SUDDIKSHANA KANNADA NEWS/ DAVANAGERE/ DATE:22-07-2023
ದಾವಣಗೆರೆ: ಪ್ರತಿಯೊಬ್ಬರಿಗೂ ಕಣ್ಣು (Eye) ಬೇಕು. ಇಡೀ ಪ್ರಪಂಚ ನೋಡಲು ನೇತ್ರ (Eye) ಅವಶ್ಯಕ. ಕಣ್ಣು (Eye) ಇಲ್ಲ ಅಂದರೆ ಈ ಪ್ರಪಂಚವನ್ನೇ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ರೆ, ಮಕ್ಕಳ ಕಣ್ಣಿಗೆ ಏನಾದರೂ ಆದರೆ ಪೋಷಕರು ಹೆದರದೇ ಇರುತ್ತಾರಾ? ಭಯ ಆಗಿಯೇ ಆಗುತ್ತದೆ. ಈಗ ಸಾವಿರಾರು ಮಕ್ಕಳಿಗೆ ಕಣ್ಣು (Eye) ಬೇನೆ ಅಥವಾ ಐ ವೈರಸ್ ಕಾಡಲಾರಂಭಿಸಿದೆ. ಈಗಾಗಲೇ ಸಾವಿರಾರು ಮಕ್ಕಳನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದಿದ್ದಾರೆ.
ಈ ಬಾರಿ ದಾವಣಗೆರೆ ಜಿಲ್ಲೆ ಥೇಟ್ ಮಲೆನಾಡಿನಂತಾಗಿದೆ. ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ. ಚಳಿ, ಜ್ವರ, ಶೀತ, ಕೆಮ್ಮು, ತಲೆನೋವು ಎಲ್ಲರಿಗೂ ಕಾಡುತ್ತದೆ. ಈಗ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕಣ್ಣಿನ ಬೇನೆ ಪೋಷಕರು ತಲ್ಲಣಗೊಳ್ಳುವಂತೆ ಮಾಡಿದೆ. ಆತಂಕವೂ ಹೆಚ್ಚಾಗಿದೆ.
ಏನಿದು ಕಣ್ಣು (Eye) ಬೇನೆ…?
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬಂದಿರುವ ಕಣ್ಣು ಬೇನೆ ಅಥವಾ ಐ ವೈರಸ್ ನಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಎದ್ನೋ ಬಿದ್ನೋ ಎಂಬಂತೆ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಮಳೆಗಾಲದ ವೇಳೆ ಸಾಮಾನ್ಯವಾಗಿ ಕಂಡು ಬರುವ ಮದ್ರಾಸ್ ಐ ರೀತಿಯಾದ ಒಂದು ವೈರಸ್ ಇದೆ. ಜಿಲ್ಲೆಯಲ್ಲಿ ಸಾವಿರಾರು ಮಕ್ಕಳಲ್ಲಿ ಈ ಬೇನೆ ಕಂಡು ಬಂದಿದೆ. ಆಸ್ಪತ್ರೆಗಳ ಮುಂದೆ ಪೋಷಕರು ಮಕ್ಕಳನ್ನು ಕರೆದೊಯ್ದು ವೈದ್ಯರ ಬಳಿ ತೋರಿಸಿದ್ದಾರೆ. ವಾತಾವರಣ ತಂಪಾಗಿರುವ ಕಾರಣ ಒಬ್ಬರಿಂದ ಒಬ್ಬರಿಗೆ ಸೋಂಕು ಬೇಗನೇ ಹರಡುತ್ತದೆ. ದಾವಣಗೆರೆಯಲ್ಲಿ ಕಳೆದ 20 ದಿನಗಳಿಂದಲೂ ಉತ್ತಮ ಮಳೆಯಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಬಿಸಿಲು ಬಂದರೂ ವಾತಾವರಣ ಕೂಲ್ ಕೂಲ್ ಆಗಿದೆ.
ಮಕ್ಕಳಲ್ಲಿ ವೇಗವಾಗಿ ಹರಡಲು ಕಾರಣವೇನು…?
ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ಆಗಾಗ್ಗೆ ಕಣ್ಣು ಮುಟ್ಟಿಕೊಳ್ಳುತ್ತಾರೆ. ಜೊತೆಗೆ ಮಕ್ಕಳ ಜೊತೆ ಆಟವಾಡುತ್ತಾರೆ. ಇಲ್ಲಿ ಅಂತರ ಕಡಿಮೆ ಇರುತ್ತದೆ. ಮಕ್ಕಳು ಸ್ವಲ್ಪ ಕಣ್ಣು ನೋವಾದರೂ ಉಜ್ಜಿಕೊಳ್ಳುತ್ತಾರೆ. ವಾತಾವರಣವೂ
ತಂಪಾಗಿರುವ ಕಾರಣಕ್ಕೆ ವೇಗವಾಗಿ ಸೋಂಕು ಹರಡುತ್ತಿದೆ.
ಡಾ. ಹೆಚ್. ಎಂ. ರವೀಂದ್ರನಾಥ್, ದೃಷ್ಟಿ (Eye) ತಜ್ಞರು:
ದೃಷ್ಟಿಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಹೆಚ್. ಎಂ. ರವೀಂದ್ರನಾಥ್ ಅವರ ಬಳಿ ಈಗಾಗಲೇ 450 ರಿಂದ 500 ಮಕ್ಕಳನ್ನು ನೋಡಿದ್ದಾರೆ. ಆಸ್ಪತ್ರೆಗೆ ಕರೆತಂದ ಪೋಷಕರು ಮಕ್ಕಳ ಕಣ್ಣಿನ ಭಾವು ಹೆಚ್ಚಾಗಿರುವ ಕಾರಣ ಆತಂಕಕ್ಕೆ ಒಳಗಾಗಿದ್ದರು.
ಮಾತ್ರವಲ್ಲ, ಮಕ್ಕಳಲ್ಲಿ ಶೀತ, ಜ್ವರ, ಸ್ವಲ್ಪ ಕೆಮ್ಮು, ತಲೆನೋವು, ಮೈ ಕೈ ಸುಸ್ತು ಎಂದು ಮಕ್ಕಳು ಹೇಳಿದ್ದಾರೆ. ಏನೂ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೃಷ್ಟಿ(Eye)ಗೆ ತೊಂದರೆ ಇಲ್ಲ, ಪೋಷಕರು ಹೆದರಬೇಕಿಲ್ಲ:
ಮಳೆಗಾಲದ ವೇಳೆ ಸಾಮಾನ್ಯವಾಗಿ ಹರಡುವ ವೈರಸ್ ಇದಾಗಿದೆ. ಮದ್ರಾಸ್ ಐ ನಂತೆ ಪರಿಣಾಮಕಾರಿಯಾಗಿಲ್ಲ. ಯಾವುದೇ ಸಮಸ್ಯೆಯೂ ಆಗಲ್ಲ. ಪೋಷಕರು ಹೆದರುವ ಅವಶ್ಯಕೆ ಇಲ್ಲ. ಇದೊಂದು ವೈರಸ್. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈಗ ತಂಪು ವಾತಾವರಣ ಹೆಚ್ಚಾಗಿದೆ. ಈ ವೇಳೆ ವೈರಸ್ ಹೆಚ್ಚಾಗಿ ಹರಡುತ್ತದೆ ಅಷ್ಟೇ. ಈ ವೈರಸ್ ನಿಂದ ಯಾವ ತೊಂದರೆಯೂ ಇಲ್ಲ. ಯಾರಿಗೂ ದೃಷ್ಟಿ ಸಮಸ್ಯೆ ಬರುವುದಿಲ್ಲ. ಈ ಬಾರಿ ಕಾಣಿಸಿಕೊಂಡಿರುವ ವೈರಸ್ ಶಕ್ತಿ ಶಾಲಿಯಾಗಿಲ್ಲ. ಮದ್ರಾಸ್ ಐ ರೀತಿಯಲ್ಲಿಯೇ ಒಂದು ರೀತಿಯ ವೈರಸ್ ಇದು ಎಂದು ಹೇಳಿದ್ದಾರೆ.
ಆದ್ರೆ, ಈಗ ಕಾಣಿಸಿಕೊಂಡಿರುವ ವೈರಸ್ ಮೈಲ್ಡ್ ಆಗಿದೆ. ಕಣ್ಣಿಗೆ ಮತ್ತು ದೃಷ್ಟಿಗೆ ತೊಂದರೆ ಆಗುವಂಥದ್ದು ಯಾರಿಗೂ ಆಗಿಲ್ಲ. ಪೋಷಕರು ಭಯ ಪಡಬಾರದು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನಾನು ಸಹ 450 ರಿಂದ 500 ಮಕ್ಕಳನ್ನು ನೋಡಿದ್ದೇನೆ. ಪದೇ ಪದೇ ಹೇಳುತ್ತೇನೆ. ಪೋಷಕರು ಯಾವುದೇ ರೀತಿಯ ಆತಂಕ, ಭಯ ಪಡಬಾರದು ಎಂದು ಧೈರ್ಯ ಹೇಳಿದ್ದಾರೆ.
ಎನ್. ಕೆ. ಕಾಳಪ್ಪನವರ್, ಮಕ್ಕಳ ತಜ್ಞ ವೈದ್ಯರು:
ಮಕ್ಕಳ ಕಣ್ಣಿನಲ್ಲಿಪಿಸಿರು ಬರುತ್ತದೆ. ಸ್ವಲ್ಪ ನೋವು ಇರುತ್ತದೆ. ಮಳೆ ಹೆಚ್ಚಿರುವುದರಿಂದ ಈ ವಾತಾವರಣಕ್ಕೆ ಹೆಚ್ಚು ಹರಡುತ್ತದೆ. ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವೈರಲ್ ಫೀವರ್ ಬರುತ್ತಿದೆ. ಜೊತೆಗೆ ಕಣ್ಣು ಬೇನೆ ಸಹ ಬರುತ್ತಿದೆ. ಮೈಕೈ ನೋವು, ತಲೆನೋವು, ಶೀತ, ಸ್ವಲ್ಪ ಕೆಮ್ಮು ಬರುತ್ತಿದೆ. ಆಮೇಲೆ ಕಣ್ಣಿನ ಬೇನೆ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ.
Dr. N. K. Kalappanavar, Pediatrician
ರೋಗ ಗುಣ ಲಕ್ಷಣಗಳೇನು…?
– ಕಣ್ಣಿನಲ್ಲಿ ಪಿಸುರು ಬರುವುದು.
– ಕಣ್ಣು ಭಾವು ಬರುವುದು.
– ಮೂರರಿಂದ ಐದು ದಿನ ಇರುತ್ತದೆ
– ಐದು ದಿನಗಳ ಬಳಿಕ ಸರಿ ಹೋಗುತ್ತದೆ.
– ಇದು ಕಣ್ಣಿನ ತುರಿಕೆ ಅಲ್ಲ
– ಕಣ್ಣು ಕೆಂಪಗಾಗುತ್ತದೆ.
– ಬೇರೆ ರೋಗ ಲಕ್ಷಣಗಳು ಕಂಡು ಬರುತ್ತಿಲ್ಲ
ಪೋಷಕರು ಏನು ಮಾಡಬೇಕು…?
– ಮೇಲಿಂದ ಮೇಲೆ ಕೈ ತೊಳೆಯಬೇಕು.
– ಕಣ್ಣು ಆಗಾಗ್ಗೆ ಮುಟ್ಟುಕೊಳ್ಳಬಾರದು.
– ಸ್ಯಾನಿಟೈಸರ್ ಬಳಕೆ ಮಾಡುವುದು ಒಳ್ಳೆಯದು
– ಫಿಲ್ಟರ್ (ಶುದ್ಧ) ನೀರನ್ನೇ ಬಳಸಬೇಕು.
– ಸೋಂಕಿತ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
– ಕಣ್ಣುಗಳನ್ನು ಮುಟ್ಟಿದಾಗ – ಮುಟ್ಟುವ ಮುನ್ನ ಕೈತೊಳೆದುಕೊಳ್ಳಬೇಕು
– ಐ ಡ್ರಾಪ್ಸ್, ಬೆಡ್ ಶೀಟ್, ಟವೆಲ್, ಸೌಂದರ್ಯವರ್ಧಕ, ಮೊಬೈಲ್ ಪೋನ್ ಪ್ರತ್ಯೇಕವಾಗಿ ಬಳಸಿ
– *ಕಣ್ಣು ಒರೆಸಲು ಕರವಸ್ತ್ರಗಳ ಬದಲಿಗೆ ಟಿಶ್ಯೂ ಪೇಪರ್ ಬಳಸಿದರೆ ಉತ್ತಮ
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆಯಲ್ಲಿ ಮೂರು ಸೀರಿಯಲ್ ನ ನಟರ ಸಮಾಗಮ: ಜಾತ್ರಾ ಕಲ್ಯಾಣೋತ್ಸವಕ್ಕೆ ಆಗಮಿಸಿದ ಕಲಾವಿದರು ಖುಷ್
ವೈದ್ಯರು ನೀಡುವ ಸಲಹೆ ಏನು..?
ನಗರದ ನಾನಾ ಕಣ್ಣಿನ ಆಸ್ಪತ್ರೆಗಳಲ್ಲಿ ಕೆಲ ದಿನಗಳಿಂದ ನೂರಾರು ಮಕ್ಕಳು ಕಣ್ಣಿನ ಬೇನೆ ಚಿಕಿತ್ಸೆಗಾಗಿ ಮಕ್ಕಳನ್ನು ಕರೆತರುತ್ತಿದ್ದಾರೆ. ದಿನೇ ದಿನೇ ಆಸ್ಪತ್ರೆಗೆ ಕರೆದುಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೆಲವೆಡೆ ಹಿರಿಯರಲ್ಲಿಯೂ ಕಾಣಿಸಿಕೊಂಡಿದೆ. ಜೊತೆಗೆ ಹಾಸ್ಟೆಲ್ ಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಬೇಗನೇ ಕಣ್ಣಿನ ಬೇನೆ ಕಾಣಿಸಿಕೊಳ್ಳುತ್ತಿದೆ. ಊಟ, ಕೊಠಡಿಗಳಲ್ಲಿ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಇರುವುದರಿಂದ ಬೇಗನೇ ಒಬ್ಬರಿಂದ ಒಬ್ಬರಿಗೆ ಸೋಂಕು ತಗುಲುತ್ತಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬಿಸಿಲಿನಲ್ಲಿ ಒಂದು ರೀತಿಯ ಸಮಸ್ಯೆಯಾದರೆ ಮಳೆಗಾಲದಲ್ಲಿ ಒಂದು ರೀತಿಯ ಸಮಸ್ಯೆ ಕಾಡುತ್ತದೆ. ಕಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಕೆಲವೊಂದು ಬ್ಯಾಕ್ಟೀರಿಯಾ ಹಾಗು ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಕಣ್ಣು ಕೆಂಪಾಗುವುದು ಸಹ ಕಂಡು ಬರುತ್ತದೆ.
ಪೋಷಕರು ಏನು ಹೇಳುತ್ತಾರೆ…?
ನಗರದ ಹಲವು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಕಣ್ಣಿನ ಬೇನೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಕೇಳುತ್ತಿದ್ದಂತೆ ಆತಂಕ ಶುರುವಾಗಿತ್ತು. ಆದ್ರೆ, ಮಕ್ಕಳು ಸುಸ್ತಾಗುತ್ತದೆ ಎನ್ನುತ್ತಾರೆ. ಕೆಲ ಮಕ್ಕಳ ಕಣ್ಣು ಊತುಕೊಂಡಿವೆ. ಕೆಂಪಾಗಾಗಿವೆ, ಪಿಸಿರು ಜಾಸ್ತಿ ಬರುತ್ತಿತ್ತು. ಆತಂಕಕ್ಕೂ ಕಾರಣ ಆಗಿತ್ತು. ಸಾವಿರಾರು ಮಕ್ಕಳಿಗೆ ಈ ಸೋಂಕು ತಗುಲಿದ್ದು, ವೈದ್ಯರ ಬಳಿ ತೋರಿಸಿದ ಬಳಿಕ ನಿಟ್ಟುಸಿರುಬಿಟ್ಟಿದ್ದೇವೆ ಎನ್ನುತ್ತಾರೆ ಪೋಷಕರು.
Child Eye Problem, Eye, Eye Viras, Eye Tension, Davanagere News, Davanagere Suddi, Davanagere News Updates, Davanagere, Davanagere Suddi Updates
Comments 6