(Borewell Subsidy) ಗ್ರಾಮೀಣ ಹಾಗೂ ನಗರದ ಕೆಲವು ಪ್ರದೇಶಗಳಲ್ಲಿ ಬೋರ್ವೆಲ್ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಕೆಲ ರೈತರು ಬೋರ್ವೆಲ್ ಅನ್ನೇ ಅವಂಲಬಿಸಿದ್ದಾರೆ. ಹೀಗಾಗಿ ಈ ಯೋಜನೆಯ ಮೂಲಕ ಬೋರ್ವೆಲ್ ಕೊರೆಸಲು ಸಾಲ ಕೂಡ ನೀಡಲಾಗುತ್ತದೆ. ಯಾವ ಯೋಜನೆ, ಎಷ್ಟು ಸಾಲ ಹಾಗೂ ಯಾರು ಅರ್ಹರು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಮೂಲಕ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಬೋರ್ವೆಲ್ ಕೊರೆಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರೊಂದಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಲು ರೈತರಿಗೆ ಅವಕಾಶ ಸಿಗುತ್ತದೆ.
ಹಾಗಾದರೆ ಅರ್ಜಿ ಸಲ್ಲಿಸಲು ಯಾರು ಅರ್ಹರು?:
ಹಿಂದುಳಿದ ವರ್ಗಗಳ ಪ್ರ-1, 2ಎ, 3ಎ, ಮತ್ತು 3ಬಿ ಅರ್ಜಿ ಸಲ್ಲಿಸಲು ಅರ್ಹರು.
ಅಲ್ಲದೆ ಕನಿಷ್ಠ 2 ಎಕರೆ ಗರಿಷ್ಠ 5 ಎಕರೆ ಹೊಲವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ದಾಖಲಾತಿಗಳು ಯಾವುದು?;
ಅರ್ಜಿದಾರರ ಆಧಾಡ್ ಕಾರ್ಡ್
ಜಾತಿ ಮತ್ತು ಆದಾಯ ಪತ್ರ
ಸಣ್ಣ ಮತ್ತು ಅತಿ ಸಣ್ಣ ಪ್ರಮಾಣ ಪತ್ರ
ಬ್ಯಾಂಕ್ ಖಾತೆ
ಪಹಣಿ ಹಾಗೂ ಪ್ರುಟ್ಸ್ ಐಡಿ
ರೇಷನ ಕಾರ್ಡ್ ಸಂಖ್ಯೆ
ಯಾವೆಲ್ಲಾ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು:
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
ಉಪ್ಪಾರ ಅಭಿವೃದ್ಧಿ ನಿಗಮ
ಮರಾಠ ಅಭಿವೃದ್ಧಿ ನಿಗಮ
ವಿಶ್ವಕರ್ಮ ಅಭಿವೃದ್ಧಿ ನಿಗಮ
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
ಸವಿತಾ ಸಮಾಜ ಅಭಿವೃದ್ಧಿ ನಿಗಮ
ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
ಒಕ್ಕಲಿಗ ಅಭಿವೃದ್ಧಿ ನಿಗಮ
ಅರ್ಜಿ ಸಲ್ಲಿಕೆ ಎಲ್ಲಿ?
ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.