Home ಉದ್ಯೋಗ ವಾರ್ತೆ FCI ಭಾರೀ ನೇಮಕಾತಿ 2026: 33,566 ಮ್ಯಾನೇಜರ್, ಅಸಿಸ್ಟೆಂಟ್ ಮತ್ತು ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

FCI ಭಾರೀ ನೇಮಕಾತಿ 2026: 33,566 ಮ್ಯಾನೇಜರ್, ಅಸಿಸ್ಟೆಂಟ್ ಮತ್ತು ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

Share
FCI
Share

ನವದೆಹಲಿ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಆಹಾರ ನಿಗಮವು (Food Corporation of India – FCI) ಖಾಲಿ ಇರುವ ಬೃಹತ್ ಪ್ರಮಾಣದ ಹುದ್ದೆಗಳ ಭರ್ತಿಗೆ ಸಜ್ಜಾಗುತ್ತಿದೆ. 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಸುಮಾರು 33,566 ಮ್ಯಾನೇಜರ್, ಅಸಿಸ್ಟೆಂಟ್ ಗ್ರೇಡ್-3, ಜೂನಿಯರ್ ಇಂಜಿನಿಯರ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹುದ್ದೆಗಳ ವಿವರ:

ಲಭ್ಯವಿರುವ ಮಾಹಿತಿ ಪ್ರಕಾರ, ಕ್ಯಾಟಗರಿ-2 ರಲ್ಲಿ 6,221 ಹುದ್ದೆಗಳು ಮತ್ತು ಕ್ಯಾಟಗರಿ-3 ರಲ್ಲಿ 27,345 ಹುದ್ದೆಗಳು ಸೇರಿದಂತೆ ಒಟ್ಟು 33,566 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಖಿಲ ಭಾರತ ಮಟ್ಟದಲ್ಲಿ ಈ ನೇಮಕಾತಿ ನಡೆಯಲಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೂ ಉತ್ತಮ ಅವಕಾಶ ದೊರೆಯಲಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ:

ಮ್ಯಾನೇಜರ್:

ಪದವಿ, CA/ICWA ಅಥವಾ MBA ಹೊಂದಿರಬೇಕು. (ವಯಸ್ಸು: 18-28 ವರ್ಷ)

ಜೂನಿಯರ್ ಇಂಜಿನಿಯರ್:

ಸಿವಿಲ್ ಅಥವಾ ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾ. (ವಯಸ್ಸು: 18-28 ವರ್ಷ)

ಅಸಿಸ್ಟೆಂಟ್ ಗ್ರೇಡ್-3:

ಯಾವುದೇ ಪದವಿ ಅಥವಾ ಬಿ.ಎಸ್ಸಿ (ಕೃಷಿ). (ವಯಸ್ಸು: 18-27 ವರ್ಷ)

ವಾಚ್‌ಮನ್:

8ನೇ ತರಗತಿ ತೇರ್ಗಡೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (Phase 1 & Phase 2) ಮತ್ತು ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನ ಅಥವಾ ಕೌಶಲ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಎಫ್.ಸಿ.ಐ ನ ಅಧಿಕೃತ ವೆಬ್‌ಸೈಟ್ fci.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸದ್ಯಕ್ಕೆ ಇದು ಕರಡು (Draft) ಮಾಹಿತಿಯಾಗಿದ್ದು, ಅಧಿಕೃತ ಅಧಿಸೂಚನೆ ಪ್ರಕಟವಾದ ತಕ್ಷಣ ಅರ್ಜಿ ಸಲ್ಲಿಸುವ ಲಿಂಕ್ ಸಕ್ರಿಯಗೊಳ್ಳಲಿದೆ.

Share

Leave a comment

Leave a Reply

Your email address will not be published. Required fields are marked *