SUDDIKSHANA KANNADA NEWS/ DAVANAGERE/DATE:25_08_2025
ದಾವಣಗೆರೆ: ನಗರದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ದೃಷ್ಠಿಯಿಂದ 12 ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿ ಮೂರ್ತಿಯನ್ನು ತಯಾರಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದಲೂ ಶಾಲೆಯಲ್ಲಿ ಪೇಪರ್ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆದುಕೊಂಡು ಬರುತ್ತಿದೆ.
ಈ ಸುದ್ದಿಯನ್ನೂ ಓದಿ: ಧರ್ಮದ ವಿರುದ್ಧ ಮಂಡಿಯೂರಿದ ಅಧರ್ಮ! ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರಚಿಸಿದ್ದ ರಾಕ್ಷಸರೆಲ್ಲರೂ ನಾಮಾವಶೇಷ ನಿಶ್ಚಿತ!
ಇಂದಿನ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಾಗುವ ಗಣೇಶ ಮೂರ್ತಿಗಳ ಪರಿಣಾಮವಾಗಿ ಪರಿಸರ ಮಾಲಿನ್ಯ ಸೇರಿದಂತೆ ಗಂಭೀರ ಸಮಸ್ಯೆಯಾಗುತ್ತಿದ್ದು, ಇದಕ್ಕೆ ವ್ಯತಿರಿಕ್ತ ಎನ್ನುವಂತೆ
ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣಪನನ್ನು ಕಳೆದ ಹತ್ತು ವರ್ಷಗಳಿಂದ ತಯಾರಿಸುತ್ತಿದ್ದಾರೆ.
ಗಣಪತಿ ಮೂರ್ತಿಯು 30 ಕೆ.ಜಿ. ಹಳೆಯ ನ್ಯೂಸ್ ಪೇಪರ್, 10 ಕೆ.ಜಿ. ಮೈದಾ ಅಂಟನ್ನು ಬಳಸಿ, ಹಾಗೂ ಬಿದಿರಿನಿಂದ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ ಅಹರ್ನಿಶಿ ಶ್ರಮಿಸಿದ್ದಾರೆ. ಹಂತ ಹಂತವಾಗಿ ಕಾಗದಗಳನ್ನು ಅಂಟಿಸಿ, ಆಕರ್ಷಕವಾಗಿ ಆಕಾರ ನೀಡಿದ ನಂತರ ಮೂರ್ತಿಗೆ ನೈಸರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪ್ರಕೃತಿಗೆ ಹಾನಿಯಾಗದಂತೆ ತಯಾರಿಸಿರುವುದು ಈ ಮೂರ್ತಿಯ ಪ್ರಮುಖ ವಿಶೇಷತೆ.ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ನಂದಿಕೋಲು, ಕುದುರೆ ಮುಂತಾದ ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಶಾಲೆಯ ಕಾರ್ಯದರ್ಶಿ ಡಾ. ಜಯಂತ್ ಅವರ ಕಲ್ಪನೆ, ಶಾಲೆಯ ಡ್ರಾಯಿಂಗ್ ಶಿಕ್ಷಕರ ಸಹಕಾರ ಹಾಗೂ ಡಾ. ಜಸ್ಟಿನ್ ಡಿಸೌಜ ಅವರ ಮಾರ್ಗದರ್ಶನ, ಇದು ಕಳೆದ ಹತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.