Home ದಾವಣಗೆರೆ ಕೆ.ಆರ್.ಎ.ಮು.ವಿ ಪ್ರವೇಶಾತಿ ಆರಂಭ: ದಾವಣಗೆರೆ ಪ್ರಾದೇಶಿಕ ಕೇಂದ್ರದಿಂದ ಅರ್ಜಿ ಆಹ್ವಾನ!
ದಾವಣಗೆರೆಬೆಂಗಳೂರು

ಕೆ.ಆರ್.ಎ.ಮು.ವಿ ಪ್ರವೇಶಾತಿ ಆರಂಭ: ದಾವಣಗೆರೆ ಪ್ರಾದೇಶಿಕ ಕೇಂದ್ರದಿಂದ ಅರ್ಜಿ ಆಹ್ವಾನ!

Share
ದಾವಣಗೆರೆ
Share

ದಾವಣಗೆರೆ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ (ಜುಲೈಅವೃತ್ತಿ) ಪ್ರಥಮ ವರ್ಷದ ಬಿ.ಎ, ಬಿ.ಕಾಂ., ಬಿ.ಎಸ್‍ಸ್ಸಿ., ಬಿ.ಲಿಬ್‍ಐಎಸ್‍ಸ್ಸಿ., ಬಿ.ಸಿ.ಎ.,ಬಿ.ಬಿ.ಎ., ಬಿಎಸ್‍ಡಬ್ಲು., ಎಂ.ಎ, ಎಂ.ಕಾಂ., ಎಂ.ಎಎಂ.ಸಿ.ಜೆ., ಎಂ.ಲಿಬ್‍ಐಎಸ್‍ಸಿ., ಎಂ.ಬಿ.ಎ., ಎಂ.ಎಸ್ಸಿ.,  ಎಂ.ಸಿ.ಎ., ಎಂ.ಎಸ್‍ಡಬ್ಲು.,  ಮತ್ತು   ಪಿ.ಜಿ   ಡಿಪ್ಲೋಮಾ, ಡಿಪ್ಲೋಮಾ, ಸರ್ಟಿಪಿಕೇಟ್ ಕೋರ್ಸಗಳಿಗೆ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಜೂನ್ 20 ರಿಂದ ಪ್ರಾರಂಭವಾಗಿದ್ದು, ಎರಡು ಶೈಕ್ಷಣಿಕ ಕೋರ್ಸುಗಳನ್ನು ಏಕಕಾಲದಲ್ಲಿ ಒಂದು ಭೌತಿಕಕ್ರಮದಲ್ಲಿ ಮತ್ತೊಂದು ದೂರಶಿಕ್ಷಣ ಕ್ರಮದಲ್ಲಿ ಓದಲು ಅವಕಾಶವಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಕ.ರಾ.ಮು.ವಿ.ಯ ಅಧಿಕೃತ ವೆಬ್‍ಸೈಟ್‍www.ksoumysuru.ac.in  ಮೂಲಕ ಮೇಲ್ಕಂಡ ಪದವಿಗಳಿಗೆ,  ಕೋರ್ಸಗಳಿಗೆ ಆನ್‍ಲೈನ್ ಅಡಿಮಿಷನ್ ಪೋರ್ಟಲ್  ಮೂಲಕ ಅರ್ಜಿಯನ್ನು ಭರ್ತಿಮಾಡಿ, ದಾವಣಗೆರೆ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಬೇಟಿ ನೀಡಿ ಆನ್‍ಲೈನ್  ಮುಖಾಂತರ ಪ್ರವೇಶಾತಿ ಶುಲ್ಕವನ್ನು ಪಾವತಿಸಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ.

ಬಿಪಿಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಮತ್ತು ಆಟೋ, ಕ್ಯಾಬ್‍ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಅಲ್ಲದೇ ಕೋವಿಡ್-19 ನಿಂದಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ, ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ (ಮುಸ್ಲಿಂ, ಕ್ರಿಶ್ಚಿಯನ, ಜೈನ್, ಸಿಖ್, ಬುದ್ದಿಸ್ಟ್) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಅಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ವೀಕ್ಷಿಸುವುದು ಅಥವಾ ಸಹಾಯವಾಣಿ ಸಂಖ್ಯೆ: 8690544544 , 8800335638 ಅಥವಾ ಮೊ.ನಂ.7406612788, 9844926125, 9916009318, 8095939359, 9902517906 ಕರೆ ಮಾಡುವುದು ಅಥವಾ ಖುದ್ದಾಗಿಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ, ಶ್ರೀ ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು ಹಿಂಭಾಗ, ನಾಗನೂರು ರಸ್ತೆಯಲ್ಲಿರುವ ಕಛೇರಿಯನ್ನು ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರಾದ ರಾಧಿಕ.ಬಿ.ಆರ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *