ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸೆ.5ಕ್ಕೆ ಈದ್‌ ಮಿಲಾದ್ ಹಬ್ಬದ ಆಚರಣೆ: ಸಂಚಾರ ಮಾರ್ಗ ಬದಲಾವಣೆ

On: September 2, 2025 7:01 PM
Follow Us:
ಈದ್ ಮಿಲಾದ್
---Advertisement---

ದಾವಣಗೆರೆ: ಸೆಪ್ಟೆಂಬರ್ 5 ರಂದು ಈದ್‌ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಕಡೆ ಮೆರವಣಿಗೆ ನಡೆಸುವುದರಿಂದ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಂದು ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

READ ALSO THIS STORY: ಶಾಮನೂರು ಮನೆತನದವರ ಮನೆ ಬಾಗಿಲು ಕಾಯುವ “ಪೊಮೆರೇನಿಯನ್ ನಾಯಿ” ದಾವಣಗೆರೆ ಎಸ್ಪಿ: ಶಾಸಕ ಬಿ. ಪಿ. ಹರೀಶ್ ಕೆಂಡಾಮಂಡಲ!

ಹರಿಹರದಿಂದ ದಾವಣಗೆರೆಗೆ ಹಳೆ ಪಿಬಿ ರಸ್ತೆಯ ಮೂಲಕ ಬರುವ ಎಲ್ಲಾ ಭಾರಿ ವಾಹನ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌ಹೆಚ್-48 ರಸ್ತೆಯಿಂದ ಹಾಗೂ ಚಿತ್ರದುರ್ಗ, ಕಡೆಯಿಂದ ಬರುವ ಎಲ್ಲಾ ವಾಹನಗಳು ಸಹ ಆವರಗೆರೆ ಹತ್ತಿರದ ಬಾಡಾಕ್ರಾಸ್ ಮುಖಾಂತರ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೇಟ್ ಕ್ರಾಸ್‌ನಿಂದ ಎಪಿಎಂಸಿ ಗೆ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳು ಅದೇ ಮಾರ್ಗವಾಗಿ ಬಾಡಾಕ್ರಾಸ್ ಮುಖಾಂತರ ಆವರಗೆರೆ ಕಡಿಯಿಂದ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಬೆಂಗಳೂರು ಬೆಳಗಾವಿ ಕಡೆಗೆ ಹೋಗುವುದು. ಬಸ್‌ಗಳು ಖಾಸಗಿ ಬಸ್‌ಗಳು ಸಹ ಅದೇ ಆರ್ಗವಾಗಿ ಬಂದು ಎಂ.ಜಿ ಸರ್ಕಲ್ ಮುಖೇನ ನೂತನ ಖಾಸಗಿ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಲು ಸೂಚಿಸಿದೆ.

ಚನ್ನಗಿರಿ ಮಾರ್ಗವಾಗಿ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬಾಡಾಕ್ರಾಸ್ ಮೂಲಕ ಆವರಗೆರೆ ಕಡೆಯಿಂದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಹಿಂತಿರುಗಬೇಕು. ಖಾಸಗಿ ಬಸ್‌ಗಳು ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ ಹತ್ತಿರದ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಕಲ್ಪಿಸಿದೆ. ಚನ್ನಗಿರಿ ಕಡೆಯಂದ ಬರುವ ಸರಕು ವಾಹನಗಳು ಸಹ ಅದೇ ಮಾರ್ಗವಾಗಿ ತೆರಳಿ ಎಪಿಎಂಸಿ ಮಾರ್ಕೇಟ್‌ನಲ್ಲಿ ಪಾರ್ಕಿಂಗ್ ಮಾಡಬೇಕು. ಜಗಳೂರು ಮತ್ತು ಹರಪನಹಳ್ಳಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಹಿಂತಿರುಗುವುದು. ಹಾಗೆಯೇ ಈ ಎರಡು ಮಾರ್ಗಗಳಿಂದ ಬರುವ ಖಾಸಗಿ ಬಸ್ ವೆಂಕಟೇಶ್ವರ ವೃತ್ತ, ಗಣೇಶ ಹೋಟೆಲ್ ವೃತ್ತ ಮುಖಾಂತರ ಎಪಿಎಂಸಿ ಮಾರ್ಕೆಟ್‌ನಲ್ಲಿ ಪಾರ್ಕಿಂಗ್ ಮಾಡಲು ಸೂಚಿಸಿದೆ. ಸರಕು ಲಾರಿಗಳು ಸಹ ಇದೇ ಮಾರ್ಗವಾಗಿ ಹಾಗೂ ಕೊಂಡಜ್ಜಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ರಿಂಗ್ ರಸ್ತೆ ಮತ್ತು ಬಂಬೂ ಬಜಾರ್ ಮುಖಾಂತರ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ವಾಪಸ್ ಹೋಗುವುದು. ಖಾಸಗಿ ಬಸ್‌ಗಳು ಅದೇ ಮಾರ್ಗವಾಗಿ ಬಂದು ಎಪಿಎಂಸಿ ಮಾರ್ಕೇಟ್ ನಲ್ಲಿ ಪಾರ್ಕಿಂಗ್ ಹಾಗೂ ಸರಕು ವಾಹನಗಳು ಸಹ ಇದೇ ಮಾರ್ಗವಾಗಿ ಸಂಚರಿಸಿ ಎಪಿಎಂಸಿ ಮಾರ್ಕೇಟ್‌ಗೆ ಸಂಚರಿಸಲು ಡಿಸಿ ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment