ಊಟ ಮಾಡಿದ ತಕ್ಷಣ ನಿದ್ರಿಸಬಾರದು ಹಾಗೂ ನೀರು ಕುಡಿಯಬಾರದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಕೆಲವರಿಗೆ ಊಟ ಮಾಡಿದ ತಕ್ಷಣ ಏನಾದರೂ ತಿನ್ನಬೇಕು ಎಂದೆನಿಸುತ್ತದೆ. ಆದರೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾತ್ರ ಮಾಡಲೇಬೇಡಿ. -ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಯಾವುದೇ ಕಾರಣಕ್ಕೂ ಊಟ ಮಾಡಿದ ತಕ್ಷಣ ಧೂಮಪಾನ ಮಾಡಬೇಡಿ. ಇದು ಕರುಳಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. -ಊಟ ಮಾಡಿದ ತಕ್ಷಣ ಸ್ನಾನ ಮಾಡಬೇಡಿ. ಇದರಿಂದ ರಕ್ತದ ಹರಿವು ಹೆಚ್ಚಾಗಿ ಜೀರ್ಣಕ್ರಿಯೆಗೆ ವಿಳಂಬವಾಗುವ ಸಂಭವವಿದೆ. -ಊಟದ ನಂತರ ಚಹಾ ಕುಡಿಯುವುದನ್ನು ತಪ್ಪಿಸಿ. ಇದರಲ್ಲಿರುವ ಕೆಫಿನ್ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ. -ಊಟದ ನಂತರ ಹಣ್ಣುಗಳನ್ನು ಸೇವಿಸಬಾರದು. ಯಾಕೆಂದರೆ ಹಣ್ಣುಗಳನ್ನು ಜೀರ್ಣಿಸಿಕೊಳ್ಳಲು ವಿಭಿನ್ನ ರೀತಿಯ ಕಿಣ್ವಗಳು ಬೇಕು. ಹಾಗಾಗಿ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಒಳ್ಳೆಯದು.