ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG NEWS: “ಡಿಜೆ ಬಳಸಿ, ತಾಕತ್ತಿದ್ದರೆ ಜಿಲ್ಲಾಡಳಿತ ತಡೆಯಲಿ” ಎಂದಿದ್ದ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಎಫ್ ಐಆರ್! ದೂರಿನ ಕಂಪ್ಲೀಟ್ ಡೀಟೈಲ್ಸ್

On: August 30, 2025 12:30 PM
Follow Us:
M. P. Renukacharya
---Advertisement---

SUDDIKSHANA KANNADA NEWS/ DAVANAGERE/DATE:30_08_2025

ದಾವಣಗೆರೆ: ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಬಳಕೆ ಮಾಡಿ ಎಂದು ಹೇಳಿದ್ದ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ವಿರುದ್ಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ರೇಣುಕಾಚಾರ್ಯ ವಿರುದ್ಧ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದಾರೆ.

READ ALSO THIS STORY: “ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರ ಹತ್ತಿರ ಬಿಟ್ಟುಕೊಳ್ಳಬೇಡಿ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್!
ದೂರಿನ ಪೂರ್ತಿ ಸಾರಾಂಶ:

ದಾವಣಗೆರೆ ಜಿಲ್ಲೆಯಲ್ಲಿ ಗಣೇಶ ಪ್ರತಿಷ್ಠಾಪನೆ ವಿಸರ್ಜನ ದಿನ ಸಾರ್ವಜನಿಕರು ಡಿಜೆಗಳನ್ನು ಹಾಕಿಕೊಂಡು ಮೆರವಣಿಗೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಡಿಜೆ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರಚೋದನಕಾರಿ ಹಾಡುಗಳನ್ನು ಹಾಕಿಕೊಂಡು ಶಾಂತಿ ಸುವ್ಯವಸ್ಥೆಗೆ ಧಕ್ಕವುಂಟಾದ ನಿದರ್ಶನಗಳು ಇವೆ.

ಈ ಹಿಂದೆ 2024 ರಲ್ಲಿ ದಾವಣಗೆರೆ ನಗರದ ಜಗಳೂರು ಬಸ್ ನಿಲ್ದಾಣದ ಹತ್ತಿರ ಗಣಪತಿ ಮೆರವಣಿಗೆ ವೇಳೆ ಡಿಜೆಯಲ್ಲಿ ಪ್ರಚೋದನಕಾರಿಯಾದ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಎರಡು ಕೋಮುಗಳ ನಡುವೆ ಸಂಘರ್ಷವಾಗಿ ಸುಮಾರು ಆರು ಪ್ರಕರಣಗಳು ದಾಖಲಾಗಿದ್ದವು. ಈ ಅಂಶಗಳನ್ನು ಮನಗಂಡು ಜಿಲ್ಲಾಧಿಕಾರಿಗಳು ಈ ವರ್ಷದ ಆಗಸ್ಟ್ 20ರಂದು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದಷ್ಟಿಯಿಂದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ದಾವಣಗೆರೆ ಜಿಲೆಯಾದ್ಯಂತ ಡಿಜಿ ಸಿಸ್ಟ್ಂ ಬಳಕೆ ನಿಷೇಧಗೊಳಿಸಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶಕ್ಕೆ ಅಸಮಾಧಾನಗೊಂಡ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಜಿಲ್ಲಾಡಳಿತದೊಂದಿಗೆ ಚರ್ಚಿಸದೇ ಅನಾವಶ್ಯಕವಾಗಿ ಸುದ್ದಿಗೋಷ್ಠಿಯನ್ನು ಜಿಲ್ಲೆಯ ವಿವಿಧ ಕಡೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಸಾರ್ವಜನಿಕರು ಮತ್ತು ಯುವಕರು ಉದ್ವೇಗಗೊಳ್ಳುವಂತೆ ಹೇಳಿಕೆ ನೀಡಿದ್ದಾರೆ. ನೀವು ಡಿಜೆ ಯನ್ನು ಹಾಕಿ. ತಾಕತ್ತಿದರೆ ಪೋಲಿಸರು ಮತ್ತು ಜಿಲ್ಲಾಡಳಿತ ತಡೆಯಲಿ ಎಂದು ಸವಾಲು ಹಾಕಿದ್ದರು.

ಕಳೆದ ಆಗಸ್ಟ್ 23ರಂದು ದಾವಣಗೆರೆ ಪ್ರವಾಸಿ ಮಂದಿರದ ಬಳಿ ರೇಣುಕಾಚಾರ್ಯ ಪತ್ರಿಕಾಗೋಷ್ಠಿಯಲ್ಲೂ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರ ವಿರುದ್ಧ ಮಾತನಾಡಿದ್ದಾರೆ. ನೂರೆಂಟು ಷರತ್ತು ಹಾಕುತ್ತಾರೆ, ನಾವು ಯಾವುದೇ ಅನುಮತಿ ಪಡೆಯುವುದಿಲ್ಲ. ತಾಕತ್ತಿದ್ದರೆ ತಡೆಯಿರಿ ಎಂಬ ಸವಾಲು ಹಾಕಿದ್ದರು. ಬೇರೆ ಧರ್ಮಗಳಿಗೆ ಷರತ್ತುಗಳನ್ನು ಈ ಸರ್ಕಾರ ವಿಧಿಸಲ್ಲ. ಆಜಾನ್ ಹಾಕುತ್ತಾರಲ್ಲ, ಅದನ್ನೇ ಯಾಕೆ ಸ್ವಾಮಿ ಹಾಕುತ್ತಿರಿ? ಸುಪ್ರೀಂಕೋರ್ಟ್ ಏನು ಹಾಕು ಅಂತ ಹೇಳಿದೇಯಾ? ಎಂದು ಪ್ರಶ್ನಿಸಿದ್ದರು.

ಜೊತೆಗೆ 60ರಿಂದ 70 ಬೆಂಬಲಿಗರನ್ನು ಕರೆದುಕೊಂಡು ಹೋಗಿ ಜಯದೇವ ವೃತ್ತದಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಸಾರ್ವಜನಿಕರಿಗೆ ಓಡಾಡದಂತೆ ತಡೆದಿದ್ದಾರೆ. ಜೊತೆಗೆ ಆಗಸ್ಟ್ 28ರಂದು ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಬೇರೆ ಜಿಲ್ಲೆಗಳಲ್ಲಿ ಡಿಜೆ ಸಿಸ್ಟಂ ಅನುಮತಿ ನೀಡಿದ್ದು ಇಡೀ ರಾಜ್ಯಕ್ಕೆ ಒಂದು ಕಾನೂನು ಜಿಲ್ಲೆಗೆ ಒಂದು ಕಾನೂನು ಎಂದು ಹೇಳಿದ್ದರು. ಸುಪ್ರೀಂಕೋರ್ಟ್ ಹೇಳಿದಂತೆ ಆಜಾನ್ ಕೂಗುವುದನ್ನು ನಿಲ್ಲಿಸಿ, ರಸ್ತೆ ಬಂದ್ ಮಾಡಿ ನಮಾಜ್ ಮಾಡುವುದನ್ನು ತಡೆಯಿರಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿ ಬೇರೆ ಧರ್ಮದವರ ಭಾವನೆಗೆ ಧಕ್ಕೆಯುಂಟಾಗುವಂತೆ ಮಾತನಾಡಿರುತ್ತಾರೆ ಎಂದು ಆರೋಪಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment