ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

On: October 13, 2025 8:41 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/DAVANAGERE/DATE:13_10_2025

ದಾವಣಗೆರೆ: ಅಮಲು ಬರುವ ಸಿರಫ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಸವನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

READ ALSO THIS STORY: ರೈಲ್ವೆ ನೇಮಕಾತಿ ಮಂಡಳಿಯ ಜೂನಿಯರ್ ಎಂಜಿನಿಯರ್ ನೇಮಕ: 2570 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ದಾವಣಗೆರೆಯ ಎಸ್ ಪಿಎಸ್ ನಗರದ ಅಂಗಡಿ ಕೆಲಸಗಾರ ಶಿವಕುಮಾರ (38), ಅಂಗಡಿ ಮಾಲೀಕ ಮೆಹಬೂಬ್ ನಗರದ ಅಜಿಮುದ್ದೀನ್ (37), ದೇವರಾಜ ಅರಸ್ ಬಡಾವಣೆಯ ಎ ಬ್ಲಾಕ್ ನ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಮಹಮದ್ ಶಾರೀಕ್ (35), ಚನ್ನಗಿರಿ ತಾಲೂಕಿನ ಹೊನ್ನೆಬಾಗಿಯ ಅಡಿಕೆ ವ್ಯಾಪಾರ ಮಂಡಲ ಹತ್ತಿರದ ಸೈಯದ್ ಬಾಬು ಅಲಿಯಾಸ್ ಯೂನೂಸ್, ಚನ್ನಗಿರಿಯ ಸೈದಾಮೊಹಲ್ಲಾದ ಆಟೋ
ಚಾಲಕ ಅಬ್ದುಲ್ ಗಫರ್ @ ಆಟೋಬಾಬು (48) ಬಂಧಿತ ಆರೋಪಿಗಳು.

ಬಂಧಿತರಿಂದ 100 ಎಂ.ಎಲ್ ನ ಒಟ್ಟು 340 Broncof-C cough Syrup ಬಾಟಲ್‌ಗಳು 2) 100 ಎಂ.ಎಲ್ ನ 15 EDEX-CT cough Syrup ಬಾಟಲ್‌ಗಳು 3) 20 ಸಣ್ಣ ಬಾಕ್ಸ್ ಗಳಲ್ಲಿರುವ aceclofenac Paracetamol & serratiopeptidase tablets, ಒಂದು ಹೊಂಡಾ ಆಕ್ಟಿವಾ ಬೈಕ್, 1200 ರೂ, ನಗದು ವಶಪಡಿಸಿಕೊಂಡಿದ್ದಾರೆ. ಔಷಧಿಗಳ ಮೌಲ್ಯ 1,25,504 ರೂ. ಆಗಿದೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

ಪ್ರಕರಣ ಪತ್ತೆ ಹಚ್ಚಿದ್ದು ಹೇಗೆ?

ಕಳೆದ ಎರಡು ದಿನಗಳ ಹಿಂದಿನ ರಾತ್ರಿ 9. 30 ಗಂಟೆ ಸುಮಾರಿನಲ್ಲಿ ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ಕರ್ತವ್ಯಕ್ಕೆ ನೇಮಿಸಿದ ಪಿ.ಎಸ್.ಐ ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವು ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೇ ಅಮಲು ಬರುವ ಸಿರಫ್ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ನಿಗ್ರಹ ಪಡೆಯುಸ್ಥಳದ ಮೇಲೆ ದಾಳಿ ನಡೆಸಿದ್ದು, ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೇ ಅಮಲು ಬರುವ ಸಿರಫ್ ಬಾಟಲಿಗಳನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ವೈದ್ಯರ ಸಲಹೆ ಇಲ್ಲದೇ, ಯುವ ಸಮೂಹಕ್ಕೆ ಹಾಗೂ ವ್ಯಸನಿಗಳಿಗೆ ಸುಲಭವಾಗಿ ಅಮಲು ಪದಾರ್ಥ ಗಳ ರೂಪದಲ್ಲಿ ದುರ್ಬಳಕೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಗೊತ್ತಾಗಿದೆ.

ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣಬಸವೇಶ್ವರ ಭೀಮರಾವ್, ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಂಜುಂಡಸ್ವಾಮಿ, ಪಿಎಸ್ಐ ಸಾಗರ ಅತ್ತರವಾಲ, ಸಿಬ್ಬಂದಿ ಪ್ರಕಾಶ, ಷಣ್ಮುಖ ಮಂಜುನಾಥ, ಶಿವರಾಜ್, ಗೊವಿಂದರಾಜ್, ಶ್ರೀನಿವಾಸ, ಫಕ್ರುದ್ದೀನ್, ಇಮ್ತಿಯಾಜ್, ಮಂಜುನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಅಪರಾಧ ಸ್ಥಳ ಪರಿಶೀಲನೆ ಅಧಿಕಾರಿಗಳಾದ ರಘುನಾಥ, ದೇವರಾಜ ಹಾಗೂ ದರ್ಶನ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಪಾಕಿಸ್ತಾನ

ಪಾಕಿಸ್ತಾನ ಕದನ ವಿರಾಮ ತಿರಸ್ಕರಿಸಿ ಮರ್ಮಾಘಾತ ನೀಡಿದ ಅಫ್ಘಾನಿಸ್ತಾನ: ರಕ್ಷಣಾ ಸಚಿವ, ಐಎಸ್‌ಐ ಮುಖ್ಯಸ್ಥರಿಗೆ ವೀಸಾ ನಿರಾಕರಣೆ!

ದಾವಣಗೆರೆ

ದಾವಣಗೆರೆ ವಿವಿ ಅಂತರಕಾಲೇಜು ಭಾರ ಎತ್ತುವ ಸ್ಪರ್ಧೆ: ಹೊನ್ನೂರು ಗೊಲ್ಲರಹಟ್ಟಿ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

ಪ್ರಭಾ ಮಲ್ಲಿಕಾರ್ಜುನ್

ಅರಣ್ಯ ಇಲಾಖೆ ಹುದ್ದೆಗಳ ನೇರ ನೇಮಕಾತಿಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ವಿದ್ಯಾರ್ಥಿಗಳ ಮನವಿ

ಆರ್ ಎಸ್ ಎಸ್

ಆರ್ ಎಸ್ ಎಸ್ ಬ್ಯಾನ್ ವಿಚಾರಕ್ಕೆ ಕೇಸರಿ ಪಡೆ ನಿಗಿನಿಗಿ, ತಾಕತ್ತೇನೆಂದು ತೋರಿಸ್ತೇವೆ: ಬಿಜೆಪಿ ನಾಯಕರ ಸವಾಲ್!

ಮಲಾಲಾ ಯೂಸುಫ್‌ಜಾಯ್

“ಬಸ್, ಮನುಷ್ಯ, ಬಂದೂಕು, ರಕ್ತ”: ತಾಲಿಬಾನ್ ದಾಳಿ ಬಗ್ಗೆ ಮಲಾಲಾ ಯೂಸಫ್ ಜಾಯ್ ನೆನಪಿಸಿಕೊಂಡಿದ್ಯಾಕೆ?

ಬಿಹಾರ

ಬಿಹಾರ ಚುನಾವಣೆ ಹೊಸ್ತಿಲಲ್ಲೇ ಲಾಲು ಪ್ರಸಾದ್ ಯಾದವ್, ರಾಬ್ರಿ, ತೇಜಸ್ವಿಗೆ ಬಿಗ್ ಶಾಕ್!

Leave a Comment