SUDDIKSHANA KANNADA NEWS/DAVANAGERE/DATE:07_10_2025
ಬೆಂಗಳೂರು: ಗುಂಡಿಗಳಿಂದ ಕಂಗೆಟ್ಟಿರುವ ಬೆಂಗಳೂರಿನ ಜನರಿಗೆ ನೆಮ್ಮದಿ ಸಿಗುವ ಕಾಲ ಹತ್ತಿರವಾಗುತ್ತಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ಗುಂಡಿಗಳ ಸಾಮ್ರಾಜ್ಯ ಬೆಂಗಳೂರು ಆಗಿದೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧಿಕಾರಿಗಳು, ಗುತ್ತಿಗೆದಾರರಿಗೆ ಡೆಡ್ ಲೈನ್ ಕೊಟ್ಟಿದ್ದಾರೆ. ಆದ್ರೆ, ರಸ್ತೆಗಳು ಸದ್ಯಕ್ಕೆ ದುರಸ್ತಿಯಾಗುವ ಲಕ್ಷಣ ಗೋಚರಿಸುತ್ತಿಲ್ಲ.
READ ALSO THIS STORY: ಭರ್ಜರಿ ಏರಿಕೆ ದಾಖಲಿಸಿದ ಧಾರಣೆ: 65 ಸಾವಿರ ರೂಪಾಯಿ ಗಡಿ ದಾಟಿದ ಪ್ರತಿ ಕ್ವಿಂಟಲ್ ಅಡಿಕೆ ದರ!
ಬೆಂಗಳೂರಿನಲ್ಲಿ ಬಿದ್ದಿರುವ ಗುಂಡಿಗಳೇ ಬಿಜೆಪಿಗೆ ಅಸ್ತ್ರವಾಗಿದೆ. ಉಪಮುಖ್ಯಮಂತ್ರಿಯೂ ಆದ ಬೆಂಗಳೂರು ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಬಿಜೆಪಿ ಹಾಕಿದೆ.
ಬಿಜೆಪಿ ಕೇಳಿರುವ ಪ್ರಶ್ನೆಗಳು ಇವು:
- – ಅಧಿಕಾರಿಗಳಿಗೆ ಕೊಟ್ಟ ಡೆಡ್‌ಲೈನ್ ಎಲ್ಲಿಗೆ ಬಂತು?
- – ಗುಂಡಿ ಮುಚ್ಚಲು ಬಿಡುಗಡೆಯಾದ 750 ಕೋಟಿ ರೂ. ಯಾರ ಜೇಬು ಸೇರಿದೆ?
- – ಮುಚ್ಚದೆ ಉಳಿದಿರುವ ಗುಂಡಿಗಳು ಎಷ್ಟು?
- – ಗುಂಡಿ ಮುಚ್ಚುವ ಕಾರ್ಯದಿಂದ ಗುತ್ತಿಗೆದಾರರು ಹಿಂದೆ ಸರಿದಿದ್ಯಾಕೆ?
- – ರಸ್ತೆ ಮೇಲೆ ಫೋಟ್‌ಶೂಟ್ ಮಾಡಿಕೊಳ್ಳುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸುವಿರಾ?
ಈ ಪ್ರಶ್ನೆಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಕೇಳಿದೆ. ಇದಕ್ಕೆ ಯಾವ ರೀತಿಯಲ್ಲಿ ಡಿಕೆಶಿ ಉತ್ತರಿಸುತ್ತಾರೋ ಕಾದು ನೋಡಬೇಕಿದೆ.