ಬೆಂಗಳೂರು: ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ತ್ವರಿತ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದೆ.
ಇನ್ನು ಮುಂದೆ ಸಾರ್ವಜನಿಕರು ನಮೂನೆ–11ಬಿ ಖಾತೆಗಳನ್ನು ನಮೂನೆ–11ಎ ಆಗಿ ಪರಿವರ್ತಿಸಿಕೊಳ್ಳಲು ಮತ್ತು ಹೊಸ ಅಪಾರ್ಟ್ಮೆಂಟ್ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲೇ ಅವಕಾಶ ಕಲ್ಪಿಸಲಾಗಿದೆ.
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವಿಸ್ತೀರ್ಣವನ್ನು ಚದರ ಮೀಟರ್‌ಗೆ ಪರಿವರ್ತಿಸಿ ಅರ್ಜಿ ಸಲ್ಲಿಸಲು ಸಿಟಿಜನ್ ಇಂಟರ್ ಫೇಸ್ ಅನ್ನು ಅಪ್‌ಡೇಟ್ ಮಾಡಲಾಗುತ್ತಿದೆ.
ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಹಾಯಕ್ಕಾಗಿ ಪ್ರತ್ಯೇಕ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಇ-ಸ್ವತ್ತು 2.0 ತಂತ್ರಾಂಶದ ಪ್ರಮುಖ ಸುಧಾರಣೆಗಳುಖಾತೆ ಬದಲಾವಣೆ:
ನಮೂನೆ–11ಬಿ ಖಾತೆಗಳನ್ನು ನಮೂನೆ–11ಎ ಆಗಿ ಪರಿವರ್ತಿಸಲು ಈಗ ಗ್ರಾಮ ಪಂಚಾಯತಿ ಹಂತದಲ್ಲೇ ಅವಕಾಶವಿದೆ.
ಅಪಾರ್ಟ್ಮೆಂಟ್ ಅರ್ಜಿಗಳು:
ಹೊಸ ಬಹುಮಹಡಿ ಕಟ್ಟಡಗಳ ಅರ್ಜಿ ಸಲ್ಲಿಕೆ ಇನ್ನು ಮುಂದೆ ಸುಲಭ.
ವಿಸ್ತೀರ್ಣ ಪರಿವರ್ತನೆ:
ಸಿಟಿಜನ್ ಇಂಟರ್ ಫೇಸ್‌ನಲ್ಲಿ ಗುಂಟೆ ಮತ್ತು ಸೆಂಟ್ಸ್ ವಿಸ್ತೀರ್ಣವನ್ನು ಆಟೋಮ್ಯಾಟಿಕ್ ಆಗಿ ಚದರ ಮೀಟರ್‌ಗೆ (Sq. Meters) ಪರಿವರ್ತಿಸಿ ಅರ್ಜಿ ಸಲ್ಲಿಸಬಹುದು.
ತಾಂತ್ರಿಕ ಪರಿಹಾರ:
ಸದ್ಯ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ 10 ದಿನಗಳಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅರ್ಜಿಗಳ ಸ್ಥಿತಿಗತಿ (ಒಂದು ನೋಟದಲ್ಲಿ)ಒಟ್ಟು ಸ್ವೀಕೃತ ಅರ್ಜಿಗಳುವಿಲೇವಾರಿಯಾದ ಅರ್ಜಿಗಳುಬಾಕಿ ಇರುವ ಅರ್ಜಿಗಳು1,16,29695,26121,035
ಬಾಕಿ ಇರುವ ವಿವರ:
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹಂತದಲ್ಲಿ ಅತಿ ಹೆಚ್ಚು (12,378) ಅರ್ಜಿಗಳು ಅನುಮೋದನೆಗೆ ಕಾಯುತ್ತಿವೆ.
ಸಾರ್ವಜನಿಕರಿಗೆ ಸಹಾಯವಾಣಿ ಮತ್ತು ಸೌಲಭ್ಯಗಳುಮನೆಯಿಂದಲೇ ಅರ್ಜಿ:
ಗ್ರಾಮ ಪಂಚಾಯಿತಿಗೆ ಅಲೆಯುವ ಅಗತ್ಯವಿಲ್ಲದೆ ಆನ್‌ಲೈನ್ ಮೂಲಕವೇ ಆಸ್ತಿಗೆ ಸಂಬಂಧಿಸಿದ ನಮೂನೆಗಳನ್ನು ಪಡೆಯಬಹುದು.
ರಾಜ್ಯ ಮಟ್ಟದ ಸಹಾಯವಾಣಿ: 9483476000ಜಿಲ್ಲಾ ಮಟ್ಟದ ನೆರವು: ಜಿಲ್ಲಾ ಸಹಾಯವಾಣಿ ಸಂಖ್ಯೆಗಳಿಗಾಗಿ eswathu.karnataka.gov.in ಅಥವಾ panchatantra.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಗಮನಿಸಿ:
ಕೇಂದ್ರ ಸರ್ಕಾರದ NIC ತಂತ್ರಾಂಶದ ತಾಂತ್ರಿಕ ತೊಡಕುಗಳಿಂದಾಗಿ ವಿಳಂಬವಾಗುತ್ತಿದ್ದು, ಸರ್ಕಾರವು ಇದನ್ನು ಸರಿಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ.





Leave a comment