತರವೂ ಉತ್ತಮ ಸ್ಥಿತಿಯಲ್ಲಿ ಉಳಿಯಬಹುದು. ಆದರೆ ಇನ್ನು ಕೆಲವು ವಸ್ತುಗಳು ಮುಕ್ತಾಯದ ದಿನಾಂಕದ ಒಳಗಾಗಿ ಹಾಳಾಗಬಹುದು.
ಉದಾಹರಣೆಗೆ ದ್ವಿದಳ ಧಾನ್ಯಗಳು, ಅಕ್ಕಿಯಂತಹ ಆಹಾರ ಪದಾರ್ಥಗಳು ಅವು ಮುಕ್ತಾಯ ದಿನಾಂಕದ ನಂತರವೂ ಉತ್ತಮ ಸ್ಥಿತಿಯಲ್ಲಿ ಉಳಿಯಬಹುದು. ಬೀಜ, ಎಣ್ಣೆಕಾಳುಗಳು ಮತ್ತು ರವೆಗಳಂತಹ ವಸ್ತುಗಳನ್ನು ರೆಫ್ರಿಜರೇಟರ್ ನಲ್ಲಿ ಇಡುವುದರಿಂದ ಅವುಗಳ ಜೀವಿತಾವಧಿ ಸಹ ಹೆಚ್ಚಾಗುತ್ತದೆ. ಆದರೆ ಅದೇ ಔಷಧಿ ವಿಚಾರಕ್ಕೆ ಬರುವುದಾದರೆ ಮುಕ್ತಾಯದ ದಿನಾಂಕದ ನಂತರ ಔಷಧಿ ಬಳಸುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಯಾವುದೇ ವಸ್ತುವಿನ ಅವಧಿಯನ್ನು ತಯಾರಕರು ಪರೀಕ್ಷೆ, ಪ್ರಯೋಗಗಳನ್ನು ಮಾಡಿಯೇ ನಿರ್ಧರಿಸುತ್ತಾರೆ. ಅವಧಿ ಮುಗಿದ ನಂತರವೂ ಕೆಲವು ಆಹಾರ ಪದಾರ್ಥಗಳು ಉತ್ತಮವಾಗಿ ಕಂಡುಬಂದರೆ, ವಸ್ತುವು ಹಾಳಾಗದಿದ್ದರೆ, ಅದನ್ನು ತಿನ್ನಬಹುದು. ಆದರೂ ಯಾವುದೇ ವಸ್ತುವನ್ನು ಅದರ ಮುಕ್ತಾಯ ದಿನಾಂಕದ ನಂತರ ಬಳಸಬೇಕೆ ಅಥವಾ ಬೇಡವೇ ಎಂಬುದು ಒಂದು ಸಲ ಯೋಚಿಸಿ.