SUDDIKSHANA KANNADA NEWS/ DAVANAGERE/ DATE:23-02-2025
ಹೈದರಾಬಾದ್: ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ತನ್ನ ಮಗಳ ಮದುವೆಯಾದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಾಲಚಂದ್ರಂ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಮದುವೆ ಮನೆಯು ಸೂತಕ ಮನೆಯಾಗಿ ಮಾರ್ಪಟ್ಟಿದೆ.
ರಾಮೇಶ್ವರಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಮದುವೆ ವಿಧಿವಿಧಾನ ನೆರವೇರಿಸುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಕಾಮರೆಡ್ಡಿ ಆಸ್ಪತ್ರೆಯಲ್ಲಿ ಮದುಮಗಳ ತಂದೆ ಕೊನೆಯುಸಿರೆಳೆದಿದ್ದಾರೆ.
ಬಿಕ್ಕನೂರು ಮಂಡಲದ ರಾಮೇಶ್ವರಪಲ್ಲಿ ಗ್ರಾಮದ ನಿವಾಸಿ ಬಾಲಚಂದ್ರಂ ಎಂಬುವರು ಮದುವೆ ಸಮಾರಂಭ ಮುಗಿಸಿ ಮದುವೆ ಮಂಟಪದಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಕಾಮರೆಡ್ಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಘಟನೆ ನಡೆದಾಗ ಮದುವೆ ಆಗಷ್ಟೇ ಮುಗಿದಿತ್ತು. ಸಂಬಂಧಿಕರು ಮತ್ತು ಅತಿಥಿಗಳು, ಸಂಭ್ರಮಾಚರಣೆಯಲ್ಲಿದ್ದರು. ಆದ್ರೆ, ಈ ಸುದ್ದಿ ತಿಳಿಯುತ್ತಿದ್ದಂತೆ ಮದುವೆಗೆ ಬಂದವರು ಶಾಕ್ ಗೆ ಒಳಗಾದರು.