SUDDIKSHANA KANNADA NEWS/ DAVANAGERE/ DATE:13-03-2024
ದಾವಣಗೆರೆ: ದಾವಣಗೆರೆ ನಗರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಈ ಕೆಳಕಂಡ ಸ್ಥಳಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾರ್ಚ್ 18 ರಿಂದ 21 ರವರೆಗೆ ದಾವಣಗೆರೆ ನಗರದ ವಿರಕ್ತ ಮಠ, ದೊಡ್ಡಪೇಟೆ, ನಗರ ಕುಟುಂಬ ಕಲ್ಯಾಣ ಕೇಂದ್ರ-1, ದೊಡ್ಡಪೇಟೆ, ಎಸ್.ವಿ.ಎಸ್ ಶಾಲೆ, ಎಸ್.ಕೆ.ಪಿ. ರಸ್ತೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘ
(ರಿ), #708, ಎಸ್.ಕೆ.ಪಿ. ದೇವಸ್ಥಾನದ ರಸ್ತೆ , ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಎಸ್.ಕೆ.ಪಿ. ರಸ್ತೆ, ನಾಮದೇವ ಸಿಂಪಿ ಕಲ್ಯಾಣ ಮಂಟಪ, ದೊಡ್ಡಪೇಟೆ ಇಲ್ಲಿನ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿರಿಸಲು ಸಹಕರಿಸುವಂತೆ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.