SUDDIKSHANA KANNADA NEWS/ DAVANAGERE/ DATE:14-09-2023
ದಾವಣಗೆರೆ: ಅಡಿಕೆ ಬೆಳೆದರೆ ತಿನ್ನಲು ಆಗದು. ಕ್ವಿಂಟಾಲ್ ಅಡಿಕೆಗೆ 45 ರಿಂದ 50 ಸಾವಿರ ರೂಪಾಯಿ ಇದೆ. ಅದೇ ರೀತಿಯಲ್ಲಿ ರಾಗಿ, ಭತ್ತ ಸೇರಿದಂತೆ ಇತರೆ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕರೆ ರೈತ(Farmer)ರ ಬದುಕು ಹಸನಾಗುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಉಳಪಿನಕಟ್ಟೆ ತಿರುವಿನ ಸಮೀಪದಲ್ಲಿನ ರೈತ (Farmer) ಹುತಾತ್ಮರ ಸಮಾಧಿ ಬಳಿ ಆಯೋಜಿಸಿದ್ದ 31 ನೇ ವರ್ಷದ ರೈತ (Farmer) ಹುತಾತ್ಮರ ದಿನಾಚರಣೆ ಮತ್ತು ಸ್ಮಾರಕ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ಕಿ, ಜೋಳ, ರಾಗಿಗೆ ಕ್ವಿಂಟಲ್ 10 ಸಾವಿರ ರೂಪಾಯಿ ಸಿಕ್ಕರೆ ಹೆಚ್ಚಾಗಿ ಬೆಳೆಯುತ್ತಾರೆ. ಆಗ ನಮಗೆ ಆಹಾರದ ಕೊರತೆ ಉಂಟಾಗದು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Investment: ದೀರ್ಘಕಾಲಿನ ಹೂಡಿಕೆದಾರರಿಗೆ ಖುಷಿ ಸುದ್ದಿ: ಉತ್ತಮ ಆದಾಯ ಗಳಿಸಲು ಇದೆ ಸಾಧ್ಯತೆ…!
ರೈತ(Farmer)ರ ಬದುಕು ಸಂಕಷ್ಟದಲ್ಲಿದೆ. ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಬರಗಾಲ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಕಾರಣದಿಂದಾಗಿ ರೈತ(Farmer)ರು ಪ್ರತಿವರ್ಷವೂ ಸಮಸ್ಯೆಯ ಸುಳಿಗೆ ಸಿಲುಕುತ್ತಲೇ ಇದ್ದಾರೆ. ರೈತ(Farmer)ರ ಹೆಸರು ಹೇಳಿಕೊಂಡು, ಬದುಕು ಹಸನಾಗಿಸುವ ಭರವಸೆ ಕೊಟ್ಟು ಅಧಿಕಾರಕ್ಕೆ ಬರುವ ಸರ್ಕಾರಗಳು ಅಧಿಕಾರಕ್ಕೆ ಬಂದ ಮೇಲೆ ಮರೆತು ಬಿಡುತ್ತವೆ. ರೈತ(Farmer)ರ ಪರವಾಗಿ ಕೆಲಸ ಮಾಡುವ ಸರ್ಕಾರಗಳು ಕಡಿಮೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು,
ಅನ್ನದಾತನ ಬದುಕು ಉತ್ತಮವಾಗಬೇಕು. ಬೇರೆ ಕ್ಷೇತ್ರಗಳಿಗೆ ಕೊಟ್ಟಂಥ ಪ್ರೋತ್ಸಾಹವನ್ನು ಕೃಷಿ ಕ್ಷೇತ್ರಕ್ಕೂ ನೀಡಬೇಕು. ರೈತ(Farmer)ರು ಅಕ್ಕಿ, ಜೋಳ, ರಾಗಿ ಸೇರಿದಂತೆ ಆಹಾರ ಧಾನ್ಯಗಳನ್ನು ಬೆಳೆಯದಿದ್ದರೆ ನಾವೆಲ್ಲರೂ ಹಸಿವಿನಿಂದ ನರಳಬೇಕಾಗುತ್ತದೆ. ಹಣ, ಅಡಿಕೆ ತಿಂದು ಜೀವಿಸಲು ಆಗದು. ಹೆಚ್ಚು ಹೆಚ್ಚಾಗಿ ಆಹಾರ ಪದಾರ್ಥಗಳ ಬೆಳೆಯಬೇಕು. ಸರ್ಕಾರವೂ ಸೂಕ್ತ ಧಾರಣೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ(Farmer)ರು ಕೇವಲ ಒಂದೇ ಒಂದು ಬೆಳೆಗೆ ಸೀಮಿತವಾಗಬಾರದು. ಬೇರೆ ಬೆಳೆಗಳನ್ನು ಬೆಳೆಯುವತ್ತಾ ಗಮನ ಹರಿಸಬೇಕು. ಒಂದು ಬೆಳೆ ನಷ್ಟವಾದರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ತೆಂಗು, ಅಡಿಕೆ, ದಾಳಿಂಬೆ ಬೆಳೆಯಲು ರೈತರು ಮನಸ್ಸು ಮಾಡಬೇಕು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಶಾಸಕ ಕೆ.ಎಸ್.ಬಸವಂತಪ್ಪ ಅವರು ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಬೇಡಿಕೆಗಳನ್ನು ಪೂರೈಸುವ ಭರವಸೆ ತಮಗಿದೆ ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಹಿಂದೆ ದಲಿತ, ರೈತ ಸಂಘಟನೆಗಳು ಶಕ್ತಿಯುತವಾಗಿದ್ದವು. ಆದ್ರೆ, ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಬೇರೆ ಬೇರೆಯಾಗಿರುವ ಎಲ್ಲಾ ರೈತ ಸಂಘಗಳ ಸಮಿತಿಗಳು ಒಟ್ಟಾಗಿಸುವ ಕೆಲಸ ಮಾಡಬೇಕು. 22 ಕೆರೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಲ್ಲಿ ಕಳಪೆ ಕಾಮಗಾರಿಯಾಗಿದ್ದು, ಕಾಮಗಾರಿ ನಡೆಸಿದ ಕಂಪೆನಿ ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ಸಂಬಂಧ ಅಧಿವೇಶನದಲ್ಲಿ ಪ್ರಸ್ತಾಪ
ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ (Farmer) ಹುತಾತ್ಮರ ಸ್ಮರಣಾರ್ಥ ಸಮಿತಿಯ ಗೌರವಾಧ್ಯಕ್ಷ ಎಚ್.ನಂಜುಂಡಪ್ಪ, ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ತಹಶಿಲ್ದಾರ್ ಡಾ.ಎಂ.ವಿ.ಅಶ್ವಥ್, ರೈತ ಮುಖಂಡ ತೇಜಸ್ವಿ ಪಟೇಲ್, ಶಾಮನೂರು
ಲಿಂಗರಾಜ್, ಹೊನ್ನೂರು ಮುನಿಯಪ್ಪ, ಕಲ್ಲಿಂಗಪ್ಪ, ಆವರಗೆರೆ ರುದ್ರಮುನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.