• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, May 9, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ರಂಗೇರಿದ ಚುನಾವಣಾ ಅಖಾಡ: ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ 14,42,553 ಮತದಾರರು

Editor by Editor
May 9, 2023
in ದಾವಣಗೆರೆ
0
ರಂಗೇರಿದ ಚುನಾವಣಾ ಅಖಾಡ: ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ 14,42,553 ಮತದಾರರು

SUDDIKSHANA KANNADA NEWS/ DAVANAGERE/ DATE:09-05-2023

ದಾವಣಗೆರೆ (DAVANAGERE) : ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಾಗಿದೆ. ಈಗ ಮನೆ ಮನೆ ಪ್ರಚಾರ ಮಾತ್ರ. ಮೇ. 10ರಂದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸಂಜೆ
ಆರು ಗಂಟೆಗೆ ಮುಕ್ತಾಯವಾಗಲಿದೆ. ಮಂಗಳವಾರ ಮಧ್ಯಾಹ್ನ ಮಳೆ (RAIN) ಸುರಿದಿದ್ದು, ಬುಧವಾರವೂ ವರುಣನ ಆಗಮನ ಸಾಧ್ಯತೆ ಇದೆ. ಇದು ಅಭ್ಯರ್ಥಿಗಳಿಗೆ ತಲೆ ನೋವು ತಂದಿದೆ. ಏಳು ಕ್ಷೇತ್ರಗಳಲ್ಲಿಯೂ ಜಿದ್ದಾಜಿದ್ದಿನ ಪೈಪೋಟಿ
ಇದ್ದು ಅಭ್ಯರ್ಥಿಗಳ ಭವಿಷ್ಯ ಮತದಾರರು ಬರೆಯಲಿದ್ದಾರೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (CONGRESS) ನ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ (BJP) ಯ ಲೋಕಿಕೆರೆ ನಾಗರಾಜ್ ನಡುವೆ ತೀವ್ರ ಪೈಪೋಟಿ ಇದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (CONGRESS) ಅಭ್ಯರ್ಥಿ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿ(BJP)ಯ ಬಿ. ಜಿ. ಅಜಯ ಕುಮಾರ್ ನಡುವೆ ಹಣಾಹಣಿ. ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್(CONGRESS) ನ ನಂದಿಗಾವಿ ಶ್ರೀನಿವಾಸ್, ಬಿಜೆಪಿ(BJP)ಯ ಬಿ. ಪಿ. ಹರೀಶ್, ಜೆಡಿಎಸ್ (JDS) ನ ಹೆಚ್. ಎಸ್. ಶಿವಶಂಕರ್ ನಡುವೆ ತ್ರಿಕೋನ ಕದನ. ಹೊನ್ನಾಳಿಯಲ್ಲಿ ಬಿಜೆಪಿ(BJP) ಯ ಎಂ. ಪಿ. ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ (CONGRESS) ಡಿ. ಜಿ. ಶಾಂತನಗೌಡರ ನಡುವೆ ನೇರಾನೇರ ಹೋರಾಟ.

ಮಾಯಕೊಂಡ ಕ್ಷೇತ್ರದಲ್ಲಿಯೂ ತೀವ್ರ ಪೈಪೋಟಿ ಇದೆ. ಕಾಂಗ್ರೆಸ್ ನ ಬಸವಂತಪ್ಪ, ಬಿಜೆಪಿಯ ಬಸವರಾಜ್ ನಾಯ್ಕ, ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶ್ ಸ್ವಾಮಿ, ಜೆಡಿಎಸ್ ನ ಹೆಚ್. ಆನಂದಪ್ಪರ ನಡುವೆ ಪೈಪೋಟಿ ಏರ್ಪಟ್ಟಿದೆ. ಜಗಳೂರಿನಲ್ಲಿಯೂ ತ್ರಿಕೋನ ಕದನ ಇದ್ದು, ಕಾಂಗ್ರೆಸ್ ನ ದೇವೇಂದ್ರಪ್ಪ, ಬಿಜೆಪಿಯ ಎಸ್. ವಿ. ರಾಮಚಂದ್ರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ರಾಜೇಶ್ ಗೆಲುವಿಗಾಗಿ ಸೆಣಸಾಡುವರು. ಇನ್ನು ಚನ್ನಗಿರಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ನ ಶಿವಗಂಗಾ ಬಸವರಾಜ್, ಬಿಜೆಪಿಯ ಶಿವಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಸಿಎಂ ಜೆ. ಹೆಚ್. ಪಟೇಲ್ ರ ಸಹೋದರನ ಪುತ್ರ ತೇಜಸ್ವಿ ಪಟೇಲ್ ನಡುವೆ ಪೈಪೋಟಿ ಜೋರಾಗಿದೆ. ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಟ್ಟಿದೆ. ಹಾಗಾಗಿ ಮತದಾರನ ಮನದಲ್ಲಿ ಏನಿದೆ ಎಂಬುದು ಕದನ ಕುತೂಹಲ.

ಮತಪ್ರಚಾರ ಇಲ್ಲ;

ಮತಗಟ್ಟೆ 100 ಮೀಟರ್ ಒಳಗೆ ಯಾವುದೇ ಚುನಾವಣಾ ಮತ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿಗಳು, ಪಕ್ಷದವರು ಮತ ಕೇಂದ್ರದ 200 ಮೀಟರ್ ವ್ಯಾಪ್ತಿ ನಂತರ 1 ಟೇಬಲ್, 2 ಚೇರ್ ಹಾಗೂ 1 ಬ್ಯಾನರ್ 3 ಅಡಿ ಉದ್ದ ಮತ್ತು 1.5 ಅಡಿ ಎತ್ತರ ಇರುವುದನ್ನು ಉಪಯೋಗಿಸಿ ಮತದಾರರ ಪ್ರಚಾರ ಸಹಾಯವಾಣಿ ನಡೆಸಲು ಅವಕಾಶ ಇದೆ. ಮತ್ತು ಇವರು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕು, ಇದಕ್ಕೆ ಚುನಾವಣಾಧಿಕಾರಿಯ ಅನುಮತಿ ಕಡ್ಡಾಯವಾಗಿದೆ.

ಮತಗಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಯಾವುದೇ ಶಾಸಕರು, ಸಂಸದರು, ಸಚಿವರುಗಳು ಅಭ್ಯರ್ಥಿಗಳಿಗೆ ಏಜೆಂಟರು, ಮತದಾನ ಏಜೆಂಟರು, ಎಣಿಕೆ ಏಜೆಂಟರಾಗುವಂತಿಲ್ಲ. ಮತದಾನ ಕೇಂದ್ರದೊಳಗೆ ಮತಗಟ್ಟೆ ಅಧಿಕಾರಿಗಳಿಗೆ, ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ, ಚುನಾವಣಾ ಆಯೋಗದಿಂದ ನೇಮಕವಾದ ಅಧಿಕಾರಿಗಳಿಗೆ, ಅಭ್ಯರ್ಥಿಗಳ ಒಬ್ಬ ಏಜೆಂಟರಿಗೆ, ಅಂಧ, ದುರ್ಬಲ ಮತದಾರರ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಇರುತ್ತದೆ. ಮತದಾನದ ವೇಳೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ.

ಎಫಿಕ್ ಜೊತೆ ಇತರೆ 12 ದಾಖಲೆಗಳಿಗೆ ಅವಕಾಶ:

ಮತದಾನದ ವೇಳೆ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಜೊತೆಗೆ ಪರ್ಯಾಯವಾಗಿ ಇತರೆ 12 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ. ಆಧಾರ್ ಕಾರ್ಡ್, ಉದ್ಯೋಗ ಖಾತರಿ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಇಲಾಖೆಯಿಂದ ಪಡೆದ ಭಾವಚಿತ್ರವಿರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಆರ್‍ಜಿಐ ನೀಡಿದ ಎನ್‍ಪಿಆರ್, ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ಉದ್ದೆಮೆಗಳಲ್ಲಿ ನೀಡಿರುವ ಭಾವಚಿತ್ರವಿರುವ
ನೌಕರರ ಗುರುತಿನ ಚೀಟಿ, ಎಂ.ಪಿ, ಎಂ.ಎಲ್.ಸಿ.ಯವರು ನೀಡಿರುವ ಅಧಿಕೃತ ಗುರುತಿನ ಚೀಟಿ, ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಇಲಾಖೆಯಿಂದ ನೀಡಿರುವ ವಿಶೇಷಚೇತನ ಗುರುತಿನ ಚೀಟಿ, ಇವುಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

7 ಕ್ಷೇತ್ರಗಳಿಂದ 1685 ಮತದಾನ ಕೇಂದ್ರಗಳು;

ದಾವಣಗೆರೆ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿಂದ 1685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಜಗಳೂರು 262, ಹರಿಹರ 228, ದಾವಣಗೆರೆ ಉತ್ತರ 242, ದಕ್ಷಿಣ 214, ಮಾಯಕೊಂಡ 240, ಚನ್ನಗಿರಿ 254 ಹಾಗೂ ಹೊನ್ನಾಳಿ 245 ಮತಗಟ್ಟೆಗಳಿವೆ.

ಜಿಲ್ಲೆಯಲ್ಲಿ 1442553 ಮತದಾರರು:

ಜಿಲ್ಲೆಯ 7 ಕ್ಷೇತ್ರಗಳಿಂದ 721964 ಪುರುಷ, 720004 ಮಹಿಳೆಯರು, 118 ಇತರೆ, 467 ಸೇವಾ ಮತದಾರರು ಸೇರಿ 1442553 ಮತದಾರರಿದ್ದಾರೆ.

ಇದರಲ್ಲಿ ಜಗಳೂರು 97690 ಪುರುಷ, 95257 ಮಹಿಳೆ, 11 ಇತರೆ ಹಾಗೂ 70 ಸೇವಾ ಮತದಾರರು ಸೇರಿ 193028 ಮತದಾರರು. ಹರಿಹರ 103667 ಪುರುಷ, 103832 ಮಹಿಳೆ, 18 ಇತರೆ, 72 ಸೇವಾ ಮತದಾರರು ಸೇರಿ 207589. ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆ, 38 ಇತರೆ, 46 ಸೇವಾ ಮತದಾರರು ಸೇರಿ 241278.

ದಾವಣಗೆರೆ ದಕ್ಷಿಣ 104762 ಪುರುಷ, 105873 ಮಹಿಳೆ, 33 ಇತರೆ ಹಾಗೂ 40 ಸೇವಾ ಮತದಾರರು ಸೇರಿ 210708. ಮಾಯಕೊಂಡ 96491 ಪುರುಷ, 94803 ಮಹಿಳೆಯರು, 6 ಇತರೆ, 121 ಸೇವಾ ಮತದಾರರು ಸೇರಿ 191421. ಚನ್ನಗಿರಿ 100266 ಪುರುಷ, 99194 ಮಹಿಳೆ, 8 ಇತರೆ, 49 ಸೇವಾ ಮತದಾರರು ಸೇರಿ 199517.

ಹೊನ್ನಾಳಿ (HONNALI) 99735 ಪುರುಷ, 99204 ಮಹಿಳೆ, 4 ಇತರೆ ಹಾಗೂ 69 ಸೇವಾ ಮತದಾರರು ಸೇರಿ ಒಟ್ಟು 199012 ಮತದಾರರಿದ್ದಾರೆ.

ಮತದಾರರ ವಯೋಮಾನದ ವಿವರ; ಜಿಲ್ಲೆಯ 7 ಕ್ಷೇತ್ರಗಳಿಂದ 18-19 ರ ಯುವ ಹೊಸ ಮತದಾರರು 35454, 20 ರಿಂದ 29 ವರ್ಷದವರು 287161, 30-39 ರ ವಯೋಮಾನ 342321, 40-49 ವಯೋಮಾನ 306292, 50-59 ರ ವಯೋಮಾನ 227876, 60-69 ವಯೋಮಾನ 143794, 70-79 ರ ವಯೋಮಾನ 71589 ಮತ್ತು 80 ವರ್ಷ ಮೇಲ್ಪಟ್ಟು 27599 ಮತದಾರರಿದ್ದಾರೆ.

ವಿಶೇಷ ಚೇತನರಿಗೆ ಸ್ವಯಂಸೇವಕರು; ವಿಶೇಷಚೇತನ ಮತದಾರರಿಗೆ ಸಹಾಯಕರಾಗಿ ಜಗಳೂರು 30, ಹರಿಹರ 28, ದಾವಣಗೆರೆ ಉತ್ತರ 11, ದಕ್ಷಿಣ 11, ಮಾಯಕೊಂಡ 44, ಚನ್ನಗಿರಿ 46 ಹಾಗೂ ಹೊನ್ನಾಳಿ 49 ಸೇರಿ 219 ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ.

Tags: DAVANAGERE ELECTION PREPARAION
Next Post
14 ಸಾವಿರ ಕಿ.ಮೀ.ನಿಂದ ಬಂದ್ರೂ ಸಿಗಲಿಲ್ಲ ಮತ ಚಲಾಯಿಸುವ ಭಾಗ್ಯ: ನಾನು ತಪ್ಪು ಮಾಡಿಬಿಟ್ಟೆನಾ ಎಂದೆನಿಸುತ್ತಿದೆ…!

14 ಸಾವಿರ ಕಿ.ಮೀ.ನಿಂದ ಬಂದ್ರೂ ಸಿಗಲಿಲ್ಲ ಮತ ಚಲಾಯಿಸುವ ಭಾಗ್ಯ: ನಾನು ತಪ್ಪು ಮಾಡಿಬಿಟ್ಟೆನಾ ಎಂದೆನಿಸುತ್ತಿದೆ...!

Leave a Reply Cancel reply

Your email address will not be published. Required fields are marked *

Recent Posts

  • ಆಪರೇಷನ್ ಸಿಂಧೂರ ನಡೆದ ದಿನ ಜನಿಸಿದ ಮಗುವಿಗೆ “ಸಿಂಧೂರಿ” ಹೆಸರಿಟ್ಟ ದಂಪತಿ!
  • ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಗೆ ಸಾನಿಯಾ ಮಿರ್ಜಾ ಬಹುಪರಾಕ್!
  • ಪಾಕಿಸ್ತಾನದ ಹಲವು ನೆಲೆಗಳು ಉಡೀಸ್, 50 ಡ್ರೋಣ್ ಗಳು ಪೀಸ್ ಪೀಸ್!
  • ಪಾಕಿಸ್ತಾನದ F-16 ಮತ್ತು ಎರಡು JF-17 ವಿಮಾನ ಹೊಡೆದುರುಳಿಸಿದ ಭಾರತ!
  • ಈ ರಾಶಿಯವರಿಗೆ ವಿದೇಶ ಪ್ರವಾಸ ಯೋಗ: ಈ ರಾಶಿಯವರ ಜೊತೆ ನೀವು ಮದುವೆಯಾದರೆ ನಿಮ್ಮಂತ ಅದೃಷ್ಟಶಾಲಿ ಯಾರು ಇಲ್ಲ!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In