ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರೈತರಿಗೆ ಗುಡ್ ನ್ಯೂಸ್ : 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಯಾವ ರೈತರ ಎಷ್ಟು ಸಾಲಮನ್ನಾ ಆಗಿದೆ, ಹೀಗೆ ಚೆಕ್ ಮಾಡಿ

On: August 18, 2024 1:34 PM
Follow Us:
---Advertisement---

(Crop-loan-waiver:) ರಾಜ್ಯ ಸರ್ಕಾರವು 2017 ಹಾಗೂ 2018ನೇ ಸಾಲಿನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಯೋಜನೆಯ ಅಡಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಅನ್ವಯವಾಗುವಂತೆ ರಾಜ್ಯದ ಒಟ್ಟು 17.37 ಲಕ್ಷ ರೈತರು ಬೆಳೆ ಸಾಲ ಮನ್ನಾದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಆದರೆ, ರಾಜ್ಯಾದ್ಯಂತ ಈ ಯೋಜನೆಯ ಅಡಿಯಲ್ಲಿ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ರಾಜ್ಯದ 31,000 ರೈತರಿಗೆ ಇದರ ಪ್ರಯೋಜನ ದೊರೆತಿಲ್ಲ. ಈ ಕಾರಣದಿಂದಾಗಿ ಇತ್ತೀಚಿಗೆ ನಡೆದಂತಹ ವಿಧಾನ ಪರಿಷತ್ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿರುವಂತಹ ಕೆ. ಎನ್ ರಾಜನ್ ಅವರು ಪ್ರತಿಕ್ರಿಯಿಸಿದ್ದು, ಬೆಳೆ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಪ್ರಯೋಜನ ಪಡೆಯದೇ ಇರುವಂತಹ 31 ಸಾವಿರ ರೈತರಿಗೆ ನೀಡಬೇಕಾಗಿರುವ 161.51 ಕೋಟಿ ರೂಪಾಯಿ ಹಣವನ್ನು ಹಾಗೂ ಬಾಕಿ ಇರುವ ರೈತರ ಮೊತ್ತ 64 ಕೋಟಿ ರೂಪಾಯಿ ಹಣ ಸೇರಿ ಒಟ್ಟು 232 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದ್ದಾರೆ.

* ಈ ವೆಬ್ ಸೈಟ್ ಗೆ ಭೇಟಿ ನೀಡಿ (https://mahitikanaja.karnataka.gov.in/department)
* ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ
* ಕಂದಾಯ ಇಲಾಖೆ ಸೇವೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು “Loan waiver report for primary agricultural cooperative societies ಆಯ್ಕೆ ಕ್ಲಿಕ್ ಮಾಡಿ
* ನಂತರ ರೈತ ಎಂದು ಆಯ್ಕೆ ಮಾಡಿ, ನಿಮ್ಮ ಜಿಲ್ಲೆ, ತಾಲೂಕು,ಹೊಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ ಸಲ್ಲಿಸು ಕ್ಲಿಕ್ ಮಾಡಿ
* ನಂತರ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು

Join WhatsApp

Join Now

Join Telegram

Join Now

Leave a Comment