ದಾವಣಗೆರೆ: ಶಾಮನೂರಿನ ಬಿಜೆಪಿಯ ಹಿರಿಯ ಧುರೀಣ ಚಂದ್ರಶೇಖರ್ ಸಂಕೊಳ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿ ಹೋಗಿದ್ದಾರೆ. ಆದರೆ, ಸಂಕೊಳ್ ಸಾವಿಗೆ ಶಾಮನೂರು ಮಮ್ಮಲ ಮರುಗುತ್ತಿದೆ. ಸಾಲದ ಸುಳಿಗೆ ನಾಯಕನೊಬ್ಬ ಜೀವವನ್ನೇ ಕಳೆದುಕೊಂಡು ಬಿಟ್ಟಿದ್ದಾರೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ. ಸ್ನೇಹಿತರು, ಸಂಬಂಧಿಕರು ಮೃತರ ಸಾವಿಗೆ ಆಘಾತ ವ್ಯಕ್ತಪಡಿಸಿದ್ದರೆ ಯಾರೂ ಊಹಿಸದ ರೀತಿಯಲ್ಲಿ ಜನನಾಯಕ ಎಂಬ ಹೆಸರು ಪಡೆದಿದ್ದ ನಾಯಕನೊಬ್ಬನ ಅಂತ್ಯ ಆಗಿ ಹೋಗಿದೆ.
READ ALSO THIS STORY: EXCLUSIVE: ಶಾಸಕನಾಗಿ ಜನಸೇವೆ ಮಾಡ್ಬೇಕೆಂಬ ಕನಸು ಕಂಡಿದ್ದ ನೀರು ಕೊಟ್ಟ ಭಗೀರಥ ಚಂದ್ರಶೇಖರ್ ಸಂಕೊಳ್ ಸಾಲದ ಸುಳಿಗೆ ಸಿಲುಕಿದ್ದೇಗೆ? ಮಕ್ಕಳು ಆತ್ಮಹತ್ಯೆ ಯತ್ನ ಮಾಡಿದ್ಯಾಕೆ?
ಇನ್ನು ಸಂಬಂಧಿಕರು ಚಂದ್ರಶೇಖರ್ ಸಂಕೊಳ್ ಸಂಬಂಧಿಕರು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಸಂಕೊಳ್ ಅತ್ತೆ ಮಗ ಕರಿಬಸಣ್ಣ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕೆಲವು ಸ್ಫೋಟಕ ವಿಚಾರ ಹಂಚಿಕೊಂಡಿದ್ದಾರೆ.
ಚಂದ್ರಶೇಖರ್ ಸಂಕೊಳ್ ತುಂಬಾನೇ ಬುದ್ಧಿವಂತ. ಅಷ್ಟೇ ಹಠವಾದಿ. ರಾಜಕೀಯ ಬಿಟ್ಟು ದುಡಿಮೆ ಮಾಡು ಎಂದು ಹಲವು ಬಾರಿ ನಾವೇ ಹೇಳಿದ್ದೆವು. ಆದರೂ ನಿಮಗೆ ಗೊತ್ತಾಗಲ್ಲ. ಜನಸೇವೆ ಮಾಡಬೇಕು, ಜನರಿಗೆ ಒಳಿತು ಮಾಡಬೇಕೆಂಬ ಕನಸು ಕಂಡಿದ್ದರು. ನಾವು ಹಲವು ಬಾರಿ ರಾಜಕೀಯ ಬೇಡ, ವ್ಯಾಪಾರ ಮಾಡಿಕೊಂಡು ಆರಾಮಾಗಿರು ಎಂದು ಹೇಳುತ್ತಿದ್ದೆವು. ಆದರೆ ನಿಮಗೆ ಗೊತ್ತಿಲ್ಲ ಸುಮ್ಮನಿದ್ದುಬಿಡಿ ಎಂದು ಹೇಳುತ್ತಿದ್ದ ಎಂದು ತಿಳಿಸಿದ್ದಾರೆ.
ಅಂಗಡಿ ವ್ಯವಹಾರ ಮತ್ತು ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಮನೂರು ಶಿವಶಂಕರಪ್ಪರು ನನಗೆ ಸರಿಪಡಿಸಿಕೋ ಎಂದು ಸಲಹೆ ನೀಡಿದ್ದರು. ಮನೆಗೆ ಬಂದು ಬುದ್ದಿವಾದವನ್ನೂ ನನಗೆ ಹೇಳಿದ್ದರು. ನಾನು ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿ ಬಿಟ್ಟುಬಿಡಿ. ಬೇರೆ ಉದ್ಯೋಗ ಮಾಡಿ ಎಂದು ಸಲಹೆ ನೀಡಿದ್ದೆ. ಆದರೆ ಅಂಗಡಿ ಬಿಡಲು ಒಪ್ಪಲಿಲ್ಲ. ಸುಮಾರು 40ರಿಂದ 50 ಲಕ್ಷ ರೂಪಾಯಿ ಮೌಲ್ಯದ ಸಿಮೆಂಟ್, ಸ್ಯಾನಿಟರಿ, ಕಬ್ಬಿಣ ಸೇರಿದಂತೆ ಇತರೆ ವಸ್ತುಗಳ ದೊಡ್ಡ ಅಂಗಡಿ ಮಾಡಿದ್ದರು. ಕಷ್ಟ ಎಂದಾದರೆ ಮಾರಾಟ ಮಾಡೋಣ, ಇಲ್ಲವೇ ಹರಾಜು ಹಾಕೋಣ. ಹಣ ಬರುತ್ತದೆ ಆದಷ್ಟು ಸಾಲ ತೀರಿಸೋಣ ಎಂದರೂ ಕೇಳಲಿಲ್ಲ. ನಾನೇ ಬಾಡಿಗೆ ನೀಡಲು ಆರು ಲಕ್ಷ ರೂಪಾಯಿ ನೀಡಿದ್ದೆ. ನಾವು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಹಾಗಾಗಿ ಸುಮ್ಮನಾಗಿಬಿಟ್ಟಿದ್ದೆ ಎಂದು ಕರಿಬಸಪ್ಪ ಅವರು ನೆನಪಿಸಿಕೊಂಡರು.
ಸ್ಯಾನಿಟರಿ, ಕಬ್ಬು, ಸಿಮೆಂಟ್ ದೊಡ್ಡ ಪ್ರಮಾಣದಲ್ಲಿ ಅಂಗಡಿ ಮಾಡಿದ್ದರು. ನಷ್ಟವಾಗಿತ್ತು. ಇದರಿಂದ ಮಕ್ಕಳೂ ನೊಂದಿದ್ದರು. ಚಂದ್ರಶೇಖರ್ ಸಂಕೊಳ್ ತಂದೆ ಅವರು ಮಕ್ಕಳಿಗೆ ಮದುವೆ ಮಾಡೋಣ. ಮಗನಿಗೆ ಹುಡುಗಿ ಹುಡುಕಿ, ಮಗಳಿಗೆ ಹುಡುಗನನ್ನು ಹುಡುಕಿ ಎಂದಿದ್ದರು. ನಾವು ವಿಚಾರ ಮಾಡುತ್ತಿದ್ದೆವು. ಸಂಕೊಳ್ ಅವರು ತಂದೆಯೊಟ್ಟಿಗೂ ಹಠವಾದಿಯಾಗಿ ವರ್ತಿಸಿದ್ದ. ನನ್ನ ಮಕ್ಕಳ ಮದುವೆ ನಾನೇ ಮಾಡುತ್ತೇನೆ ಎಂದು ಹೇಳುತ್ತಿದ್ದ
ಎಂದರು.
ವೈಯಕ್ತಿಕವಾಗಿ ಏನು ಆಗಿದೆಯೋ ಗೊತ್ತಿಲ್ಲ. ಒಳಗಿನ ವಿಚಾರ ಹೇಗೆ ಹೇಳೋದು. ಮಗ ಮತ್ತು ಮಗಳು ಆತ್ಮಹತ್ಯೆಗೆ ಯತ್ನಿಸಿದ ವಿಚಾರ ಪಕ್ಕದ ಮನೆಯವರಿಂದ ತಿಳಿದಿದೆ. ಮಗಳು ತುಂಬಾ ಗಂಭೀರವಾಗಿದ್ದಾಳೆ ಎಂಬ ಮಾಹಿತಿ ಸಿಕ್ಕಿ ತಕ್ಷಣ ತಾನೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನಿಸುತ್ತಿದೆ. ಆದರೆ ನಿಖರವಾಗಿ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಜನರಿಗೆ ಒಳ್ಳೆಯದು ಮಾಡಬೇಕೆಂಬ ಕನಸು ಕಂಡು ಕೊನೆಗೆ ಬೂದಿಯಾಗಿಯೇ ಹೋಗಿಬಿಟ್ಟಿದ್ದಾನೆ. ತೋಟ ಅವರದ್ದೇ. ಸಾಲ ಇದ್ದರೂ ಕೊಡುವವರು ಇದ್ದರು. ಎಷ್ಟೋ ಮಂದಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ. ಹಠ, ಚಟಕ್ಕೆ ಬಲಿಯಾದರು. ಮಾಡಿದ ಒಳ್ಳೆಯ ಕೆಲಸಗಳು ಹೊಳೆಯಲ್ಲಿ ಹುಣಸೇಹಣ್ಣು ತೊಳೆದ ಹಾಗೆ ಹಾಗೋಯ್ತು ಎಂದು ಬೇಸರ ವ್ಯಕ್ತಪಡಿಸಿದರು.





Leave a comment