SUDDIKSHANA KANNADA NEWS/ DAVANAGERE/ DATE:25-10-2023
ಬೆಂಗಳೂರು: ಹುಲಿ ಉಗುರು ಧರಿಸಿ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಬಂಧನದ ಬಳಿಕ ಸೆಲೆಬ್ರಿಟಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ನವರಸ ನಾಯಕ ಜಗ್ಗೇಶ್, ನಟ ಕಂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ಹಾಗೂ ನಟ ರಾಕ್ ಲೈನ್ ವೆಂಕಟೇಶ್ ಸೇರಿ ಹಲವರಿಗೆ ಸಮಸ್ಯೆ ತಂದೊಡ್ಡಿದೆ. ಹುಲಿ ಉಗುರು ಧರಿಸಿದ ಆರೋಪ ಕೇಳಿ ಬಂದಿದೆ. ಮಾತ್ರವಲ್ಲ, ಎಲ್ಲರ ಕೊರಳಲಿದ್ದ ಹುಲಿ ಉಗುರು ಇರುವ ಬಂಗಾರವಿದ್ದ ಫೋಟೋಗಳು ವೈರಲ್ ಆಗಿವೆ. ಆದ್ರೆ, ಇದರ ಸತ್ಯಾಸತ್ಯತೆ ತಿಳಿಯಬೇಕಿದೆ.
ವರ್ತೂರು ಸಂತೋಷ್ ಬಂಧನದ ಬಳಿಕ ಅರಣ್ಯ ಇಲಾಖೆಯು ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಈ ಬೆಳವಣಿಗೆಗಳ ನಡುವೆ ಸಚಿವ ಈಶ್ವರ್ ಖಂಡ್ರೆ ಎಷ್ಟೇ ಪ್ರಭಾವಿಗಳಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಬಡವ, ಮಧ್ಯಮ ಹಾಗೂ ಶ್ರೀಮಂತ ಎಂಬುದಿಲ್ಲ. ಎಷ್ಟೇ ದೊಡ್ಡವರೂ ಹುಲಿ ಉಗುರು ಧರಿಸಿದ್ದರೆ ತಪ್ಪೇ. ಈ ಸಂಬಂಧ ಸರ್ಕಾರ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಅರಣ್ಯಾಧಿಕಾರಿಗಳು ಪ್ರಕರಣದ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ನವರಸ ನಾಯಕ ಜಗ್ಗೇಶ್, ನಟ ಕಂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ಹಾಗೂ ನಟ ರಾಕ್ ಲೈನ್ ವೆಂಕಟೇಶ್ ಸೇರಿ ಹಲವರು ಧರಿಸಿದ್ದ ಹುಲಿ ಉಗುರಿನ ಕುರಿತ ಸತ್ಯಾಸತ್ಯತೆ ಪರಿಶೀಲಿಸತೊಡಗಿದ್ದಾರೆ.
ಇನ್ನು ವರ್ತೂರು ಸಂತೋಷ್ ಬಂಧನದ ಬಳಿಕ ಹೋರಾಟಗಳು, ಪ್ರತಿಭಟನೆಗಳು ಆರಂಭವಾಗಿವೆ. ವರ್ತೂರಿನಲ್ಲಿ ಸಂತೋಷ್ ಪರ ಪ್ರತಿಭಟನೆ ನಡೆಸಲಾಗಿದೆ. ಯಾರೋ ಒಬ್ಬರು ಮಾಡಿದ ಷಡ್ಯಂತ್ರದಿಂದ ಈ ಕೃತ್ಯ ಎಸಗಲಾಗಿದೆ. ಜೊತೆಗೆ ವರ್ತೂರು ಸಂತೋಷ್ ಬೆಳವಣಿಗೆ ಸಹಿಸದೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ದರ್ಶನ್ ತೂಗುದೀಪ, ರಾಕ್ ಲೈನ್ ವೆಂಕಟೇಶ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಅವರು ಧರಿಸಿದ್ದ ಫೋಟೋಗಳು ನಮ್ಮ ಗಮನಕ್ಕೆ ಬಂದಿವೆ. ಕೆಲ ದೂರು ಬಂದಿದೆ. ಆದ್ರೆ. ಇದರ ನೈಜತೆ ಏನು ಎಂಬುದನ್ನು ಪರಿಶೀಲಿಸಬೇಕು. ಹುಲಿ ಉಗುರಿನ ನೈಜತೆ ಬಗ್ಗೆ ಕನ್ಫರ್ಮ್ ಮಾಡಿಕೊಳ್ಳಬೇಕು. ಹಸುವಿನ ಕೊಂಬು ಹುಲಿ ಉಗುರು ಅಂತಾ ಮಾರಾಟ ಮಾಲಾಗುತ್ತದೆ. ಹಾಗಾಗಿ, ಪರಿಶೀಲನೆ ಮಾಡಲಾಗುವುದು. ವರ್ತೂರು ಸಂತೋಷ್ ನನ್ನು ಏಕಾಏಕಿ ಬಹಂಧಿಸಿಲ್ಲ. ಲಾಕೆಟ್ ತಪಾಸಣೆ ಬಳಿಕ ನೈಜತೆ ಗೊತ್ತಾದ ಮೇಲೆ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.