SUDDIKSHANA KANNADA NEWS/DAVANAGERE/DATE:24_10_2025
ಬೆಂಗಳೂರು: ಗ್ರಾಮೀಣ ಭಾಗಗಳಲ್ಲಿ ಆಸ್ತಿ ಪ್ರಮಾಣ ಪತ್ರ ಪಡೆಯಲು ಸುಲಭವಾಗುವಂತೆ ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ನ್ನು ಜಾರಿಗೊಳಿಸಿದೆ. ಈ ನಿಯಮಗಳ ಜಾರಿಯಿಂದ ಇ-ಸ್ವತ್ತು ಅಭಿಯಾನಕ್ಕೆ ರೆಕ್ಕೆ ಬಂದಿದ್ದು, ಒಂದು ಕೋಟಿ ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ವಿತರಿಸುವ ನಮ್ಮ ಗುರಿ ಸಾಧ್ಯವಾಗಲಿದೆ.
READ ALSO THIS STORY: ಮುಜುಗರ ತರುವ ಹೇಳಿಕೆಗೆ ಹೈಕಮಾಂಡ್ ಬ್ರೇಕ್ ಹಾಕಲೇಬೇಕು: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬುಸುಗುಟ್ಟಿದ ಬಸವರಾಜ್ ಶಿವಗಂಗಾ!
ಗ್ರಾಮೀಣ ಭಾಗದ ಜನರಿಗೆ ವ್ಯವಸ್ಥಿತವಾಗಿ ಎಲ್ಲಾ ಸೇವೆಗಳನ್ನು ನೀಡುವ ನಮ್ಮ ಸಂಕಲ್ಪ ನೆರವೇರಲಿದ್ದು, ನಮ್ಮ ಇ-ಸ್ವತ್ತು ಅಭಿಯಾನ ಯಶಸ್ವಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಸ್ವತ್ತು ಬಗ್ಗೆ ಮಾಹಿತಿ:
- ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿರುವ ಆಸ್ತಿಗಳ ಡಿಜಿಟಲ್ ದಾಖಲೆಗಳನ್ನು ಒದಗಿಸುವ ಆನ್‌ಲೈನ್ ವ್ಯವಸ್ಥೆ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ವ್ಯವಸ್ಥೆಯನ್ನು ನಿರ್ವಹಿಸುತ್ತದೆ.
- ಅರ್ಜಿ ಸಲ್ಲಿಕೆ ಮತ್ತು ಅನುಮೋದನೆ
- ಇ-ಸ್ವತ್ತು ಪ್ರಮಾಣಪತ್ರಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅನುಮೋದನೆ ನೀಡಲು ನಿಗದಿತ ಅವಧಿಯನ್ನು 15 ದಿನಗಳಿಗೆ ಇಳಿಸಲಾಗಿದೆ.
- ನಿಗದಿತ ಸಮಯದೊಳಗೆ ಅನುಮೋದನೆ ನೀಡದಿದ್ದರೆ, ಸ್ವಯಂಚಾಲಿತ ಅನುಮೋದನೆಗೆ ಅವಕಾಶವಿದೆ.
ಮುಖ್ಯ ದಾಖಲೆಗಳು:
ಫಾರ್ಮ್-9: ಆಸ್ತಿಯ ಮಾಲೀಕತ್ವದ ವಿವರಗಳನ್ನು ನೀಡುತ್ತದೆ.
ಫಾರ್ಮ್-11: ಆಸ್ತಿಯ ತೆರಿಗೆ ವಿವರಗಳನ್ನು ಒಳಗೊಂಡಿರುತ್ತದೆ.
ಇ-ಸ್ವತ್ತು ಪ್ರಯೋಜನಗಳ ಬಗ್ಗೆ ಮಾಹಿತಿ
- ಆಸ್ತಿಯ ಮಾಲೀಕತ್ವವನ್ನು ನಿಖರವಾಗಿ ದೃಢೀಕರಿಸುತ್ತದೆ.
- ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮತ್ತು ಆಸ್ತಿಯನ್ನು ಮಾರಾಟ ಮಾಡಲು ಇದು ಕಡ್ಡಾಯವಾಗಿದೆ.
- ಆಸ್ತಿ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಿಸುತ್ತದೆ.
- ಅನಧಿಕೃತ ಪ್ಲಾಟ್‌ಗಳ ನೋಂದಣಿಯನ್ನು ನಿಯಂತ್ರಿಸುತ್ತದೆ.
- ಆಸ್ತಿ ಮಾಲೀಕರು ಆನ್‌ಲೈನ್ ಮೂಲಕ ತಮ್ಮ ಆಸ್ತಿ ಮಾಹಿತಿಗಳನ್ನು ಪರಿಶೀಲಿಸಬಹುದು ಮತ್ತು ತಪ್ಪುಗಳಿದ್ದರೆ ಸರಿಪಡಿಸಬಹುದು.







