ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Facebook: ಪ್ರಾಮಾಣಿಕ ಅಧಿಕಾರಿ ಬಿಡದ ಹ್ಯಾಕರ್ಸ್: ಪೊಲೀಸ್ ಅಧಿಕಾರಿ ಹೆಸರಲ್ಲಿ ಫೇಸ್ ಬುಕ್ ನಕಲಿ ಅಕೌಂಟ್ ತೆರೆದು ಹಣ ಕೀಳುವವರಿದ್ದಾರೆ ಹುಷಾರ್…!

On: July 28, 2023 5:18 AM
Follow Us:
Facebook Facke Account
---Advertisement---

SUDDIKSHANA KANNADA NEWS/ DAVANAGERE/ DATE:28-07-2023

ದಾವಣಗೆರೆ: ಫೇಸ್ ಬುಕ್ (Facebook) ಹ್ಯಾಕ್ ಮಾಡಿ ಹಣ ಪೀಕುವ ಟೀಂ ಮತ್ತೆ ಸಕ್ರಿಯವಾಗಿದೆ. ಈ ಹಿಂದೆ ಹಲವರ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಹಣ ಕೇಳಿದ ಪ್ರಕರಣಗಳು ಸಾಕಷ್ಟು ವರದಿಯಾಗಿದ್ದವು. ಈಗ ಹ್ಯಾಕರ್ಸ್ ಲೋಕಾಯುಕ್ತ ಅಧಿಕಾರಿಗಳನ್ನು ಬೆಂಬಿಡದೇ ಕಾಡುತ್ತಿದ್ದಾರೆ. ಹೌದು. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಅಧಿಕಾರಿ ಹೆಸರಿನಲ್ಲಿ ಫೇಸ್ ಬುಕ್ (Facebook) ನಕಲಿ ಅಕೌಂಟ್ ತೆರೆದು ಹಣ ಕೇಳಿದ ಘಟನೆ ವರದಿಯಾಗಿದೆ.

H. S. RAJU
H. S. RAJU

ದಾವಣಗೆರೆ ಲೋಕಯುಕ್ತ ವೃತ್ತ ನೀರೀಕ್ಷಕ ಹೆಚ್. ಎಸ್.ರಾಜು (ರಾಷ್ಟ್ರಪತಿ) ಅವರು ಪೊಲೀಸ್ ಇಲಾಖೆಯಲ್ಲಿ ದಕ್ಷತೆ, ಪ್ರಾಮಾಣಿಕತೆಗೆ ಹೆಸರು. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ. ಅನ್ಯಾಯ ಕಂಡು ಬಂದರೆ ಸಹಿಸದ ಅಧಿಕಾರಿ. ಇಂಥ ಅಧಿಕಾರಿ
ಹೆಸರಿಗೆ ಕಪ್ಪು ಚುಕ್ಕೆ ಇಡಲು ಹ್ಯಾಕರ್ಸ್ ಟೀಂ ಕುತಂತ್ರ ರೂಪಿಸಿದೆ.

ಪೋಲಿಸ್ ಇಲಾಖೆಯಲ್ಲೇ ಅತ್ಯುತ್ತಮ ಕೆಲಸಕ್ಕೆ ಹೆಸರಾಗಿರುವ ಆಫೀಸರ್. ಜೊತೆಗೆ ರಾಷ್ಟ್ರಪತಿ ಪ್ರಶಸ್ತಿ ಪಡೆದ ಖಡಕ್ ಅಧಿಕಾರಿ ಕೂಡ ಹೌದು. ಪ್ರಾಮಾಣಿಕತೆ ಬಗ್ಗೆ ಸಾರ್ವಜನಿಕ ಕ್ಷೇತ್ರ ಮತ್ತು ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದಾರೆ.

ತರಾಟೆಗೆ ತೆಗೆದುಕೊಂಡ ಬಾಡದ ಆನಂದರಾಜ್: 

ಇಂತಹ ಪ್ರಾಮಾಣಿಕ ಅಧಿಕಾರಿಯ ಹೆಸರಿನಲ್ಲಿ ಫೇಸ್ ಬುಕ್ (Facebook)ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಅದರಲ್ಲಿ ಹಣ ಕೇಳಿ ಮುಜುಗರಕ್ಕೀಡಾಗುವಂತೆ ಮಾಡುವ ಪ್ರಯತ್ನ ನಡೆದಿದೆ. ಸಾಮಾಜಿಕ ಜಾಲತಾಣದ ದರೋಡೆಕೋರರು ಹಣ ಕೇಳಿದ ತಕ್ಷಣ ಅಂತಹ ಅಧಿಕಾರಿ ಯಾವ ಸಂದರ್ಭದಲ್ಲಿಯೂ ಹಣ ಕೇಳುವ ಅಧಿಕಾರಿಯೇ ಅಲ್ಲ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹಿತೈಷಿಗಳು ಸಖತ್ತಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

G. M. Siddeshwara: ಅಪರಿಚಿತ ಮಹಿಳೆಯಿಂದ ಜಿ. ಎಂ. ಸಿದ್ದೇಶ್ವರರಿಗೆ ಹನಿಟ್ರ್ಯಾಪ್ ಯತ್ನ? ಪೊಲೀಸ್ ಠಾಣೆಗೆ ದೂರು ಕೊಟ್ಟ ಬಳಿಕ ಸಂಸದರು ಹೇಳಿದ್ದೇನು..?

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಹೆಚ್. ಎಸ್. ರಾಜು ಅವರು ಹಣ ಕೇಳುವ ಜಾಯಮಾನದವರಲ್ಲ. ಅವರಿಗೆ ದೇವರು ಸಾಕಷ್ಟು ಕೊಟ್ಟಿದ್ದು, ಇಂಥ ಜಾಯಮಾನದವರಲ್ಲ ಎಂದು ಮುಖಕ್ಕೆ ಹೊಡೆದಂತೆ ಜಾಡಿಸಿದ ಅಧಿಕಾರಿಯ ಹಿತೈಷಿ
ಬಾಡದ ಆನಂದರಾಜ್ ಅವರು  ಫೇಸ್ ಬುಕ್ (Facebook) ನಕಲಿ ಅಕೌಂಟ್ ತೆರೆದು ಹಣ ಕೇಳುವವರ ಬಗ್ಗೆ ಜಾಗೃತರಾಗಿರಿ ಎಂದು ಮನವಿ ಮಾಡಿದ್ದಾರೆ.

ಇನ್ನು ಫೇಸ್ ಬುಕ್ (Facebook) ನಲ್ಲಿ ಫೇಕ್ ಅಕೌಂಟ್ ತೆರೆದು ಹಣಕ್ಕೆ ಬೇಡಿಕೆ ಇಟ್ಟ ಹಲವು ಪ್ರಕರಣ ವರದಿಯಾಗಿವೆ. ಕೆಲವರು ಹಣವನ್ನೂ ಹಾಕಿದ್ದಾರೆ. ಆ ಬಳಿಕ ಫೇಸ್ ಬುಕ್ ದರೋಡೆಕೋರರು ಈ ಕೃತ್ಯ ಎಸಗಿದ್ದು ಬೆಳಕಿಗೆ ಬಂದ ಬಳಿಕ ಗೊತ್ತಾದ ಘಟನೆಗಳೂ ಈ ಹಿಂದೆ ಸಾಕಷ್ಟು ನಡೆದಿವೆ.

ದಾವಣಗೆರೆ ಜಿಲ್ಲಾ ಪೊಲೀಸರು ಸಹ ಈ ಹಿಂದೆ ಯಾರೂ ಸಹ ಫೇಸ್ ಬುಕ್ ನಲ್ಲಿ ಹಣ ಕೇಳಿದರೆ ನೀಡಬೇಡಿ. ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಹಾಗಾಗಿ, ಎಚ್ಚರ ವಹಿಸಿ ಎಂದು ಮನವಿ ಮಾಡಿದ್ದರು. ಯಾರೂ ಸಹ ಫೇಸ್ ಬುಕ್ ನಲ್ಲಿ
ಮೆಸೇಜ್ ಮಾಡಿ ಹಣ ಕೇಳಿದರೆ ನೀಡಬೇಡಿ. ಎಂಥ ಸಂಕಷ್ಟವಿದ್ದರೂ ಫೋನ್ ಮಾಡಿ ಕೇಳುತ್ತಾರೆ. ನಿಮಗೆ ಪರಿಚಯವಿದ್ದವರಿಗೆ ಮಾತ್ರ ಹಣ ಕೊಡಿ. ಸಾಮಾಜಿಕ ಜಾಲತಾಣ ಹಾಗೂ ವ್ಯಾಟ್ಸಪ್ ನಲ್ಲಿ ಅಪರಿಚಿತ ನಂಬರ್ ನಿಂದ ಮೆಸೇಜ್ ಮಾಡಿದರೆ ಹಣ ಕೊಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Facebook Fake Account, Facebook, Facebook News, Facebook News, Facebook

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment