(Applications) 2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಬೆಳೆಗಳ ವಿಸ್ತರಣೆ ಘಟಕದಡಿಯಲ್ಲಿ ಸಹಾಯಧನ ನೀಡುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಯಾವುದೆಲ್ಲಾ ಬೆಳೆಗಳಿಗೆ ಸಹಾಯಧನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಶಿಕಾರಿಪುರ ತೋಟಗಾರಿಕೆ ಇಲಾಖಾ ವತಿಯಿಂದ 2024-25 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ (ಅಂಗಾಂಶ ಬಾಳೆ, ಹೈಬ್ರಿಡ್ ತರಕಾರಿ, ಕಾಳುಮೆಣಸು, ಬಿಡಿಹೂ, ಸುಗಂಧರಾಜ ಮತ್ತು ಗುಲಾಬಿ), ಮಾವು ಪುನಶ್ಚೇತನ, ಕೃಷಿ ಹೊಂಡ, ತರಕಾರಿ ಬೆಳೆಗೆ ಪ್ಲಾಸ್ಟಿಕ್ ಹೊದಿಗೆ ಮತ್ತು ಪ್ಯಾಕ್ ಹೌಸ್ ಘಟಕಗಳಡಿ ಸಹಾಯಧನ ನೀಡುತ್ತಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಶಿಕಾರಿಪುರ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.