Home ಉದ್ಯೋಗ ವಾರ್ತೆ BSNL ನೇಮಕಾತಿ 2026: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

BSNL ನೇಮಕಾತಿ 2026: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Share
BSNL
Share

ನವದೆಹಲಿ: ಭಾರತೀಯ ಸಂಚಾರ್ ನಿಗಮ ನಿಯಮಿತ (BSNL) ತನ್ನ ಖಾಲಿ ಇರುವ 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ (SET) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಟೆಲಿಕಾಂ ಮತ್ತು ಫೈನಾನ್ಸ್ ವಿಭಾಗಗಳಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ: ಒಟ್ಟು 120 ಹುದ್ದೆಗಳಲ್ಲಿ ವಿಭಾಗವಾರು ಹಂಚಿಕೆ ಹೀಗಿದೆ:

  • ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ (ಟೆಲಿಕಾಂ): 95 ಹುದ್ದೆಗಳು

  • ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ (ಫೈನಾನ್ಸ್): 25 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಟೆಲಿಕಾಂ ವಿಭಾಗ: ಮಾನ್ಯತೆ ಪಡೆದ ಸಂಸ್ಥೆಯಿಂದ Electronics/Telecom/Computer Science/IT/Electrical ಅಥವಾ ಸಂಬಂಧಿತ ವಿಷಯದಲ್ಲಿ ಕನಿಷ್ಠ 60% ಅಂಕಗಳೊಂದಿಗೆ B.E/B.Tech ಪದವಿ ಹೊಂದಿರಬೇಕು.

  • ಫೈನಾನ್ಸ್ ವಿಭಾಗ: CA (Chartered Accountant) ಅಥವಾ CMA (Cost & Management Accountant) ಪೂರ್ಣಗೊಳಿಸಿರಬೇಕು.

ವಯೋಮಿತಿ: ಅರ್ಜಿದಾರರ ವಯಸ್ಸು 21 ರಿಂದ 30 ವರ್ಷಗಳ ಒಳಗಿರಬೇಕು (07-03-2026ಕ್ಕೆ ಅನ್ವಯಿಸುವಂತೆ). ಸರ್ಕಾರದ ನಿಯಮಗಳ ಪ್ರಕಾರ SC/ST/OBC ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 24,900 ರಿಂದ ರೂ. 50,500 (IDA E-3 Pay Scale) ವೇತನ ನೀಡಲಾಗುವುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05-02-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-03-2026

  • ಪರೀಕ್ಷೆಯ ತಾತ್ಕಾಲಿಕ ದಿನಾಂಕ: 29-03-2026

ಅರ್ಜಿ ಶುಲ್ಕ:

  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ರೂ. 2,500/-

  • SC/ST/ಅಂಗವಿಕಲ ಅಭ್ಯರ್ಥಿಗಳಿಗೆ: ರೂ. 1,250/-

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್ bsnl.co.in ಅಥವಾ externalexam.bsnl.co.in ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Share

Leave a comment

Leave a Reply

Your email address will not be published. Required fields are marked *