SUDDIKSHANA KANNADA NEWS/ DAVANAGERE/ DATE:31_07_2025
ಶಿವಮೊಗ್ಗ: ಕೃಷಿ ಜಮೀನುಗಳ ಮಾಲೀಕರು ಮೃತರಾದಲ್ಲಿ ಸದರಿ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಸರಕಾರದಿಂದ ಇ-ಪೌತಿ ಆಂದೋಲನದ ಮೂಲಕ ಶಿವಮೊಗ್ಗ ತಾಲ್ಲೂಕಿನ ಜಮೀನುಗಳನ್ನು ಉಚಿತವಾಗಿ ವಾರಸತ್ವದ ವಂಶಾವಳಿ ಪ್ರಕಾರ ಪಹಣಿ ಪತ್ರಿಕೆ ಮಾಡಿಕೊಡಲಾಗುತ್ತಿದೆ.
ಬೇಕಾದ ದಾಖಲೆಗಳು:
- ಜಮೀನುಗಳನ್ನು ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ ನೀಡಬೇಕು
- ವಂಶವೃಕ್ಷ
- ವಾರಸುದಾರರ ಆಧಾರ್ ಕಾರ್ಡ್
ಈ ದಾಖಲೆಗಳು ಸೇರಿದಂತೆ ಪೂರಕ ಎಲ್ಲಾ ದಾಖಲೆಗಳನ್ನು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳ ಹತ್ತಿರ ಸಲ್ಲಿಸಿ ಭೂ ಮಾಲೀಕರು ಮೃತರಾಗಿರುವ ಜಮೀನುಗಳ ವಾರಸುದಾರರಿಗೆ ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನದ ಮೂಲಕ ಪಹಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ.
ಸಾರ್ವಜನಿಕರು ಈ ಬಗ್ಗೆ ಮದ್ಯವರ್ತಿಗಳಿಗೆ ಅವಕಾಶ ಕೊಡದೇ ನೇರವಾಗಿ ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳನ್ನು ಹಾಗೂ ರಾಜಸ್ವ ನಿರೀಕ್ಷಕರನ್ನು ಭೇಟಿ ಮಾಡಿ ಉಚಿತವಾಗಿ ನಿಮ್ಮ ಜಮೀನಿನ ಖಾತೆಯನ್ನು ಬದಲಾಯಿಸಿಕೊಳ್ಳಲು ತಿಳಿಸಿದೆ. ಇ-ಪೌತಿ ಆಂದೋಲನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಇ-ಪೌತಿ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರಾಜೀವ್ ವಿ ಎಸ್ ತಿಳಿಸಿದ್ದಾರೆ.