ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಆಜಾದ್ ನಗರ ಪೊಲೀಸರು ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
READ ALSO THIS STORY: ವೀರಶೈವ ಲಿಂಗಾಯತ ಸಮುದಾಯ ಒಟ್ಟಾಗದಿದ್ದರೆ ಭವಿಷ್ಯದಲ್ಲಿ ಆಪತ್ತು ಖಚಿತ: ಎಲ್ಲಾ ಪಕ್ಷಗಳ ಧುರೀಣರು ಆತಂಕ ವ್ಯಕ್ತಪಡಿಸಿದ್ಯಾಕೆ?
ದಾವಣಗೆರೆಯ ಯಲ್ಮಮ್ಮ ನಗರದ ವೃದ್ಧೆ ಮೆಹಬೂಬ್ ಬೀ (69), ಅಹ್ಮದ್ ನಗರದ ಸೋಡಾ ವ್ಯಾಪಾರಿ ಮೊಹಮ್ಮದ್ ಹನೀಫ್ (52), ಮಂಡಕ್ಕಿ ಹಳೇ ಬೇತೂರು ವಾಸಿ ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಸಾದತ್ ಅಬ್ರಾರ್ (35), ರಜಾವುಲ್ಲಾ ಮುಸ್ತಫ ನಗರದ ಟೈಲ್ಸ್ ಕೆಲಸ ಮಾಡುತ್ತಿದ್ದ ಸೈಯದ್ ಇಮ್ರಾನ್ (22), ಕೊರಚರಹಟ್ಟಿಯ ಪ್ರಶಾಂತ್ (20) ಬಂಧಿತ ಆರೋಪಿಗಳು.
ಜಿಲ್ಲೆಯಲ್ಲಿ ಅಕ್ರಮವಾಗಿ ಮಾದಕ ದ್ರವ್ಯ ಮಾರಾಟ ಹಾಗೂ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿರಾಉಮಾ ಪ್ರಶಾಂತ್ ಅವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ
ತಂಡಗಳನ್ನು ರಚಿಸಿ ದಾವಣಗೆರೆ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯದಲ್ಲಿ ವಿಶೇಷ ಕಾರ್ಯಚರಣೆ ನಡೆಸಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್ ಎಸ್ ಎಂ ನಗರದ ಸ್ಟೆಡಿಯಂ ಹಿಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಜಾದ್ ನಗರ ಪಿಐ ಅಶ್ವಿನ್ ಕುಮಾರ ಹಾಗೂ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡವು ದಾಳಿ ಮಾಡಿದ ವೇಳೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಬಂಧಿತರಿಂದ ಮೂರು ಲಕ್ಷ ರೂಪಾಯಿ ಮೌಲ್ಯದ 1250 ಗ್ರಾಂ ಗಾಂಜಾ ಸೊಪ್ಪು, ಕೆಎ-17-ಇಪಿ-5133 ನೇ ಟಿವಿಎಸ್ ಎಕ್ಸೆಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪೊಲೀಸ್ ನಿರೀಕ್ಷಕ ಆಶ್ವಿನ್ ಕುಮಾರ್, ಪಿಎಸ್ ಐ ಮಂಜುನಾಥಸ್ವಾಮಿ, ಸಿಬ್ಬಂದಿಗಳಾದ ಮಂಜುನಾಥ ನಾಯ್ಕ್, ಕೃಷ್ಣಪ್ಪ ನಂದ್ಯಾಲ್, ವೆಂಕಟೇಶ್, ಲೋಕೇಶ್, ಖಾಜಾ ಹುಸೇನ್ ಅತ್ತಾರ್, ತನಿಖಾ ಸಹಾಯಕರಾದ ಸಲಹುದ್ದಿನ್ ಮಾಲತೇಶ ಕೆಳಗಿನಮನಿ, ಪರಶುರಾಮ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.